ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು
ಇತ್ತೀಚಿನ ಪೋಸ್ಟ್‌ಗಳು

ಲೈಂಗಿಕ ವಸ್ತುಗಳ ನಿಷೇಧ ಸರಿಯೇ?

ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು. ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ. ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು. ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು ಅಭಿವೃದ್ದಿ

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್‌ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು: ತಡೆ 1: ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು.  ಕಾರ್ಪೊರೇಟ್‌ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಮೋದಿ ಕೊಟ್ಟ ಪರಿಹಾರ: ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ.  ಕಾರ್ಪೊರೇಟ್‌ಗಳು ಈಗ ಸಂತೋಷವಾಗಿದ್ದಾರೆ. ತಡೆ 2: ಕಾರ್ಪೊರೇಟ್‌ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು.  ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು. ಮೋದಿ ಕೊಟ್ಟ ಪರಿಹಾರ: ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು.  ಕಾರ್ಪೊರೇಟ್‌ಗಳು ಮತ್ತೆ ಸಂತೋಷಗೊಂಡಿದ್ದಾರೆ. ತಡೆ 3: ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾರೆ ಎಂದು ನಿರ್ಣಯಿಸುವ

ಹಿಂದಿಯೇತರರ ಮೇಲೆ ಇಂಡಿಯಾ ಹೂಡಿರುವ ಯುದ್ದ!

ಇಂಡಿಯಾ ಒಕ್ಕೂಟ 1947 ರಿಂದಲೂ ಒಂದು ಯುದ್ಧವನ್ನು ಮಾಡುತ್ತಾ ಬಂದಿದೆ! ಅದು ಪರೋಕ್ಷ ಯುದ್ದ. ಯಾರ ಮೇಲೆ ಅಂದರೆ 'ತನ್ನದೇ ಪ್ರಜೆಗಳು' ಅಂತ ನಂಬಿಸಲಾಗಿರುವ ಹಿಂದಿಯೇತರ ಜನರ ಮೇಲೆ! ಹಿಂದಿಯೇತರ ನುಡಿಗಳ ನಾಶ ಮತ್ತು ಆ ಜನರ ಸ್ವಾತಂತ್ರ್ಯ ಹರಣ ಈ ಯುದ್ಧದ ಉದ್ದೇಶ. ಇದು ಚೀನಾ ದೇಶವು ಮುಸ್ಲಿಮರ ಅಸ್ತಿತ್ವವನ್ನು ಹೊಸಕಿ ಹಾಕುತ್ತಿರುವಷ್ಟೇ ಕ್ರೌರ್ಯದ ಕೆಲಸ.  ಇದನ್ನು ಯಾರು ಶುರು ಮಾಡಿದರು ಅಂತ ನೋಡಲು ಹೋದರೆ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ದೊಡ್ಡ ದೊಡ್ಡ ಹೆಸರುಗಳೇ ಮುಂದೆ ಬರುತ್ತವೆ. ಜಾತಿ ಸಮಾನತೆಗೆ ಅಷ್ಟು ಮಹತ್ವ ಕೊಟ್ಟ ಅದೇ ಅಂಬೇಡ್ಕರ್ ನುಡಿ ಸಮಾನತೆಯನ್ನು ಮಾತ್ರ ಕಡೆಗಣಿಸಿದ್ದು ಆಘಾತ ಉಂಟುಮಾಡುವ ವಿಷಯ. ಒಕ್ಕೂಟ ರಚನೆಯಾದ ಹೊಸದರಲ್ಲಿ 'ಒಂದಾಗುವಿಕೆ'ಗಾಗಿ ಹಾಗೆ ಮಾಡಲಾಯ್ತು ಅಂತ ತೇಪೆ ಹಾಕಬಹುದು ಅಷ್ಟೇ. ತಮಾಷೆ ಅಂದರೆ ಡಿಎಂಕೆ ಬಿಟ್ಟರೆ ಯಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳುಇ ಇದರ ಬಗ್ಗೆ ದನಿ ಎತ್ತುತಿಲ್ಲ! ಆದರೆ ಅಲ್ಲಿಂದ ಶುರುವಾದ ನಮ್ಮ ಸ್ವಾತಂತ್ರ್ಯ ಹರಣದ ಕೆಲಸ ಇಂದೂ ನಿಂತಿಲ್ಲ, ಬಿಜೆಪಿ ಆಡಳಿತದಲ್ಲಿ ಅದು ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಇದನ್ನು ತಡೆಯುವುದು ಹೇಗೆ? ನಮ್ಮ ನುಡಿಯ ಜೊತೆಗೆ ನಮ್ಮತನವನ್ನು ಉಳಿಸಿಕೊಳ್ಳುವುದು ಹೇಗೆ?  ಮೊದಲಿಗೆ ಈ ಹಿಂದಿ ಒಕ್ಕೂಟದ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶ ಅನ್ನುವುದು ಒಂದು ಬೋಗಸ್ ಬಣ್ಣ, ಇದರ ಹಿಂದೆ ಇರುವುದು

ಎಂ.ಹೆಚ್. 370 ನಿಗೂಢ ಕಣ್ಮರೆ!

ಮಾರ್ಚ್ 8, 2014 ರ ನಡುರಾತ್ರಿ ಹನ್ನೆರಡೂವರೆಗೆ ಸರಿಯಾಗಿ ಕೌಲಾಲಂಪುರ ದಿಂದ ಒಂದು ವಿಮಾನವು ಹೊರಡುತ್ತೆ. ಅದು ಮರುದಿನ ಬೆಳಗ್ಗೆ 6.30 ರ ಹೊತ್ತಿಗೆ ಚೀನಾದ ಬೀಜಿಂಗ್ ನ್ನು ಹೋಗಿ ಸೇರಬೇಕು. ಆದರೆ ಮರುದಿನ ಬೆಳಿಗ್ಗೆ ಅದು ಎಷ್ಟು ಹೊತ್ತು ಕಳೆದರೂ ಬೀಜಿಂಗ್ ಹೋಗಿ ಸೇರಲೇ ಇಲ್ಲ. ಅದಾಗಿ ಬರೋಬ್ಬರಿ ಐದು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಕೂಡ ವಿಮಾನವು ಏನಾಯ್ತು, ಎಲ್ಲಿ ಹೋಯಿತು, ಈಗ ಎಲ್ಲಿದೆ, ಸಮುದ್ರಕ್ಕೆ ಬಿದ್ದು ಹೋಯಿತ, ಸಿಡಿದು ಹೋಯಿತಾ, ಸುಟ್ಟು ಬೂದಿ ಅಗೋಯ್ತಾ, ಅಥವಾ ಅನ್ಯಗ್ರಹ ವಾಸಿಗಳು ಏನಾದ್ರು ಅಪಹರಣ ಮಾಡ್ಕೊಂಡು ತಗೊಂಡೆ ಹೋಗ್ಬಿಟ್ರ ಏನಾಯ್ತು ಅನ್ನುವ ಸುಳಿವು ಸಿಕ್ಕಿಲ್ಲ. ಆ ವಿಮಾನದ ಹೆಸರು ಮಲೇಶಿಯನ್ 370. ಅದರಲ್ಲಿ ಇದ್ದಿದ್ದು 229 ಜನ ಪ್ರಯಾಣಿಕರು ಮತ್ತು 12 ಜನ ಸಿಬ್ಬಂದಿಗಳು. ಈ ವಿಮಾನದ ಕಣ್ಮರೆಯು ವಿಮಾನಗಳ ಇತಿಹಾಸದಲ್ಲೇ ಅತಿದೊಡ್ಡ ಒಗಟಾಗಿ ಉಳಿದಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿಯೂ ಈ ರೀತಿ ನೂರಾರು ಜನರು ತುಂಬಿರುವ ದೊಡ್ಡದೊಂದು ವಿಮಾನವು ಕಳೆದು ಹೋಗುವುದು ಅಂದರೆ ನಂಬಲು ಕಷ್ಟವಾದರೂ ನಂಬಲೇ ಬೇಕಾಗಿದೆ. ಎಂ.ಎಚ್. 370 ವಿಮಾನವು ಬೀಜಿಂಗ್ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನವೂ ಓಡಾಡುತ್ತಿರುತ್ತದೆ. ಕೌಲಾಲಂಪುರ್ ಇಂದ ಬೀಜಿಂಗ್ ಗೆ 5.30 ಘಂಟೆಗಳ ಪ್ರಯಾಣ. ಅಂದು ಆ ವಿಮಾನದಲ್ಲಿ 49000 ಕೆಜಿಯಷ್ಟು ಉರುವಲು ಇತ್ತು. ಇದು ಸುಮಾರು ಏಳು ಮುಕ್ಕಾಲು ಗಂಟೆಗಳಷ್ಟು ಹೊತ್ತು ಹಾರಾಡಲು ಸಾ

ಹುಡುಗಿಯರು ಯಾಕೆ 'ತುಂಬಾ ಒಳ್ಳೆಯ ಹುಡುಗ'ರನ್ನ ಪ್ರೀತಿ ಮಾಡಲ್ಲ ?

ತುಂಬಾ ಸಲ ಹುಡುಗರು ಹೇಳ್ತಾ ಇರೋದನ್ನು ಕೇಳಿರುತ್ತೇವೆ ಏನೆಂದರೆ ಹುಡುಗೀರು ಎಂಥೆಂಥವರನ್ನೋ ಪ್ರೀತಿ ಮಾಡುತ್ತಾರೆ ಆದರೆ ನಮ್ಮಂಥ ಒಳ್ಳೆ ಹುಡುಗನ ಪ್ರೀತಿ ಮಾಡಲ್ಲ ಅಂತ. ಇದು ನಿಜ ಕೂಡ. ತುಂಬಾ ಒಳ್ಳೆ ಹುಡುಗರನ್ನ ಹುಡುಗಿಯರು ಯಾಕೆ ಪ್ರೀತಿ ಮಾಡಲ್ಲ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಾ ಇದ್ರೆ ಈ ವಿಡಿಯೋನ ನೋಡಿ. ಸಾಧಾರಣವಾಗಿ "ತುಂಬಾ ಒಳ್ಳೆಯ ಹುಡುಗ"ರನ್ನು ಯಾವ ಹುಡುಗಿ ಕೂಡ ಪ್ರೀತಿ ಮಾಡೋದಿಲ್ಲ. ಅಂತಹ ಹುಡುಗರ ಜೊತೆ ಹುಡುಗೀರು ಗೆಳೆತನ ಮಾಡ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ಹೆಲ್ಪ್ ತಗೊಳ್ತಾರೆ ಮತ್ತು ತಮ್ಮ ಕಷ್ಟ ಸುಖಗಳನ್ನ ಹೇಳಿಕೊಳ್ಳುತ್ತಾರೆ. ಆದರೆ ಅಪ್ಪಿ ತಪ್ಪಿಯೂ ಪ್ರೀತಿ ಮಾತ್ರ ಮಾಡೋದಿಲ್ಲ. ಒಂದು ವೇಳೆ ಮಾಡಿದರೂ ಕೂಡ ಆ ಪ್ರೀತಿ ತುಂಬಾ ದಿನ ಬಾಳೋದು ಕಷ್ಟ. ನಿಧಾನವಾಗಿ ಹುಡುಗೀರು ಆ "ತುಂಬಾ ಒಳ್ಳೆಯ ಹುಡುಗ"ರಿಂದ ದೂರಾಗಿ ಬಿಡುತ್ತಾರೆ. ಅದೇ ಹುಡುಗಿಯರು ಒರಟರನ್ನು, ಪಟಿಂಗರನ್ನು, ರೋಡ್ ರೋಮಿಯೋಗಳನ್ನು, ಪೊರ್ಕಿಗಳನ್ನು, ಕಣ್ಣು ಮುಚ್ಚಿಕೊಂಡು ಪ್ರೀತಿ ಮಾಡ್ತಾ ಇರ್ತಾರೆ. ಇದು ಒಳ್ಳೆಯ ಹುಡುಗರ ಪಾಲಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತೆ. ತುಂಬಾ ಹುಡುಗರಿಗೆ ಹುಡುಗಿಯರ ಈ ನಿಲುವು ಅರ್ಥವಾಗುವುದೇ ಇಲ್ಲ. ಹಾಗಾಗಿ ಎಷ್ಟೋ ಜನ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹಣ ಮತ್ತು ಸಮಯವನ್ನು ಕಳೆಯುತ್ತಿರುತ್ತಾರೆ. ಆದರೆ ಇಂತಹ ಗೆಳೆತನಗಳು ಪ್ರೀತಿಯಾಗಿ ಬದಲಾಗದೆ, ಅಥವಾ ಒಂದು ಬದಿಯ ಪ್ರೀತಿ ಮಾತ

ಕನ್ನಡ ನಾಡಿನ ಕಲಿ ಸಂಗೊಳ್ಳಿ ರಾಯಣ್ಣ

ಈ ಹೆಸರು ಕೇಳಿದರೇನೇ ಎಂತವರ ಮೈಯ್ಯಲ್ಲೂ ಒಂದು ಮಿಂಚಿನ ಸಂಚಾರವಾಗುತ್ತದೆ. ರಾಯಣ್ಣ ಅನ್ನುವುದು ಒಂದು ವ್ಯಕ್ತಿಯಲ್ಲ, ಅದೊಂದು ಈ ಕರುನಾಡಿನಲ್ಲಿ ಹುಟ್ಟಿದ ಮಹಾನ್‌ ಶಕ್ತಿ. ಅಂದು ಬ್ರಿಟೀಷರು ರಾಯಣ್ಣನ ಹೆಸರು ಕೇಳಿದರೇನೇ ನಡುಗುತ್ತಿದ್ದರು. ರಾಯಣ್ಣನ ಹೆಸರು ಕೇಳಿದರೆ ಅವರ ಮೈಯ್ಯಲ್ಲಿ ಕಂಪನ ಶುರುವಾಗುತ್ತಿತ್ತು. ರಾಯಣ್ಣನಿಂದಾಗಿ ಬ್ರಿಟಿಷರು ಕಿತ್ತೂರಿನ ಕಡೆ ಕಾಲಿಡಲೂ ಹೆದರುವ ಕಾಲವೊಂದಿತ್ತು. ಅದು ರಾಯಣ್ಣನ ಶಕ್ತಿ ಮತ್ತು ಯುಕ್ತಿಯ ಹೆಚ್ಚುಗಾರಿಕೆ. ರಾಯಣ್ಣ ಹುಟ್ಟಿದ್ದು ೧೭೯೮ ರ ಆಗಷ್ಟ್‌ ೧೫ ರಂದು ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ. ರಾಯಣ್ಣನ ಹಿರಿಯರು ಕಿತ್ತೂರು ಸಂಸ್ಥಾನದ ಅರಮನೆಗಳಲ್ಲಿ ವಾಲೇಕಾರ ಕೆಲಸ ಮಾಡುತ್ತಾ ಬಂದವರು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರೆ. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿಯಾಗಿದ್ದ. ಊರೊಳಗೆ ನುಗ್ಗಿ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಯೊಂದನ್ನು ಹೊಡೆದು ಹಾಕಿದ ಸಾಹಸಿ ಬರಮಣ್ಣ! ಅವರ ಆ ಸಾಹಸಕ್ಕೆ ಮೆಚ್ಚಿ ರಾಜರು "ರಕ್ತ ಮಾನ್ಯದ ಹೊಲ"ವನ್ನು ಬಳುವಳಿ ನೀಡಿದ್ದರು. ಅದಲ್ಲದೇ ಬರಮಣ್ಣ ಸಂಗೊಳ್ಳಿಯ ಗರಡಿ ಮನೆಯ ಗಟ್ಟಿ ಕಟ್ಟಾಳು ಕೂಡಾ ಆಗಿದ್ದರು. ಅಂತಹ ಅಂಜದೆಯ ಗಂಡಿನ ಮಗನಾಗಿ ಹುಟ್ಟಿದ ರಾಯಣ್ಣ ನೂರೆದೆಯ ಸಾಹಸಿಯಾಗಿದ್ದ. ಇತ್ತ ಕಿತ್ತೂರಿನ ದೊರೆ ಮಲ್ಲಸರ್ಜನು ಮರಾಠಿ ಪೇಶ್ವೆಗಳ ಮೋಸದ ಬಲೆಗೆ ಸಿಕ್ಕು ಸಾವಿಗೆ ಈಡ