[ ಸಂಪ್ರದಾಯಸ್ಥರು ಓದಬೇಡಿ ]

ಹೊರಗೆ ಹರಡಿದ ಬೆಳುದಿಂಗಳ ಕಾಂತಿ
ಒಳಗೆ ನುಡಿದಿವೆ ಮೈ ವೀಣೆ ತಂತಿ
ನರನಾಡಿಗಳಲಿ ನುಸುಳಿ ಪಸರಿಸಿದ ಕಂಪನ
ನವಿರು ಭಾವನೆ ಕೆರಳಿಸಿ ಮೈ ರೋಮಾಂಚನ!
ಲಜ್ಜೆ ಲಾಸ್ಯ ಕಳೆದು ಸವಿದ ಕವಿದ ಸನಿಹ
ಲಕ್ಷ ಜೀವಕೋಶಗಳಲಿ ಜಿಗಿದ ಜೀವಮೋಹ
ಸಿಪ್ಪೆ ಸುಲಿದ ಬಾಳೆಹಣ್ಣಿನಂತೆ ಬೆತ್ತಲೆ
ಸುಗ್ಗಿ ಸಮಯದಲ್ಲಿ ನುಗ್ಗಿ ಬಂತು ಕತ್ತಲೆ!
ಹಬ್ಬಿ ತಬ್ಬಿ ಬಿಗಿದಂತೆ ಮರ ಬಳ್ಳಿ ಜಾಲ
ತುಟಿಯ ಜೇನು ಸವಿಯುವ ಪುಣ್ಯ ಕಾಲ
ಮುಟ್ಟಿ ತಟ್ಟಿ ಗಟ್ಟಿ ಬಿಗಿದು ಮೊಲೆ ಮರ್ದನ
ದೂರ ಘಟ್ಟದಾಚೆ ಹೆಡೆಯೆತ್ತಿದ ಮೋಹ ಮದನ
ನಿಗಿತು ಜಿಗಿದು ಅಂಬರಕ್ಕೆ ನೆಗೆದ ಕಬ್ಬ ಜಲ್ಲೆ
ಮಣಿಸಿ ತಣಿಸಿ ನಲಿಸಿ ಅಮೃತವನ್ನುಣಿಸಿದ ನಲ್ಲೆ
ಅಂಕೆ ಮೀರಿ ಜಿಂಕೆಯಂತೆ ನೆಗೆದ ಕಡೆಗೋಲ
ಹಿಡಿದು ತಡೆದು ಮೊಸರ ಗಡಿಗೆಯಲ್ಲಿಟ್ಟು ಕಡೆದು
ಉಕ್ಕಿ ಪಡೆದಂತೆ ಜೀವಜಾಲದ ಬೆಣ್ಣೆ!
ತಾಡಿಸಿ ಪೀಡಿಸಿ ಕಾಡಿಸಿ ನೋಯಿಸಿ
ನುಗ್ಗಿಸಿ ನರ್ತಿಸಿ ಕಾಮನೆಗಳ ತಾಂಡವವನಾಡಿದವಗೆ
ದಂಡಿಸಿ ದಹಿಸಿ ಬಯಸಿ ಪ್ರೋತ್ಸಾಹಿಸಿ
ಬಯಕೆಗಳ ಮಂಡಿಸಿ ಮುದ ನೀಡಿದಳೆನ್ನರಸಿ.
ಕಾಮೆಂಟ್‌ಗಳು