ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಲೋಕಾಯುಕ್ತ ಸಂತೋಷ್ ಹೆಗಡೆ ರಾಜೀನಾಮೆ

ಪ್ರಾಮಾಣಿಕರಿಗೆ ಕಾಲವಲ್ಲ ಅನ್ನುವುದು ಮತ್ತೊಮ್ಮೆ ಸಾಭೀತಾಗಿದೆ. ಬಹುಶಃ ಹೆಗ್ಡೆ ಅವರು ಯಡಿಯೂರಪ್ಪನವರ ಅಥವಾ ಗಣಿ ರೆಡ್ಡಿಗಳ ಎಂಜಲು ಕಾಸಿಗೆ ಕೈ ಒಡ್ಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಉಳಿದ ಹದಿನಾಲ್ಕು ತಿಂಗಳನ್ನು ಪೂರ್ಣಗೊಳಿಸುತ್ತಿದ್ದರು, ಮತ್ತು ಆಗ ಹೆಗ್ಡೆಯವರಿಗೆ ಅದ್ಧೂರಿ ಸನ್ಮಾನ ಸಹ ಸರ್ಕಾರದ ಕಡೆಯಿಂದಲೇ ದೊರೆಯುತ್ತಿತ್ತು.  ಹೆಗ್ಡೆಯವರು ಮಾಡಿದ ತಪ್ಪೆಂದರೆ ವೆಂಕಟಾಚಲಯ್ಯನವರಂತೆ ಆಸ್ಪತ್ರೆ, ಆರ್.ಟಿ.ಓ., ಸಬ್ ರಿಜಿಸ್ಟ್ರಾರ್ ಕಚೇರಿಗಳನ್ನು ಮಾತ್ರ ದಾಳಿ ಮಾಡದೇ ನಿಜವಾದ ಹೆಗ್ಗಣಗಳ ತಲೆಗೇ ಬಿಸಿನೀರು ಕಾಯಿಸ ಹೊರಟಿದ್ದು. ಆದರೆ ನಮ್ಮ ಬ್ರಷ್ಟ ವ್ಯವಸ್ಥೆ ಹೆಗ್ಡೆಯವರಿಗಿಂತಾ ತುಂಬಾ ಬಲಿಷ್ಟವಾಗಿದೆ. ಅದರ ಪರಿಣಾಮ ನಿಷ್ಠಾವಂತ ನ್ಯಾಯಮೂರ್ತಿಯೊಬ್ಬರು ಸೋತು ಹೋಗಿದ್ದಾರೆ. ಇದು ಅವರ ಸೋಲಲ್ಲ, ನಮ್ಮ ನಿಮ್ಮೆಲ್ಲರ ಸೋಲು.

ಭ್ರಷ್ಟಾಚಾರ ತಡೆಗೆ ಏನು ಮಾಡಬೇಕು ?

ಇದಕ್ಕೆ ಪರಿಹಾರವೆಂದರೆ ನೋಟುಗಳ ಮುದ್ರಣವನ್ನೇ ನಿಲ್ಲಿಸುವುದು. ಬದಲಿಗೆ ಎಲ್ಲರಿಗೂ ಒಂದು ಮಾಸ್ಟರ್ ಕಾರ್ಡ್ ಕೊಡುವುದು. ಅದಕ್ಕೆ ರಾಷ್ಟ್ರೀಯ ಗುರುತು ಪತ್ರದಂತೆಯೇ 15 ಅಂಕಿಗಳ ಒಂದು ಗುರುತಿನ ಸಂಖ್ಯೆಯನ್ನು ಕೊಡಬೇಕು. ಸುಮಾರು ಹತ್ತು ವರ್ಷ ವಯಸ್ಸಾಗುವಾಗ ಈ ಕಾರ್ಡ್ ಕೊಡಬಹುದು. ಅದು ಆ ವ್ಯಕ್ತಿಯ ವೈಯಕ್ತಿಕ ಖಾತೆಯಾಗಿರುತ್ತದೆ. ಎಲ್ಲಾ ವ್ಯವಹಾರವೂ ಅದರಲ್ಲೇ ನಡೆಯಬೇಕು. ಉದಾ ಆ ಹುಡುಗನಿಗೆ ಅವರಪ್ಪ ಹಣ ಕೊಡಬೇಕೆಂದರೆ ತನ್ನ ಖಾತೆಯಿಂದ ಆನ್‌ಲೈನ್ ಮುಖಾಂತರವೇ ವರ್ಗಾಯಿಸಬೇಕು. ಹಣ ವರ್ಗಾವಣೆ ಅವಕಾಶವನ್ನು ಎಟಿಎಂ, ಮೊಬೈಲ್ ಎಸ್.ಎಂ.ಎಸ್.ಗಳಲ್ಲೂ ಒದಗಿಸಿದರೆ ಸುಲಭವಾಗುತ್ತದೆ.  ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆಯಾಗಬೇಕೆಂದರೆ ಖಾತೆಯಿಂದ ಖಾತೆಗೇ ಹೋಗಬೇಕು. ಇದರಿಂದ ಸರ್ಕಾರಕ್ಕೆ ನಿಖರವಾದ ಲೆಕ್ಕ ಸಿಗುತ್ತದೆ. ತೆರಿಗೆಯನ್ನು ಅವರವರ ಖಾತೆಯಿಂದಲೇ ನೇರವಾಗಿ ಸರ್ಕಾರ ಪಡೆದುಕೊಳ್ಳಬಹುದಾದ್ದರಿಂದ ತೀರಾ ಕಡಿಮೆ ತೆರಿಗೆ ಇಟ್ಟರೂ ಸಾಕು. ತೆರಿಗೆ ಸೋರಿಕೆಯಾಗುವುದಿಲ್ಲ. ಹಣದ ಕಳ್ಳತನವಾಗುವುದಿಲ್ಲ. ಅಕಸ್ಮಾತ್ ಯಾರಾದರೂ ಬೆದರಿಸಿ ಹಣವನ್ನು ತಮ್ಮ ಖಾತೆಗೆ ವರ್ಗ ಮಾಡಿಸಿಕೊಂಡರೂ ಸಹ ನಂತರ ಸಿಕ್ಕಿ ಹಾಕಿಕೊಳ್ಳುತ್ತಾರೆ. ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳುವಾಗುವ ಭಯವಿರುವುದಿಲ್ಲ. ಕದ್ದವರು ಎಲ್ಲಾದರೂ ಮಾರಲೇಬೇಕು. ಆಗ ಆ ಹಣ ಎಲ್ಲಿಂದ ಬಂತು ಎಂದು ಕೆದಕಿದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅಧಿಕಾರಿಗಳು ಆದಾಯಕ್ಕಿ...

ಗೆಳತಿ ನಿನ್ನ ನೆನಪಾಗುತಿದೆ....

ಗೆಳತಿ ನಿನ್ನ ನೆನಪಾಗುತಿದೆ. ಸಂಜೆಯ ಗಾಳಿ ಬೀಸುತಿದೆ ಮಳೆ ಬರುವ ಸೂಚನೆ ನೀಡುತಿದೆ ಗೆಳತಿ ನಿನ್ನ ನೆನಪಾಗುತಿದೆ ಬಾನು ಕವಿಯುವಾಗ ಮಿನುಗೋ ಮೊದಲ ತಾರೆ ನನ್ನ ಕೆಲವು ದಿನಗಳಿಗೆ ಬೆಳದಿಂಗಳಾಗಿ ಬಾರೆ ನಿನ್ನ ಸೊಂಪಾದ ನೋಟ....... ನಿನ್ನ ಸೊಂಪಾದ ನೋಟ ಇನ್ನೂ ನೆನಪಿದೆ ಮರೆಯಲು ಹೋದರೆ ನನ್ನೇ ಮರೆಸುತಿದೆ ಗೆಳತಿ ನಿನ್ನ ನೆನಪಾಗುತಿದೆ.. ನನ್ನ ಬಾಳಲಿ ಹೊಸಬೆಳಕು ತಂದ ದೀಪವೇ ನೀನು ಬಿಟ್ಟೋದ ನೆರಳಲ್ಲೇ ನಿನ್ನ ಇಂದು ಕಾಣುತಿರುವೆ ಇಳೆಗೆ ಮಳೆಯೇ ಬಂಧು ಆದರೆ ...... ಇಳೆಗೆ ಮಳೆಯೇ ಬಂಧು ಆದರೆ ನನ್ನ ಎದೆಗೂಡಲ್ಲು ಇರಬೇಕಾದ ಮುತ್ತು ನೀನೆಯಲ್ಲವೇ ಗೆಳತಿ ನಿನ್ನ ನೆನಪಾಗಿದೆ ಚೇತನ್ .ಎನ್            http://www.orkut.co.in/Main#Profile?uid=1901888616466504924

ನೀನೆ ನೀನೆ ನೀನೆ ನೀನೆ....

ನೀನೆ ನೀನೆ ನೀನೆ ನೀನೆ, ನೀನೆ ನೀನೆ ನೀನೆ ನೀನೆ, ಒಂದು ಸಾರಿ ನಿನ್ನ ನೋಡಿ ಪ್ರತಿಸಾರಿ ಬೀಳುವಂತ ಮೋಡಿ, ಕದ್ದೆಯಲ್ಲೇ ಹೃದಯವ ಚೋರಿ ನೆನೆಪಿಗು ನೀನು ಸುಂದರ ದಾರಿ ತಪ್ಪಾಗದು ತಿರುಗಿ ನೋಡೇ ಕೊನೆ ಸಾರಿ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ ನೀನೆ, ಕನಸಲ್ಲಿ ಕಾಡದೆ ಕೊಲ್ಲಿ ಮನಸಲ್ಲಿ ಕೂರದೆ ಮಳ್ಳಿ ಎದೆಯೊಳಗೆ ಬಂದೆಯಾ ಒಲವ ಚೆಲ್ಲಿ , ನಗುವಾಗ ಚೆಂದ ಹಾಗುವ ಪುಳಕ ಮುನಿಸಾದಾಗ ನೋಡಲು ಏನೋ ತವಕ ಇರಬೇಕು ಈ ಕಾಲ ಕೊನೆತನಕ , ನಿನದೊಂದು ಬಗೆಗೆ ನಾನು ಬದಲಾಗೆ ಕಾರಣವೇನು ಕೆದಕಿದರು ಬಗೆಹರಿತಿಲ್ಲ ಈ ಸಂಶಯ , ನೂರಾರು ಕವಿಗಳ ಕೃತಿಯ ಬಿಡಿಸೋಕೆ ನನಗಿಲ್ಲ ಸಮಯ ನಿನ್ನದೊಂದೇ ಕಥೆಗೆ ನಾನು ತನುಮಯ ಬರೆದಿಡುವೆ ಮುಂದಿನ ಜನುಮಕು ಇದರ ಅನ್ವಯ .... ಚೇತನ್.ಎನ್ 

ದೀಪದ ಬೆಳಕಲ್ಲಿ ನಿನ್ನ ನೋಡುವೆ.........

ದೀಪದ ಬೆಳಕಲ್ಲಿ ನಿನ್ನ ನೋಡುವೆ, ತಂಗಾಳಿಯಾ ಅಲೆಯಾಗಿ ಕೆನ್ನೆ ಸವರಿ ಹೋಗುವೆ, ಕನಸು ಕೂಡ ನಿನ್ನಿಂದ ಏಕೋ ನೂತನವೆನಿಸಿದೆ , ಸೇರೆಯಾದಾಗ ಮನಸು ಇನ್ನು ಚೆಂದ ಅನಿಸಿದೆ , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ , ಕತ್ತಲೆಯಾದಾಗ ಜಗವು , ಸಹನೆ ಕಳೆದುಕೊಳ್ಳುತಿದೆ ಒಲವು, ಇದು ತಾರೆ ಎಣಿಸುವ ಕ್ಷಣವೂ, ನೀನೆ ಹೇಳು !!! ಮನಸಿಗೂ ಬೇಕು ತಲ್ಲಣ , ಬೆಳದಿಂಗಳಿಗಿಂತ ಇನ್ನಾವುದಿದೆ ನೂತನ, ದೂರದ ತೀರದಲ್ಲಿದೆ ಅಲೆಗಳ ನರ್ತನ, ಈಗ ನೀನೆ ನೋಡು , ಈ ಪ್ರೀತಿ ಈ ರೀತಿ ಭೂಮಿಗೆ ಸಾರಥಿಯಾಗಿದೆ ನೀ ಬರುವಾಗ ನಾನು, ಬೇಕೆಂತಲೇ ಹಿಂದೆ ಸರಿವೆ , ಕೋಪದಿಂದ ಬಂದು ನೀನು , ಅಪ್ಪಿಕೊಂಡಾಗ ಈ ಲೋಕವನ್ನೇ ಮರಿವೆ , ನಿನ್ನ ಬೊಂಬೆ ನಾನು , ನನಗೆಂದೆ ತಾನೇ ನೀನು, ಈಗ ನಿನ್ನಲ್ಲಿ ಇರೋದು ನಾನು, ನನ್ನಲ್ಲೂ ತಾನೇ ನೀನು , ಈ ರೀತಿ ಈ ಪ್ರೀತಿ ಭೂಮಿಗೆ ಸಾರಥಿಯಾಗಿದೆ.....    ಚೇತನ್.ಎನ್ 

ಕಾವಲು

ನಾವು ಭೇಟಿಯಾದಾಗೆಲ್ಲ  ಅವಳ ಕಣ್ಣು  ನನ್ನ ಕಣ್ಣುಗಳನ್ನೇ  ಕಾಯುತ್ತಿರುತ್ತವೆ...  ನನ್ನ ಕಣ್ಣು  ಅವಳ ದೇಹದ ಮೇಲೆಲ್ಲಾ  ಹರಿಯದಿರಲೆಂದು.

ಈ ರೀತಿಯ ಮೈಲ್ ಬಂದರೆ ಎಚ್ಚರಿಕೆಯಾಗಿರಿ

Gmail Account Alert < mail.gooogle.accounts@gmail.com > Subject: Your Account Will Expire To: yourid@gmail.com Your Account will expire soon if not updated. This is an automatically system generated Auto Account Expiry Notification.   For Enhanced Security Its now mandatory to update your security information which is required if you forget your password or account details.   Your Account will get Expired soon if your Security Information is not updated   Please click on the below link to update your security information    ww%w.g%m% ail.com/login.html/username=%maltisirsi%     Team Google ---------------- ಈ ರೀತಿಯ ಮೈಲ್ ಬಂದಾಗ ಬಂದ ಮೈಲ್ ವಿಳಾಸವನ್ನು ಸರಿಯಾಗಿ ಪರಿಶೀಲಿಸಿ. ಇದು ಜಿಮೈಲ್ ನಿಂದ ಬಂದ ಮೈಲ್ ಅಲ್ಲ. < mail.gooogle.accounts@gmail.com > ಇಲ್ಲಿ gooogle ನೋಡಿ. 3  ಓ ಗಳು ಇವೆ.  ಅವರು ಕ್ಲಿಕ್ ಮಾಡಲು ಹೇಳಿರುವ ww%w.g%m% ail.com/login.html/username=%maltisirsi%  ಲಿಂಕ್ ಕ್ಲಿಕ್ ಮಾಡಿದರೆ ಯಾವ ಜಾಲತಾಣಕ್ಕೆ ಹೋಗುತ್ತದೆ ಎಂದು ತಿಳಿಯಲು ಒಮ್ಮೆ ಸುಮ್ಮನೆ ಆ ಲಿಂಕ್ ಮೇಲೆ ಕರ್ಸರ್ ತೆಗೆದುಕೊಂಡು ಹೋಗಿ. ಆಗ ಬ್ರೌಸರ್‌ನ ಕೆಳ ಎಡ...