ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಬೆಂಗಳೂರು ಮಹಾನಗರ ಪಾಲಿಕೆಯ ಒತ್ತುವರಿ ಭೂಮಿ ತೆರವು ಯಾವಾಗ ?

ಪಾಲಿಕೆಯ ಸಾವಿರಾರು ಎಕರೆ ಭೂಮಿ ಬಲಾಢ್ಯರಿಂದ ಅತಿಕ್ರಮಣವಾಗಿದೆಯೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಒತ್ತುವರಿಯಲ್ಲಿ ಜನಪ್ರತಿನಿಧಿಗಳ ಬೇನಾಮಿ ವಂಚನೆ ಇರದೆ ಇವೆಲ್ಲಾ ನಡೆಯಲು ಸಾಧ್ಯವಿಲ್ಲ. ನಗರದ ಕೆರೆ ಕುಂಟೆಗಳು, ರಾಜಕಾಲುವೆಗಳು, ಹಳೆಯ ಗುಂಡಿತೋಪು ಜಾಗ, ಉದ್ಯಾನವನ, ಸರ್ಕಾರಿ ಕಚೇರಿಗೆ ಸೇರಿದ ಭೂಮಿ,  ಶಾಲೆಗಳ ಆಟದ ಮೈದಾನವೂ ಸೇರಿದಂತೆ ಪಾಲಿಕೆಯ ಭೂಮಿ ಅಕ್ರಮ ಒತ್ತುವರಿಯಾಗಿವೆ. ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ ಪಾಲಿಕೆ ವ್ಯಾಪ್ತಿಯ ಭೂ ಒತ್ತುವರಿ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪೂರಕ ದಾಖಲೆಗಳನ್ನು ಒದಗಿಸಿ ಭೂ ಒತ್ತುವರಿ ವಶಕ್ಕೆ ಶಿಫಾರಸು ಮಾಡಿರುತ್ತಾರೆ. ಆದರೆ ಈ ಸಂಬಂಧ ಪಾಲಿಕೆ ಆಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ ನಿರ್ಲಕ್ಷ್ಯ ತೋರಿದೆ. ಅತಿಕ್ರಮಿತ ಭೂಮಿ ವಶಪಡಿಸಿಕೊಂಡರೆ ಪಾಲಿಕೆಗೆ ದೊಡ್ಡ ಮಟ್ಟದ ಆಸ್ತಿ ಉಳಿಯಲಿದೆ. ಆದಾಯಕ್ಕೂ ಮೂಲವಾಗಲಿದೆ.  ಈ ಬಗ್ಗೆ ಬಿಬಿಎಂಪಿ ಮೇಯರ್ ಅವರಿಗೆ ಚಿಂತಿಸಲು ಸಮಯವಿಲ್ಲದಾಗಿದೆ. ನಿರೀಕ್ಷಿತ ಸಾಧನೆ ತೋರದೆ ಅವರು ಸ್ಥಾನ ತ್ಯಜಿಸುವ ಚಿಂತೆ ಅವರದು. ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಯಾವ ನಿರ್ಧಾರ ತಳೆಯುವರೋ ನೋಡಬೇಕಿದೆ. ಸತ್ಯ ನುಡಿದವರ ಮೇಲೆಯೇ ಗಧಾ ಪ್ರಹಾರ ! ಭೂಮಾಫಿಯಾದ ಕಬಂದ ಬಾಹುಗಳು ಎಷ್ಟು ಬಲಿಷ್ಟವಾಗಿವೆ ಎಂಬುದಕ್ಕೆ ಸತ್ಯ ನುಡಿದು ಈಗ ಸದನದ ಹಕ್ಕುಚ್ಯುತಿ ಎದುರಿಸುತ್ತಿರುವ ಪ್ರಾಮ...

ಕುಸಿಯುತ್ತಿರುವ ಕನ್ನಡಿಗರ ಸಂಖ್ಯೆ!

ನಂಬಿದರೆ ನಂಬಿ, ಬಿಟ್ಟರೆ ಬಿಡಿ.... ಕನ್ನಡಿಗರು ಕಾಣೆಯಾಗುತ್ತಿದ್ದಾರೆ. ಅರ್ಥಾತ್ ಕನ್ನಡಿಗರ ಸಂಖ್ಯೆ ನಿಧಾನ ಗತಿಯಲ್ಲಿ ಕುಸಿಯುತ್ತಿದೆ. ದೇಶದ ಅತಿ ದೊಡ್ಡ ಸಮಸ್ಯೆ ಜನಸಂಖ್ಯಾ ಸ್ಪೋಟ ಎಂದು ಹಿಂದಿನಿಂದಲೂ ಕೇಳುತ್ತಾ ಬಂದಿದ್ದೇವೆ. ಆದರೆ ನಂಬಿ, ಕನ್ನಡಿಗರ ಸಮಸ್ಯೆ ಜನಸಂಖ್ಯಾ ಕುಸಿತ! ದೇಶದ ಹೆಸರಲ್ಲಿ ದೇಶನಾಯಕರೆನ್ನಿಸಿಕೊಂಡ ಹಿಂದಿ ಧೂರ್ತರು ನಮಗೆ ನೀಡಿದ ಬಳುವಳಿ ಇದು. ನಂಬಲು ಕಷ್ಟವೇ ? ಲೇಖನವನ್ನು ಓದುತ್ತಾ ಹೋಗಿ. ಇಡಿಯ ದೇಶ ಒಂದು ಎಂದು ಹೇಳುತ್ತಿರುವವರಿಗೆ ಕನ್ನಡಿಗರು ಇದ್ದರೇನು ಬಿಟ್ಟರೇನು ಎಂಬ ಮನಸ್ಥಿತಿ ಇರಬಹುದು. ಹಾಗಾಗಿಯೇ ಏನೋ ಇಡಿಯ ದೇಶಕ್ಕೂ ಒಂದೇ ರೀತಿಯ ಟಿ.ಎಫ್.ಆರ್. (ಟೋಟಲ್ ಫರ್ಟಿಲಿಟಿ ರೇಟ್) ಪ್ರಮಾಣವನ್ನು ನಿಗದಿ ಮಾಡಿದರು. ಆದರೆ ಈಗಾಗಲೆ ನಿಗದಿತ ಟಿ.ಎಫ್.ಆರ್. ಸಾಧಿಸಿರುವ ಕರ್ನಾಟಕದಂತಹ ರಾಜ್ಯಕ್ಕೆ ಇಡೀ ದೇಶದ ಟಿ.ಎಫ್.ಆರ್. ಅನ್ನೇ ಮತ್ತೆ ಹೇರಿರುವ ಮೂಲಕ ಕನ್ನಡಿಗರನ್ನು ನಿರ್ಮೂಲನೆ ಮಾಡಲು ಕೇಂದ್ರ ಹೊಂಚು ಹಾಕಿರುವಂತಿದೆ.  ಟಿ.ಎಫ್.ಆರ್. ಅಂದರೇನು ? ಟೋಟಲ್ ಫರ್ಟಿಲಿಟಿ ರೇಟ್ ಅಥವಾ ರಿಪ್ಲೇಸ್‌ಮೆಂಟ್ ರೇಟ್ ಅನ್ನುವುದು ಯಾವುದೆ ಒಂದು ಸಮಾಜದಲ್ಲಿ ಹೆಣ್ಣೊಬ್ಬಳಿಗೆ ಆಕೆಯ ಜೀವಿತಾವಧಿಯಲ್ಲಿ ಹುಟ್ಟುವ ಸರಾಸರಿ ಮಕ್ಕಳ ಸಂಖ್ಯೆಯಾಗುತ್ತದೆ. ಇನ್ನೂ ವಿವರಿಸಿ ಹೇಳಬೇಕೆಂದರೆ ಒಂದು ಕುಟುಂಬದಲ್ಲಿ ಗಂಡ-ಹೆಂಡತಿಯರಿದ್ದಾರೆ ಅಂದುಕೊಳ್ಳೋಣ. ಅಂದರೆ ಆ ಕುಟುಂಬದ ಜನಸಂಖ್ಯೆ ೨ ಎಂದಾಯ್ತು. ಅವರ ಸಾವಿನ ನಂತರವೂ ...

ಕಥೆ - ಸವಿ ನೆನಪುಗಳು ಬೇಕು

ಚಾಲುಕ್ಯ ವೈಭವದ ಬಾದಾಮಿ ಬೆಟ್ಟದ ಮಗ್ಗುಲನ್ನು ತೀಡಿಕೊಂಡು ಪಶ್ಚಿಮದ ಗಾಳಿ ರೊಂಯ್ಯನೆ ಬೀಸುತ್ತಿತ್ತು. ಅದರ ರಭಸಕ್ಕೆ ಅವಳ ಅಮೋಘ ಕೇಶರಾಶಿ ಮುಂಗಾರು ಹನಿ ಸುರಿಸಲು ಮಲೆನಾಡಿನತ್ತ ಹೊರಟ ಕರಿ ಮೇಘದಂತೆ ಚಿಲ್ಲನೆ ಚಿಮ್ಮುತ್ತಲಿದ್ದರೆ, ಪಿನ್ ಹಾಕಿದ್ದರೂ ಜರುಗುವ ಸೀರೆಯ ಸೆರಗು ಅದೀಗ ಬೆಳೆದಿದ್ದ ಮೊಲೆಗಳ ಗಾತ್ರವನ್ನು ರವಿಕೆಯೊಳಗಿಂದಲೇ ಪ್ರದರ್ಶಿಸುತ್ತಲಿತ್ತು. ಅದರ ಪರಿವೇ ಆಕೆಗಿರಲಿಲ್ಲ. ಅವಳ ಕೈಲೊಂದು ಪತ್ರಿಕೆಯಿದೆ. ಅದರಲ್ಲಿರುವ ಕಥೆಯೊಂದನ್ನು ಬರೆದವನು ಪಕ್ಕದಲ್ಲೇ ಕುಳಿತಿದ್ದಾನೆ. ವಿಶೇಷವೆಂದರೆ ಆ ಕಥೆಯೊಳಗಿನ ಎರಡು ಪ್ರೇಮಿಗಳು ಅವರೇ ಆಗಿದ್ದಾರೆ! ಬಾದಾಮಿ ಬೆಟ್ಟದ ಮೇಲಿನ ಗುಹಾಂತರ ದೇವಾಲಯದ ಶಿಲ್ವಕಲೆ ಕಾಲದ ಹೊಡೆತಕ್ಕೆ ಸಿಕ್ಕು ಮಸುಕಾಗುತ್ತಿದೆ. ಅವುಗಳೆದುರಿನ ಕಲ್ಲು ಬೆಂಚಿನ ಮೇಲೆ ಥೇಟು ಶಿಲೆಯಂತೆಯೇ ಕುಳಿತಿದ್ದಾಳೆ ಸುಜಾತ. ಆಕೆಯ ಪಕ್ಕದಲ್ಲಿ  ಕುಳಿತ ಜಗದೀಶನ ದೃಷ್ಟಿ ಒಮ್ಮೆ ಅವಳ ಮುಗ್ಧ ಮೊಗದಲ್ಲಿ ಹುದುಗಿರುವ ತಲ್ಲಣವನ್ನು ಹುಡುಕುತ್ತದೆ. ಮತ್ತೊಮ್ಮೆ ಅಕೆಯ ಕೈಲಿರುವ ಪತ್ರಿಕೆಯನ್ನು ನೋಡುತ್ತಾನೆ. ಇನ್ನೊಮ್ಮೆ ಕಳ್ಳ ನೋಟದಲ್ಲಿ ಗಾಳಿಯ ನೆವಕ್ಕೆ ಗೋಚರಿಸುವ ಆಕೆಯ ಪುಟ್ಟ ಮೊಲೆಗಳ ಗಾತ್ರವನ್ನು ಸವಿಯುತ್ತಾದೆ. ಆದರೆ ಮುಂದೆ....? ಅದುವೇ ತಲ್ಲಣ ಅವನನ್ನು ಕಾಡುತ್ತದೆ. ಯಾರು ಯಾರೋ ಪ್ರವಾಸಿಗರು, ವಿದೇಶೀಯರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತ ಚಲಿಸುತ್ತಿದ್ದಾರೆ. ಪ್ರೇಮಿಗಳೆದೆಯಲ್ಲಿಯೇ ಲಕ್ಷಾಂತರ ಮಾತುಗಳು ...

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...

ಅನ್ನಪೂರ್ಣೇಶ್ವರಿ ಪಾದದಲ್ಲಿ ಇದೆಂತಾ ಹೋಟೆಲು ?

ಮೊನ್ನೆ ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಕೊನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದಿನದ ಎಲ್ಲಾ ಸಮಯದಲ್ಲೂ ಊಟದ ವ್ಯವಸ್ಥೆ ಇರುತ್ತದೆ ಎಂದು ಯಾರೋ ರೈಲು ಹತ್ತಿಸಿದ್ದರು. ಆದರೆ ಅಲ್ಲಿ ನಾವು ಹೋಗುವಾಗ ಸಂಜೆ ನಾಲ್ಕು ಗಂಟೆ. ಆ ಸಮಯದಲ್ಲಿ ಊಟ ದೊರೆಯುವುದಿಲ್ಲ ಎಂದು ಹೇಳಿದರು. ಹಾಗಾಗಿ ವಿಧಿ ಇಲ್ಲದೆ ಎದುರಲ್ಲೆ ಇರುವ ಒಂದು ಹೋಟೆಲಿಗೆ ಉಪಹಾರಕ್ಕೆಂದು ಹೋದೆವು. ಅಲ್ಲಿ ಯಾವ ತಿಂಡಿಯೂ ಚೆನ್ನಾಗಿರಲಿಲ್ಲ. ನಾವು ಪಡೆದ ದೋಸೆ ಬೆಂದಿರಲಿಲ್ಲ. ಚಟ್ನಿಯನ್ನು ತೆಂಗಿನಕಾಯಿ ಹಾಕಿ ಮಾಡಿರದೇ ಉಪ್ಪಿನಿಂದಲೇ ಮಾಡಿದ್ದರು. ಅವಲಕ್ಕಿ ಕೊಂಡರೆ ಖಾರವೋ ಖಾರ. ಆದರೆ ಬೆಲೆ ಮಾತ್ರ ಕಡಿಮೆ ಏನಿರಲಿಲ್ಲ. ಅಂತಹ ಪ್ರವಾಸಿ ಸ್ಥಳದಲ್ಲಿ ದುಡ್ಡು ಕೊಟ್ಟರೂ ಒಳ್ಳೆಯ ಉಪಹಾರ ದೊರೆಯುವುದಿಲ್ಲ ಎಂದಾದರೆ ಪ್ರವಾಸಿಗರು ಹೇಗೆ ತಾನೆ ಹೋಗಲು ಇಷ್ಟ ಪಡುತ್ತಾರೆ ? ಅಲ್ಲಿನ ನಿರ್ವಾಹಕರು ಇದನ್ನೆಲ್ಲಾ ಗಮನಿಸಿದರೆ ಒಳ್ಳೆಯದಲ್ಲವೆ?

ನಾ ಕಂಡಂತೆ ಜಾತಿಯ ಏರ್ಪಾಡುಗಳು.

ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ. ೧. ಬ್ರಾಹ್ಮಣ ೨. ಲಿಂಗಾಯಿತ ೩. ಒಕ್ಕಲಿಗ ೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು) ೫. ದೀವರು (ಈಡಿಗರು) ೬. ಹಸಲರು ೭. ಹೊಲೆಯರು ೮. ಉಪ್ಪಾರರು [ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ] ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ... * ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ. * ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವ...

ಗೊತ್ತಾ ನಿಮಗೆ ಮುಳ್ಳು ಹಣ್ಣು ?

ಇದು ನಮ್ಮ ಮಲೆನಾಡಿನ ಗುಟ್ಟ ಬೆಟ್ಟಗಳ ಮುಳ್ಳು ಗಿಡಗಳಲ್ಲಿ ಬಿಡುತ್ತೆ. ಮುಳ್ಳಿನ ಗಿಡದಲ್ಲೆ ಬಿಡುವುದರಿಮದ ಮುಳ್ಳು ಹಣ್ಣು ಅಂತ ಹೆಸರು. ಕೆಲವು ಕಡೆ ಬೆಣ್ಣೆ ಹಣ್ಣು ಅಂತಲೂ ಕರೆಯುತ್ತಾರೆ. ಬೇರೆ ಬೇರೆ ಹೆಸರುಗಳೂ ಉಂಟು. ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಷ್ಟೇ ಮೃದುವಾಗಿರುತ್ತದೆ. ಕಾಯಿಯಾಗಿರುವಾಗ ಹಸಿರಾಗಿರುವ ಇದು ಹಣ್ಣಾಗುವಾಗ ಬೆಳ್ಳಗೆ ಹೊಳೆಯುತ್ತದೆ. ಅದನ್ನು ಬಾಯಿಯಲ್ಲಿ ಇರಿಸಿಕೊಂಡರೆ ಆಹಾ... ಅದ್ಬುತ ರುಚಿ... ಕರಗಿ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೆಯೆ ಚಿಕ್ಕಪುಟ್ಟ ಹಕ್ಕಿಗಳಿಗೆ ಹಾಗೂ ಅಳಿಲುಗಳಿಗೆ ಈ ಹಣ್ಣು ತುಂಬಾ ಪ್ರಿಯವಾದ್ದರಿಂದ ಅವುಗಳ ಕಣ್ಣು ತಪ್ಪಿಸಿ ನಮಗೆ ದೊರಕುವುದು ಕಷ್ಟವೇ. ಆದರೂ ಇದು ಹಣ್ಣಾಗುವ ಸಮಯದಲ್ಲಿ ವಿಪರೀತ ಹಣ್ಣಾಗುವುದರಿಂದ ಹಕ್ಕಿಗಳಿಗೆ ಅಷ್ಟೊಂದು ತಿನ್ನಲು ಆಗುವುದಿಲ್ಲ ಎನ್ನಬಹುದು. ನಾವು ಶಾಲೆಗೆ ಹೋಗುವ ದಿನಗಳ ರಜೆ ಸಮಯದಲ್ಲಿ ಅರ್ಧ ಸಮಯ ಶರಾವತಿ ಹಿನ್ನೀರಿನಲ್ಲಿ ಕಳೆದರೆ ಇನ್ನರ್ಧ ಸಮಯ ಗುಡ್ಡ ಬೆಟ್ಟದಲ್ಲೇ ಕಳೆಯುತ್ತಿದ್ದವು. ಗುಡ್ಡದಲ್ಲಿ ಸಿಗುವ ಮುಳ್ಳಣ್ಣು, ನೇರಳೇ ಹಣ್ಣು, ಪರಿಗೇ ಹಣ್ಣು, ನೆಲ್ಲಿಕಾಯಿ, ಕೌಳೀಹಣ್ಣು, ಸಂಪಿಗೆ ಹಣ್ಣು, ಬುಕ್ಕೆಹಣ್ಣುಗಳಲ್ಲಿ ಒಂದನ್ನೂ ಬಿಡುತ್ತಿರಲಿಲ್ಲ. ಅದರಲ್ಲೂ ಈ ಮುಳ್ಳಣ್ಣು ಹಾಗೂ ಪರಿಗೆ ಹಣ್ಣುಗಳ ಗಿಡಗಳು ಬರೀ ಮುಳ್ಳು ಪೊದೆಯಂತೆ ಬೆಳೆಯುತ್ತವೆ. ಅವಗಳ ತುದಿಯಲ್ಲಿ ಹಣ್ಣು ಇದ್ದರೆ ಕೀಳುವುದೇ ಕಷ್ಟ. ಆದರೂ ನಾವು ಬಿಡುತ್ತಿರಲಿಲ್ಲ. ಮುಳ್ಳುಗಳನ...