ವಿಷಯಕ್ಕೆ ಹೋಗಿ

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು.
ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು.

2. "ನೀನು ತುಂಬಾ ಸುಂದರಿ"
"ನೀನು ತುಂಬಾ ತುಂಟ"

3."ನಿನಗೆ ವಯಸ್ಸಾಯ್ತು ಕಣೆ"
"ನಿಮಗೆ ಕೈಲಾಗಲ್ಲ"

4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ.
ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ"

5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ.

6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು.
ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ.

7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು.

8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ.


9. ಎರಡು ಸಾಲಿನ ಕಥೆ ಹೇಳಲೆಂದು ಅವನು ಅಣಿಯಾದ.
ಅವಳ ನೆನಪಾಯ್ತು...... ಮೊದಲ ಸಾಲೇ ಮರೆತು ಹೋಯ್ತು.

10. ತ್ಸುನಾಮಿ ಹೊಡೆದು ಊರು, ಮನೆ, ಕಟ್ಟಡಗಳ ಜೊತೆ ಎಲ್ಲರನ್ನೂ ಕೊಚ್ಚಿಕೊಂಡು ಹೋಗಿತ್ತು. ಒಬ್ಬಾತನ ಮೊದಲ ಹೆಂಡತಿಯ ಆರು ವರ್ಷದ ಮಗು ಅದು ಹೇಗೋ ಬದುಕುಳಿದು ತನ್ನ ಆಟದ ಸಾಮಾನುಗಳನ್ನು ಹುಡುಕುತ್ತಿತ್ತು.
 
11. ದಿನವೂ ಪ್ರೇಮ ಪತ್ರವನ್ನು ನನ್ನಿಂದಲೇ ಬರೆಸಿಕೊಂಡು ಹೋಗುತ್ತಿದ್ದ.
ಕೊನೆಗೊಂದು ದಿನ ಆತ್ಮಹತ್ಯ ಪತ್ರವನ್ನು ಮಾತ್ರ ತಾನೇ ಬರೆದ.

12. ಒಂದು ಎತ್ತು ಇನ್ನೊಂದು ಎತ್ತಿಗೆ ಹೇಳಿತು "ಈ ಮನುಷ್ಯನ ಗಾಡಿ ಎಳೆದುಕೊಂಡು ಎಷ್ಟು ದಿನ ಅಂತ ಬದುಕೋದು? ಆ ಬೆಟ್ಟದಲ್ಲಿ ತುಂಬಾ ಹುಲ್ಲು ಬೆಳೆದಿದೆ, ಅಲ್ಲಿ ಹೋಗಿ ತಿಂದುಕೊಂಡು ಆರಾಮಾಗಿ ಇರೋಣವೇ?"
ಇನ್ನೊಂದು ಎತ್ತು ಹೇಳಿತು "ಅಲ್ಲಿ ಸಂಜೆಯಾದ ನಂತರ ನಮ್ಮನ್ನು ಕಟ್ಟಿ ಹಾಕಲು ಯಾರೂ ಇರಲ್ಲ, ಏನು ಮಾಡೋದು ?"

13. ಅಳುತ್ತಾ ಕುಳಿತಿದ್ದ ಮಗನನ್ನು ಸಮಾಧಾನ ಪಡಿಸುತ್ತಾ ಅಪ್ಪ ಹೇಳಿದ.. "ಅಳಬೇಡ ಕಂದ, ಅವಳು ಹೋದರೆ ಏನಂತೆ. ಇನ್ನೊಬ್ಬಳನ್ನು ಮನೆಗೆ ತಂದರಾಯ್ತು."
ಮಗ ಅಳುತ್ತಾ ನುಡಿದ.. "ತರಬಹುದು ಅಪ್ಪಾ.. ಆದರೆ ಆಕೆ ನನಗೆ ಚಿಕ್ಕಮ್ಮ ಆಗುತ್ತಾಳೆಯೇ ಹೊರತೂ ಹೆತ್ತಮ್ಮ ಆಗುವುದಿಲ್ಲವಲ್ಲ?"

14. ಹದಿನೈದು ವರ್ಷದ ಹಿಂದೆ ನಾನು ಬಾಲಕನಾಗಿದ್ದಾಗ ಆ ದೀಪಾವಳಿಯನ್ನು ತುಂಬಾ ಖುಶಿಯಿಂದ ಪಟಾಕಿ ಸಿಡಿಸಿ ಕೊಂಡಾಡಿದೆ. ಎಷ್ಟೊಂದು ಕೊಂಡಾಡಿದೆನೆಂದರೆ ಇಂದಿಗೂ ನನಗೆ ದೃಷ್ಟಿ ಬಂದಿಲ್ಲ.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಗುಡುಗು ಮಿಂಚು ಹೇಳಿದ್ದಾರೆ…
@ Bharath S Gowda

ನಿಜ, ಅವ್ಯಾವೂ ಕವಿತೆಗಳಲ್ಲ. ಕವಿತೆ ಅಂತ ನಿಮಗೆ ಯಾರು ಹೇಳಿದರು ? ಸರಿಯಾಗಿ ಕಣ್ಣು ಬಿಟ್ಟು ನೋಡಿ. ಅವು "ನಾಲ್ಕು ಎರಡು ಸಾಲಿನ ಕತೆಗಳು"
ಅನಾಮಧೇಯಹೇಳಿದ್ದಾರೆ…
ನೀವು ಬರೆದಿರೋದು ಯಾವುದು ನಾಲ್ಕು ಎರಡು ಸಾಲಿನ ಕತೆಗಳು ಅಲ್ಲ ಸುಮ್ನೆ ಟೈಮ್ ಪಾಸುಗೆ ಏನ್ ಏನೋ ಪೋಸ್ಟ್ ಮಾಡಬೇಡಿ
ಗುಡುಗು ಮಿಂಚು ಹೇಳಿದ್ದಾರೆ…
ನಮಗೆ ಬರೆಯಲು ಬರಲ್ಲ ಗುರುವೆ. ಟೈಂ ಪಾಸ್‌ಗೆ ಏನೇನೋ ಬರೀತಿರ್ತೀವಿ. ಇಷ್ಟ ಇಲ್ಲಾಂದ್ರೆ ಓದಬೇಡಿ ಬಿಡಿ.