ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಿನ್ನ ಸ್ನೇಹ

ಒಂಟಿತನದ ಬರುಡು ಜೀವನವ ಹಸನು ಮಾಡಿದಂತ ನಿನ್ನ ಸ್ನೇಹ ಹೊಸ ಚೈತನ್ಯ ಮೂಡಿ ಪ್ರಪುಲ್ಲವಾದಂತೆ ಭಾಸ ಒಳಗೇ ರಾಚಿಕೊಂಡಿರುವ ಕತ್ತಲನ್ನು ಹೊಡೆದೋಡಿಸಿದಂತೆ ಜಗತ್ತಿನ ಎಲ್ಲಾ ಬಣ್ಣಗಳ ಬೆಳಕನ್ನು ಎಳೆದು ತಂದಂತೆ ಬದುಕಿನ ತುಂಬಾ ಸುಂದರತೆಯನ್ನು ತುಂಬಿದೆ ಹಿಂದಿರುಗಿ ನೋಡಿದರೆ ಜೀವನದಿ ಮೆಲುಕು ಹಾಕಿ ಮೆಲ್ಲಲು ಮಧುರ ಸವಿ ಕ್ಷಣಗಳ ನೀಡಿದೆ ನಿನ್ನ ಜೊತೆ ಹೃದಯ ಒಡ್ಡು ಒಡೆದ ನದಿಯಂತೆ ಜೀಕುವ ಉಯ್ಯಾಲೆಯಂತೆ ಚಿಮ್ಮುವ ಕಾರಂಜಿಯಂತೆ ಪ್ರತಿ ಮುಂಜಾವಿನ ಬೆಳಗು ಹೊಸತರಂತೆ ಹೂನಗೆ ನಕ್ಕು ನಲಿದು ಪಿಸುದನಿಯಲಿ ಉಲಿದಂತೆ. - ಸವಿತ

ಪೀಠ ಇಷ್ಟೊಂದು ಘಾಟಾ ?

ಜ್ಞಾನಪೀಠ ಬಂದಿದ್ದು ಕಂಬಾರರಿಗಾದರೆ ಅದರಿಂದ ತಲೆ ಬಿಸ ಮಾಡಿಕೊಂಡಿರುವ ವ್ಯಕ್ತಿಗಳೇ ಬೇರೆಯವರು. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಬಂತು ಎಂದು ನಾವು ಖುಷಿ ಪಡುವ ಹೊತ್ತಿಗೇ ಅದರಲ್ಲೊಂದು ಕಿಡಿ ಮತ್ತು ಹೊಗೆ ಶುರುವಾಗಿ ಕನ್ನಡ ಸಾಹಿತ್ಯ ಲೋಕವನ್ನು ಮಸುಕಾಗಿಸುತ್ತಿರುವುದು ವಿಪರ್ಯಾಸ. ಪೀಠ ಬಂದ ಖುಷಿಯಲ್ಲಿ ಕಂಬಾರರಿದ್ದರೆ ಭೈರಪ್ಪರಿಗೆ ಎಲ್ಲಿ ಬಂದು ಬಿಡುತ್ತೋ ಅನ್ನುವ ಆತಂಕದಲ್ಲಿ ಅನೇಕರಿರುವಂತೆ ತೋರುತ್ತಿದೆ. ಕಂಬಾರರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೇ ಪಾಟೀಲ ಪುಟ್ಟಪ್ಪ ಗರಮ್ ಆಗಿ ಮೊದಲಿಗೆ ತಲ್ಲಣ ಉಂಟು ಮಾಡಿದರು. "ಹೋಗಿ ಹೋಗಿ ಇವರಿಗೆ ಕೊಡೋದಾ ?" ಎಂಬ ಪಾಪುರವರ ಪಾಪದ ಮಾತಲ್ಲಿ ತನಗೆ ಬರಲಿಲ್ಲ ಅನ್ನುವ ನೋವಿತ್ತೋ, ಅಥವಾ ಕಂಬಾರರಿಗೆ ಬಂದೋಯ್ತಲ್ಲ ಅನ್ನುವ ಹೊಟ್ಟೆಕಿಚ್ಚು ಇತ್ತೋ ಗೊತ್ತಾಗಲಿಲ್ಲ. ಆದರೆ ಅಗ್ನಿ ಶ್ರೀಧರ‍್ ಮತ್ತು ನಿಡುಮಾಮಿಡಿ ಸ್ವಾಮೀಜಿಗಳಂತವರು ಜ್ಞಾನಪೀಠ ಹೊತ್ತು ತಂದ ಕಂಬಾರರ ತಲೆಯನ್ನು ನೇವರಿಸುವುದು ಬಿಟ್ಟು ಬೈರಪ್ಪರ ಜುಟ್ಟು ಹಿಡಿದು ಅಲ್ಲಾಡಿಸ ಹೊರಟಿದ್ದು ಅತಿರೇಕವೆನ್ನಿಸದಿರದು. ಹೇಳಿ ಕೇಳಿ ಅದು ಖಾಸಗಿ ಸಂಸ್ಥೆ ನೀಡುವ ಒಂದು ಪ್ರಶಸ್ತಿ. ಅದನ್ನು ಅವರಿಗೆ ಕೊಡಬಾರದು, ಇವರು ಸತ್ತ ನಂತರ ಬೇಕಾದರೆ ಕೊಡಲಿ ಎಂದೆಲ್ಲಾ ಹೇಳಿದ್ದು ಸರಿಯಲ್ಲ. ಪ್ರಶಸ್ತಿಯ ಬಗ್ಗೆ ಈಗಾಗಲೇ ಲಾಬಿಯ ಕಳಂಕ ತಟ್ಟಿರುವುದೇನೋ ಹೌದು. ಹಾಗಂತ ಅವರೇನೂ ಕಣ್ಣು ಮುಚ್ಚಿಕೊಂಡು ಪ್ರಶಸ್ತಿ ನೀಡುತ್ತಾರೆಯೇ ? ನೂರಕ್ಕೆ ...

ಕೊನೆಗೂ ಜೈಲು ಸೇರಿದ ಮಹಾಭ್ರಷ್ಟ !

ಕರ್ನಾಟಕ ಕಂಡ ಮಹಾ ಭ್ರಷ್ಟ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಜೈಲು ಮುದ್ದೆ ಮುರಿಯಲು ಹೋಗುವ ಮೂಲಕ ರಾಜ್ಯಕ್ಕೆ ಆಶಾಕಿರಣ ಮೂಡಿಸಿದ್ದಾರೆ. ಇವರ ರೈತಪರ ಹೋರಾಟವನ್ನು ನೋಡಿ ಮೆಚ್ಚಿದ ಜನತೆ ಕುಮಾರಸ್ವಾಮಿಯನ್ನು ಮೂಲೆಗೆಸೆದು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದ್ದೇನೋ ಸರಿ. ಆದರೆ ಅದರ ನಂತರ ಈ ಮನುಷ್ಯ ಬದಲಾದ ಪರಿ ನೋಡಿದರೆ ಊಸರವಳ್ಳಿಯೂ ನಾಚಿಕೊಳ್ಳುತ್ತೆ. ಅಂತಹ ಹೋರಾಟದ ಹಿನ್ನೆಲೆಯ ವ್ಯಕ್ತಿ ಇವರೇನಾ ? RSS ನಿಂದ ಬಂದವರು ಇವರೇನಾ ಅನ್ನಿಸಿದ್ದು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿರುವಂತೆಯೇ ಶೋಭಾಳನ್ನು ಬಗಲಲ್ಲಿಟ್ಟುಕೊಂಡು ಮಾಡಬಾರದ ಅನಾಚಾರಕ್ಕಿಳಿದ ಯಡ್ಡಿ ಫಕತ್ತು ನುಂಗಲು ಕುಳಿತುಬಿಟ್ಟರು. ಅಭಿವೃದ್ಧಿಯ ಹೆಸರಲ್ಲಿ ತಾವು ಮತ್ತು ತಮ್ಮ ಕುಟುಂಬವನ್ನು ಅಭಿವೃದ್ದಿ ಮಾಡಿಕೊಂಡರು. ಇದಕ್ಕೆ ತಮ್ಮ ಜಾತಿಯನ್ನು ಕೋಟೆಯನ್ನಾಗಿ ಬಳಸಿಕೊಂಡರು. ಇದಕ್ಕಾಗಿ ಐನಾತಿ ಸ್ವಾಮೀಜಿಗಳಿಗೆ ಕೋಟ್ಯಾಂತರ ರೂಪಾಯಿ ಬಿಟ್ಟಿ ಹಣ ನೀಡಿ ಜಾತಿಯ ಜನರನ್ನು ಏಮಾರಿಸಲು ಉಪಯೋಗಿಸಿಕೊಂಡರು. ಇಂತಹ ಹಲಾಲುಖೋರ ಯಡಿಯೂರಪ್ಪ ಕೊನೆಗೂ ಜೈಲೂಟ ಉಣ್ಣಲು ಕಂಬಿ ಹಿಂದೆ ಚಕ್ಕಳಮಕ್ಕಳ ಹಾಕಿರುವುದು ಉಳಿದ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳಿಗೆ ಪಾಠವಾಗಲಿ. ನ್ಯಾಯಾಲಯಕ್ಕೆ ಒಂದು ಧನ್ಯವಾದಗಳು. ಇಂತಹ ನೀತಿಗೆಟ್ಟ ಜಾತೀವಾದಿ ಹಲಾಲುಟೋಪಿ ರಾಜಕಾರಣಿ ಹಿಂದೆ ಬಂದಿರಲಿಲ್ಲ, ಮುಂದೆಯೂ ಬರುವುದು ಬೇಡ. ಹಾಗೆಯೇ ಕೇವಲ ಜಾತಿ ಕಾರಣಕ್ಕೆ ಭ್ರಷ್ಟರನ್ನೂ ಬೆಂಬಲಿಸುವ ಮಠಾಧೀಶರಿಗ...

ಮತ್ತೆ ಮತ್ತೆ ಮರಳುವ ಪ್ರೇಮ

ಪ್ರೀತಿಸೋದು ಕುಡಾ ಒಂದು ಲೆಕ್ಕಾಚಾರ. ಅದಕ್ಕೂ ಒಂದು ರೀತಿ ನೀತಿಯಿದೆ. ಕಂಡ ಕಂಡವರನ್ನೆಲ್ಲಾ ಪ್ರೀತಿಸಲು-ಪ್ರೇಮಿಸಲು ಸಾಧ್ಯವಿಲ್ಲ. ಪ್ರೇಮ ಹೇಳದೇ ಸಂಭವಿಸಿಬಿಡಹುದು. ಕೇಳದೇ ಬರಬಹುದು ಕೆಲವರು ಬೆನ್ನು ಬಿದ್ದು ಹೋಗಿ ಪ್ರೀತಿಸಬಹುದು. ಕೆಲವರ ಬೆನ್ನು ಬಿದ್ದು ಪ್ರೀತಿಯೇ ಬರಬಹುದು. ಆದರಿಂದ ಪ್ರೀತಿಸುವವರಿಗಾಗಿ ಈ ಲೇಖನ. ಹರೆಯದಲ್ಲಿ ಹಂದಿಯೂ ಚೆಂದ ! ಒಮ್ಮೆ ಹಂದಿ ಫಾರಂಗೆ ಹೋಗಿ ನೋಡಿ. ಅಲ್ಲಿ ಮರಿ ಹಂದಿಗಳಿರುತ್ತವೆ. ಮುದಿ ಹಂದಿಗಳೂ ಇರುತ್ತವೆ. ಜೊತೆಗೆ ಇಲ್ಲಿ ಹರೆಯದ ಹಂದಿಗಳೂ ಇರುತ್ತವೆ. ನಿಮ್ಮ ಗಮನವನ್ನು ಸೆಳೆಯುವವೇ ಅವಲ್ಲವೇ? ಆಹಾ! ಎಷ್ಟು ಸೊಕ್ಕಿವೆ ಅನ್ನಿಸದಿರದು. ಹರೆಯ ಹಂದಿಗೇ ಅಂತಹ ಸೊಗಸನ್ನು ಕೊಡುತ್ತವೆಂದರೆ ಹುಡುಗರ, ಹುಡುಗಿಯರ ಪಾಡೇನು? ಆದ್ದರಿಂದ ಪ್ರೀತಿ-ಪ್ರೇಮ ಸೊಕ್ಕು, ಸೌಂದರ್ಯ ಮನುಷ್ಯ ಮಾತ್ರನಿಗೇ ಇರುವುದು ಎಂಬ ಜಂಬ ಬೇಡ. ಹಂದಿ, ಕಾಗೆಗಳೂ ಪ್ರೀತಿಸುತ್ತವೆಂಬುದು ನೆನಪಿರಲಿ. ಪ್ರೀತಿಸುವವರು ತಾವೇ ಗಂಧರ್ವರೆಂದೋ, ದೇವತೆಗಳೆಂದೋ ಅಂದುಕೊಳ್ಳುವುದು ಮಾಮೂಲು. ಇದೊಂದು ಸಹಜ ಗುಣ.  ಎಲ್ಲಾ ಜೀವರಾಶಿಯೂ ಪ್ರೀತಿಸುತ್ತವೆ ಹಾಗೂ ಪ್ರೀತಿಸಲ್ಪಡುತ್ತವೆ. ಇದೊಂದು ಪ್ರಕೃತಿ ನಿಯಮ ಎಂಬ ವಿಷಯ ನೆನಪಿನಲ್ಲಿಸಿಕೊಂಡು ಪ್ರೀತಿಸುವ ಗೋಜಿಗೆ ಹೋಗಬಹುದು. ದೇಹವೇ ಕಾರಣ ಪ್ರೀತಿಗೆ ಮನಸ್ಸು ಒಂದು ಕಾರಣ. ಹಾಗೆಯೇ ದೇಹವೂ ಮತ್ತೊಂದು ಕಾರಣ. ಪ್ರೀತಿಯಲ್ಲಿ ಮನಸ್ಸು ಭಾಗವಹಿಸುತ್ತದೆ. ಪ್ರೇಮದಲ್ಲಿ ಮನಸ್ಸಿನ ಜೊತೆಗೆ ದೇಹ. ಆ ಬೆ...

ನಿಖಿತಾಗೆ ನಿಷೇಧ ... ಇದ್ಯಾವ ನ್ಯಾಯ ?

"ನಟ ದರ್ಶನ್ ಕುಟುಂಬದಲ್ಲಿ ಬಿರುಕು ಬರಲು ನಟಿ ನಿಖಿತಾ ಕಾರಣ" ಎಂಬ ಕಾರಣ ನೀಡಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕೆಯನ್ನು ಮೂರು ವರ್ಷ ಕನ್ನಡ ಚಿತ್ರರಂಗದಿಂದ ನಿಷೇಧಿಸಿ "ಮುಲ್ಲಾ ಕಾನೂನು" ಜಾರಿಗೊಳಿಸಿದೆ. ಇಂತಹ ತೀರ್ಪು ನೀಡಲು ಇವರು ಬಳಸಿದ ಮಾನದಂಡಗಳು ಯಾವುವು ಅನ್ನುವುದು ತಿಳಿದು ಬಂದಿಲ್ಲ. ಆದರೆ ನಮ್ಮಲ್ಲೇಳುವ ಪ್ರಶ್ನೆಗಳಿಗೆ ಇವರಲ್ಲಿ ಉತ್ತರವಿಲ್ಲ. * ದರ್ಶನ್ ಜೊತೆ ನಿಖಿತಾಳೇ ಗೆಳೆತನ ಬೆಳೆಸಿದಳು ಎಂದು ಇವರಿಗೆ ಹೇಗೆ ತಿಳಿಯಿತು ? ದರ್ಶನ್ ಸ್ವತಃ ತಾನೇ ಅವಳನ್ನು ಬುಟ್ಟಿಗೆ ಹಾಕಿಕೊಂಡಿರುವ ಸಾಧ್ಯತೆ ಇದೆಯಲ್ಲ? ಹಾಗಿದ್ದರೆ ದರ್ಶನ್‌ಗೆ ಶಿಕ್ಷೆ ಏನು ? ದರ್ಶನ್ ತಾನೇ ನಿಖಿತಾಳನ್ನು ಬುಟ್ಟಿಗೆ ಹಾಕಿಕೊಂಡಿದ್ದರೆ ಮುಂದೆ ಅವಳಿಲ್ಲದಿದ್ದರೆ ಇನ್ನೊಬ್ಬಳನ್ನು ಇಟ್ಟುಕೊಳ್ಳುವುದಿಲ್ಲ ಅಂತ ಏನು ಗ್ಯಾರಂಟೀ ? * ದರ್ಶನ್ - ವಿಜಯಲಕ್ಷ್ಮಿ ಯರದ್ದು ಕುಟುಂಬ ಕಲಹ. ಅದರ ಬಗ್ಗೆ ತೀರ್ಪು ನೀಡಲು ಇವರಿಗೆ ಏನು ಅಧಿಕಾರವಿದೆ ? ಇವರಿಗೆ ವಿಜಯಲಕ್ಷ್ಮಿ ಅವರೇನಾದರೂ ದೂರು ನೀಡಿದ್ದರೆ ? * ದರ್ಶನ್ - ನಿಖಿತಾ ಇಬ್ಬರೂ ಸೇರಿ ತಪ್ಪು ಮಾಡಿರುವಾಗ ಒಬ್ಬಳಿಗೆ ಶಿಕ್ಷೆ ನೀಡಿದರೆ ಹೇಗೆ ? ಇಬ್ಬರನ್ನೂ ನಿಷೇಧಿಸಬೇಕಾಗಿತ್ತಲ್ಲವೇ ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿದಂತೆ ಆಗಲಿಲ್ಲವೇ ? * ಅವರಿಬ್ಬರ ನಡುವೆ ಸಂಬಂಧ ಇದ್ದುದೇ ಹೌದಾದರೆ ಆಕೆಯನ್ನು ನಿಷೇಧಿಸಿದರೆ ಏನುಪಯೋಗ ? ಅವಳು ನಟಿಸದಿದ್...

ಜನಲೋಕ್‌ಪಾಲ್ ದೀವಿಗೆ !

ಗೆಳೆಯರೇ..... ಗೆಳೆಯರೇ.... ಭಾರತದ ಪ್ರೀತಿವೆತ್ತ ಸ್ನೇಹ ಬಂಧು ಮಿತ್ರರೆ | ಬನ್ನಿ ಹೆಗಲ ಕೊಡುವ ನಮ್ಮ ಅಣ್ಣನೊಡನೆ ಇಂದು ಬನ್ನಿ ದೇಶಕ್ಕಾಗಿ ಮೀಸಲಿಡುವ ರಕ್ತ ಬಿಂದು || ದೇಶಕ್ಕಿಂದು ಅಂಟಿರುವ ಭ್ರಷ್ಟಾಚಾರ ಕೊಂದು ಬಲವಾದ ಹೆಜ್ಜೆ ಇಟ್ಟು ನಾವು ನಡೆವ ಮುಂದು || ರಕ್ತ ಸುರಿಸಿ ಪ್ರಾಣ ತೆತ್ತು ಪಡೆದರು ಸ್ವಾತಂತ್ರ್ಯ ಅವರ ಋಣದ ಸಮಾದಿ ಮೇಲೆ ಆಯ್ತು ಗಣತಂತ್ರ || ಆಳುತಿರುವ ದೊರೆಗಳಿಗೆ ದುಡ್ಡಿನದೇ ಮಂತ್ರ ಅಧೋಗತಿಗೆ ಇಳಿದ ದೇಶ ಆಯ್ತು ಅತಂತ್ರ || ಅಣ್ಣನಿಗೆ ತಮ್ಮನಾಗಿ ನಮ್ಮ ಸಂತೋಷ್ ಹೆಗಡೆ ಅರವಿಂದ ಕೇಜ್ರಿವಾಲ ಅವರ ಜೊತೆಗೆ ನಡಿಗೆ || ಘರ್ಜಿಸಿದ ದೇಶಪ್ರೇಮಿ ಕಿರಣ್ ಬೇಡಿ ಇಹರು ಸ್ವಾಮಿ ಅಗ್ನಿವೇಶರೊಡನೆ ಶಾಂತಿಭೂಷಣ್ ತ್ರಯರು || ಕಡು ಬಡವರು ಅರೆ ಹೊಟ್ಟೆಗೆ ಪ್ರಾಣ ನೀಗುತಿಹರು ಕಡು ಭ್ರಷ್ಟರು ನಮ್ಮನಾಳಿ ಕೇಕೆ ಹಾಕುತಿಹರು || ನಾವು ಬೀಳಲಾರೆವಿಂದು ರಾತ್ರಿ ಕಂಡ ಬಾವಿಗೆ ಅಣ್ಣ ತಂಡ ತಂದಿವುದು ಜನಲೋಕ್‌ಪಾಲ್ ದೀವಿಗೆ || --------------------------------------------------- ಇಂದು [27.08.2011] ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೆರೆದಿದ್ದ ಸುಮಾರು ನಾಲ್ಕೈದು ಸಾವಿರ ಅಣ್ಣಾ ಬೆಂಬಲಿಗರ ಎದುರು ಈ ಹಾಡನ್ನು ಸ್ವತಃ ನಾನೇ ಹಾಡಿದೆ. ಆ ಸಂದರ್ಭದಲ್ಲಿ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗಡೆ ಅವರೂ ಅಲ್ಲಿ ಉಪಸ್ಥಿತರಿದ್ದರು. ತುಂಬಾ ಖುಷಿಯಾಯ್ತು.

ಸೋಲು ಗೆಲುವಿನ ಬದುಕಿನಲ್ಲಿ ಕಲ್ಪನೆ ಮತ್ತು ವಾಸ್ತವ

ನಮ್ಮ ಜೀವನದಲ್ಲಿ ಸೋಲೆಂಬುದು ಎಷ್ಟು ಸಹಜವೋ ಅದರಂತೆಯೇ ಪ್ರತಿ ಸೋಲಿನ ನಂತರವೂ ನಾವು ಒಬ್ಬಂಟಿಯಾಗಿಯೇ ಉಳಿದಿರುತ್ತೇವೆಂಬುದೂ ಕೂಡ ನಿಜ. `ಸೋಲು ಎಂಬ ಒಂದು ಅಗೋಚರ ಪ್ರಕ್ರಿಯೆ ಗೆಲುವಿಗಿಂತಲೂ ತುಂಬಾ ಬಿರುಸು ಹಾಗೂ ಶಕ್ತಿಶಲಿಯಾದುದು. ಹಾಗೂ ತೀರಾ ಕಹಿಕಹಿ. ಆ ಕಹಿಯ ಘಾಟು ನಾವು ತಾಳಿಕೊಳ್ಳುವುದಂತಿರಲಿ, ನಮ್ಮ ಗೆಳಯ ಗೆಳತಿಯರೇ ತಾಳಲಾಗದೇ ಮೂಗು ಮುರಿದು ನಮ್ಮಿಂದ ನಾಜೂಕಾಗಿ ಜಾರಿ ದೂರಾಗಿ ಬಿಡುವ ಸಂಭವವವೂ ಇರುತ್ತದೆ. (ಒಬ್ಬಿಬ್ಬರು ಉತ್ತಮ ಸ್ನೇಹಿತು ಉಳಿದರೆಂದರೆ ಅದೇ ನಮ್ಮ ಪುಣ್ಯ) ಜೀವನದಲ್ಲಿ ಮನುಷ್ಯನಿಗೆ ಅತಿ ದೊಡ್ಡದೆನ್ನಬಹುದುದಾದ ಸೋಲೊಂದು ಬಂದು ಅಪ್ಪಳಿಸಿತೆಂದರೆ ಅದರ ನಂತರ ಮನಸ್ಸು ಸಾಂತ್ವನ ಬಯಸುತ್ತದೆ. ಮತ್ತು ಸೋಲಿನಿಂದ ಎದ್ದು ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯಿಸುವ ಭರದಲ್ಲಿ ಹಠಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ `ಕನಸು ಎಂಬ ರತ್ನಮಾಳಿಗೆ ಹೊಕ್ಕು ಬಿಟ್ಟಿತೆಂದರೆ ಗತಿ? ಮುಂದಿನ `ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತೇವೆ? ಮುಂದೆ ಅದೇನೋ ದೊಡ್ಡದೊಂದು ಯಶಸ್ಸು ನಮಗಾಗಿಯೇ ರತ್ನಗಂಬಳಿ ಹಾಸಿ ಕಾದಿರುವಂತೆ ಕಲ್ಪಿಸಿಕೊಳ್ಳುತ್ತೇವೆ. ಈ ಕಲ್ಪನೆ ಅಥವಾ ಕನಸು ನಮ್ಮನ್ನು ಮತ್ತೊಂದು ಸೋಲಿಗೆ ದೂಡುವ ಅವಕಾಶ ಕೂಡಾ ಇರುತ್ತದೆ. ಈ ಸಮುಯದಲ್ಲಿ ಕೊಂಚವಾರದೂ ವಾಸ್ತವನವನ್ನು ವಿವೇಚಿಸದೇ ಹೋದರೆ ಬದುಕಿಗೆ ಮತ್ತೊಂದು `ಹೊಡ್ತ ಗ್ಯಾರಂಟಿ. ...