ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಬಿಎಂಟಿಸಿ ಬಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು

ನೀವು ಬೆಂಗಳೂರಿನ ನಗರ ಸಾರಿಗೆಯಲ್ಲಿ ಓಡಾಡಿದ್ದರೆ ನರಕಕ್ಕೆ ಹೋದರೂ ಸುಖವಾಗಿ ಇರಬಲ್ಲಿರಿ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆಯ ಸಮಯವಂತೂ ಜನದಟ್ಟಣೆ ಹೇಳತೀರದು. ನೂರಾರು ಬಸ್‌ಗಳು ಇದ್ದರೂ ಸಹ ನಿಲ್ಲಲಿಕ್ಕೂ ಸಹ ಸ್ಥಳವಿಲ್ಲದಂತಹ ಸ್ಥಿತಿ. ಇದು ಒಂದೆಡೆಯಾದರೆ, ನಮಗೆ ಬೇಕಾದ ಬಸ್‌ ಯಾವ ಸಮಯಕ್ಕೆ ಬರುತ್ತದೆ, ಬರುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಕಾಯುತ್ತಿರಬೇಕು. ಬಂದರೆ ಹಡೆಯಲು ತಯಾರಾದ ತಾಯಿಯಂತೆ ಹೊಟ್ಟೆ ತುಂಬಿಸಿಕೊಂಡ ಬಸ್‌ಗಳೇ ಬರುತ್ತವೆ. ಅದರಲ್ಲೇ ಜನ ನುಗ್ಗಿ ಹತ್ತಿಕೊಂಡು ಹೋದರೆ ಅದರ ಹಿಂದೆ ಖಾಲಿ ಬಸ್‌ಗಳು ಬರುತ್ತವೆ.  ಇದನ್ನು ಸರಿಪಡಿಸಲು ಒಂದು ಉಪಾಯವಿದೆ. ನಗರ ಸಾರಿಗೆಯ ಎಲ್ಲಾ ಬಸ್‌ಗಳಿಗೂ ಜಿಪಿಎಸ್ ಅಳವಡಿಸಿ ಅದಕ್ಕಾಗಿ ಒಂದು ಮೊಬೈಲ್ ಆಪ್‌ ಅನ್ನು ಸಿದ್ದಪಡಿಸಿ ಪ್ರಯಾಣಿಕರಿಗೆ ಒದಗಿಸಬೇಕು. ಆ ಆಪ್‌ ಅನ್ನು ಮೊಬೈಲ್‌ನಲ್ಲಿ ಬಳಸುವ ಪ್ರಯಾಣಿಕರು ತಮಗೆ ಬೇಕಾದ ಬಸ್‌ ಮಾರ್ಗ ಸಂಖ್ಯೆಯನ್ನು ಹಾಕಿ ಹುಡುಕಿದರೆ ಆ ಮಾರ್ಗದಲ್ಲಿ ಎಷ್ಟು ಬಸ್‌ಗಳು ಎಲ್ಲೆಲ್ಲಿ ಬರುತ್ತವೆ ಎಂಬುದು ತಿಳಿಯಬೇಕು. ಈ ರೀತಿ ಅನುಕೂಲ ಕಲ್ಪಿಸಿದರೆ ಒಂದು ಬಸ್‌ ಬಂದಾಗ ಎಲ್ಲರೂ ಅದರಲ್ಲೇ ನುಗ್ಗಿ ಹತ್ತುವ ಬದಲಾಗಿ ಹಿಂದೆ ಬರುತ್ತಿರುವ ಬಸ್‌ಗಾಗಿಯೂ ಸ್ವಲ್ಪ ಜನ ಉಳಿಯಬಹುದು. ಅಲ್ಲದೇ ಬಸ್‌ಗಳ ಮಾಹಿತಿ ಮೊಬೈಲ್‌ನಲ್ಲಿಯೇ ದೊರೆಯುವುದರಿಂದ ಸಮಯದ ಉಳಿತಾಯವೂ ಆಗುತ್ತದೆ. ಅನಗತ್ಯವಾಗಿ ಖಾಲಿ ಬಸ್‌ಗಳು ಓಡಾಡುವುದೂ ತಪ್ಪುತ್ತದೆ. ಈ ವಿಷಯವನ್ನು ನಂದನ್ ನಿಲೇಕ...

ಇಂಡಿಬ್ಲಾಗರ್‌ನಲ್ಲಿ ಮೊದಲ ಸ್ಥಾನ ಪಡೆದ ‘ಪಿಸುಮಾತು‘

ಖುಶಿ ಹಂಚಿಕೊಳ್ಳು ಮತ್ತೊಂದು ವಿಷಯ ಸಿಕ್ಕಿದೆ. ನನ್ನ 'ಪಿಸುಮಾತು' ಬ್ಲಾಗ್ ಇಂಡಿಬ್ಲಾಗರ‍್ ಕನ್ನಡ ವಿಭಾಗದಲ್ಲಿ [ ಇಂಡಿಬ್ಲಾಗರ‍್ ] ರ‍್ಯಾಂಕ್‌ನಲ್ಲಿ ೭೪ ಅಂಕಗಳೊಂದಿಗೆ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದೆ. ಈ ಹಿಂದೆ ಒಮ್ಮೆ ೭೩ ಅಂಕಗಳನ್ನು ಗಳಿಸಿದ್ದರೂ ಮೊದಲ ಸ್ಥಾನ ಪಡೆದಿರಲಿಲ್ಲ.  ಬ್ಲಾಗ್‌ಗಳಿಗೆ ಭೇಟಿ ನೀಡುವ ಪ್ರತಿ ಸದಸ್ಯರ ಸಂಖ್ಯೆ, ಬ್ಲಾಗ್‌ನಲ್ಲಿ ಪ್ರಕಟಗೊಳ್ಳುವ ಲೇಖನಗಳ ಸಂಖ್ಯೆ, ಪ್ರತಿಕ್ರಿಯೆಗಳ ಸಂಖ್ಯೆ ಮುಂತಾದವುಗಳ ಆಧಾರದಲ್ಲಿ ಇಂಡಿಬ್ಲಾಗರ‍್ ಅಂಕಗಳನ್ನು ಕೊಡುತ್ತದೆ.  ಅಂದ ಹಾಗೆ ಇದೇನೂ ಅಂತಹ ದೊಡ್ಡ ಸಾಧನೆ ಅಂತ ಅಲ್ಲ. ಏಕೆಂದರೆ ಇಂಡಿಬ್ಲಾಗರ‍್ ತಾಣಕ್ಕೆ ನೋಂದಾಯಿಸದೇ ಇರುವ ನೂರಾರು ಉತ್ತಮ ಬ್ಲಾಗ್‌ಗಳು ಸಹ ಕನ್ನಡದಲ್ಲಿ ಇವೆ. ಅವರೆಲ್ಲಾ ನೋಂದಾಯಿಸಿದರೆ ನನ್ನ ಸ್ಥಾನ ಎಷ್ಟಕ್ಕೆ ಇಳಿಯುತ್ತೋ ಗೊತ್ತಿಲ್ಲ. ಅದೇನೇ ಇದ್ದರೂ ಒಮ್ಮೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆ ಅಂತೂ ಉಳಿಯುವಂತದ್ದು.

ಪೊಲೀಸರಿಗೂ ಬೇಕಿದೆ ಆಧುನಿಕ ಆಯುಧ ಮತ್ತು ರಕ್ಷಾ ಕವಚ

ಮೋದಿ ಬರುತ್ತಾನೆಂದರೆ ಕನಿಷ್ಟ ಸಾವಿರ ಜನ ಪೊಲೀಸರು ಆತನ ರಕ್ಷಣೆಗೆ ನಿಲ್ಲಬೇಕು. ಯಕಶ್ಚಿತ್ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಷ್ಟೊಂದು ರಕ್ಷಣೆ, ಬೊಕ್ಕಸಕ್ಕೆ ಹೊಡೆತ. ಇನ್ನು ಏನೂ ಅಲ್ಲದ ಕೇವಲ ಸಂಸದೆ ಸೋನಿಯಾ ರಕ್ಷಣೆಗಾಗಿ ಖರ್ಚು ಮಾಡುತ್ತಿರುವುದೆಷ್ಟು ? ಸಂಸದ ರಾಹುಲನ ರಕ್ಷಣೆಗೆ ? ಮಾಜಿ ಮಂತ್ರಿ ಅದ್ವಾನಿಗಾಗಿ ? ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಇವರಿಗೆ ಇಷ್ಟೆಲ್ಲಾ ರಕ್ಷಣೆ ? ಇರಲಿ ವಿಷಯಕ್ಕೆ ಬರೋಣ.. ಮೊನ್ನೆ ಮೊನ್ನೆ ಕಲಬುರ್ಗಿಯಲ್ಲಿ ರೌಡಿಯೊಬ್ಬನನ್ನು ಹಿಡಿಯಲು ಹೋದ ದಕ್ಷ ಪೊಲೀಸ್ ಅಧಿಕಾರಿಗಳು ರೌಡಿಯ ಗುಂಡಿಗೇ ಎದೆಕೊಡಬೇಕಾಯ್ತು. ಪೊಲೀಸರ ಗುಂಡಿಗೆ ರೌಡಿಯೇನೋ ಸತ್ತನಾದರೂ ನಮ್ಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನೂ ಕಳೆದುಕೊಳ್ಳಬೇಕಾಯ್ತು. ಮತ್ತೊಬ್ಬ ಕಿರಿಯ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾದರು. ಆದರೆ ಒಮ್ಮೆ ಯೋಚಿಸಿ ನೋಡಿ, ನಿಜವಾಗಿಯೂ ಪ್ರಾಣದ ಹಂಗು ತೊರೆದು ನಮಗಾಗಿ ಹೋರಾಡುವವರು ಇಂತಹ ಅಧಿಕಾರಿಗಳೂ, ಸೈನಿಕರುಗಳೇ ಅಲ್ಲವೇ ? ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕಿ, ಸಾರ್ವಜನಿಕರ ನೆಮ್ಮದಿ ಕೆಡಿಸಿ, ಅದರಿಂದ ರಾಜಕೀಯ ಲಾಭ ಮಾಡಿಕೊಂಡು ಓಡಾಡುವ ಕದೀಮರಿಗೆಲ್ಲಾ ಸಾವಿರಾರು ಪೊಲೀಸರ, ನೂರಾರು ಸೈನಿಕರ ರಕ್ಷಣೆ, ಆದರೆ ಜೀವದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳಿಗೆ ಅಂತ ಕೊಡುವುದು ಒಂದು ಪಡಪೋಸಿ ಪಿಸ್ತೂಲು ಪೇದೆಗಳಿಗೆ ಓಬಿರಾಯನ ಕಾಲದ ಹಂದಿ ಹೊಡೆಯಲೂ ಯೋಗ್ಯ...

ಅ‘ಳ‘ಬೇಡ, ಕ‘ಳ‘ವ‘ಳ‘ ಬೇಡ, ಸ್ಯಾಮ್‌ಸಂಗ್‌ನವರಿಗೆ ಕನ್ನಡ ‘ಳ‘ ಬೇಡ !

'ಪಾಪಿ ಸಮುದ್ರಕ್ಕೆ ಹಾರಿದರೂ ಮೊಣಕಾಲುದ್ದ ನೀರು' ಅನ್ನೋ ಮಾತು ಅಂತೂ ಧೃಡವಾಯ್ತು. ಕಾರಣ ಇಷ್ಟೇ, ಮೊಬೈಲ್‌ನಲ್ಲಿ ಕನ್ನಡ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ಕನಸಾಗಿಯೇ ಇತ್ತು. ಆರ್ಥಿಕ ಸಂಕಷ್ಟದಿಂದಾಗಿ ಒಂದು ಉತ್ತಮ ಸ್ಮಾರ್ಟ್‌‌ಫೋನ್ ಕೊಂಡು ಸ್ನೇಹಿತರಿಗೆ ಕನ್ನಡದಲ್ಲಿ ಸಂದೇಶ ರವಾನಿಸಿ ಖುಷಿ ಪಡುವ ದಿನವು ದೂರವೇ ಇದ್ದವು. ಒಂದು ದಿನ ಅವಸರದಲ್ಲಿ ಹೋಗಿ ಎಲ್‌ಜಿ ಸ್ಮಾರ್ಟ್‌‌ಫೋನ್ ಒಂದನ್ನು ಕೊಂಡು ತಂದೆ. ಕೊಂಡು ತಂದಿದ್ದು ಅವಸರದಲ್ಲಾದ್ದರಿಂದ ಅದರಲ್ಲಿ ಕನ್ನಡ ಇದೆಯೇ, ಅದಕ್ಕೆ ಕನ್ನಡ ಕಲಿಸಬಹುದೇ ಎಂಬುದನ್ನೆಲ್ಲಾ ಯೋಚಿಸಿರಲೇ ಇಲ್ಲ. ನನ್ನ ಅದೃಷ್ಟವೂ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ನಾನು ತಂದ ಎಲ್‌.ಜಿ ಇ-೪೦೦ ಹ್ಯಾಂಡ್‌ಸೆಟ್‌ನಲ್ಲಿ ಕನ್ನಡ ಇರುವುದಂತಿರಲಿ ಅದಕ್ಕೆ ಕನ್ನಡ ತುಂಬುವುದೂ ಸಾಧ್ಯವಿರಲಿಲ್ಲ. ಇದರಿಂದ ತುಂಬಾ ನಿರಾಶಿತನಾದೆ. ಸ್ನೇಹಿತರು 'ಸ್ಯಾಮ್‌ಸಂಗ್ ಗೆಲಾಕ್ಸಿ' ತಗೊ, ಅದು ಕನ್ನಡ ಚೆನ್ನಾಗಿ ಬೆಂಬಲಿಸುತ್ತದೆ ಎಂದರು. ಅಂದಿನಿಂದ ಒಂದು ಸ್ಯಾಮ್‌ಸಂಗ್ ಸ್ಮಾರ್ಟ್‌‌ಫೋನ್ ಪಡೆಯಲೇ ಬೇಕೆಂದು ಸಿದ್ಲಿಂಗು ತರ ದುಡ್ಡು ಹೊಂದಿಸತೊಡಗಿದೆ. ಕೊನೆಗೂ ಸತತ ಆರು ಮಾಸದ ಪರಿಶ್ರಮದ ನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಪಡೆಯುವ ಮಟ್ಟಕ್ಕೆ ಬಂದೆ ಅಂತ ಆಯ್ತು. ನಾನು ಹೊಂದಿಸಿದ ಕೆಲವೇ ಸಾವಿರ ರೂಪಾಯಿಗೆ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಎಂಬ ಮೊಬೈಲ್ ಸೂಕ್ತ ಅನ್ನಿಸಿತು. ಇದರ ಬಗ್ಗೆ  ಅಂತರ್ಜಾಲದಲ್ಲಿ ಸಿ...

ಸಲಿಂಗ ಕಾಮ ಶಿಕ್ಷೆ ಕೊಡುವಂತಾ ತಪ್ಪಾ ?

'ಸಲಿಂಗ ಕಾಮ ಶಿಕ್ಷಾರ್ಹ ಅಪರಾಧ!' ಅಂತ ಸುಪ್ರೀಂ ಕೋರ್ಟು ತೀರ್ಪು ಬರೆಯುವುದರೊಂದಿಗೆ  ಅಷ್ಟೊಂದು ಬಹಿರಂಗವಾಗಿರದಿದ್ದ ಸಲಿಂಗ ಕಾಮದ ವಿಷಯ ಬಯಲಿಗೆ ಬಿದ್ದಿದೆ. ಸಲಿಂಗ ಕಾಮವೆಂದರೆ ಹೆಸರೇ ಹೇಳುವಂತೆ ಗಂಡು ಗಂಡಿನೊಂದಿಗೆ ಹಾಗೂ ಹೆಣ್ಣು ಹೆಣ್ಣಿನೊಂದಿಗೆ ಸಲ್ಲಾಪ ನಡೆಸುವ ಮೂಲಕ ಕಾಮವನ್ನು ಹಂಚಿಕೊಳ್ಳೂವುದು, ಹಾಗೂ ತೀರಿಸಿಕೊಳ್ಳುವುದು. ಇದು ಕೆಲವರಿಗೆ ಅಸಹ್ಯ ಅನ್ನಿಸಿದರೂ, ತಪ್ಪು ಅನ್ನಿಸಿದರೂ, ಸುಪ್ರೀಂ ಕೋರ್ಟು 'ಒದ್ದು ಜೈಲಿಗೆ ಹಾಕಿ' ಅಂದರೂ ಇದನ್ನು ಮಾಡಿಕೊಳ್ಳುವವರನ್ನು ತಡೆಯಲಾದೀತೆ ? ಏಕೆಂದರೆ ದ್ವಿಲಿಂಗಿಗಳ ಸಲ್ಲಾಪದಂತೆಯೇ ಸಲಿಂಗಿಗಳ ಸಲ್ಲಾಪ ಸಹ ಬಹುತೇಕ ನಾಲ್ಕು ಗೋಡೆಗಳ ನಡುವೆಯೇ ನಡೆಯುವ ಕ್ರಿಯೆಯಲ್ಲವೆ ? ಕಾರಣವೇನು ? ಈ ಲೋಕದ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಮವನ್ನು ವ್ಯಕ್ತ ಪಡಿಸುವುದನ್ನು ಕಾಣುತ್ತೇವೆ. ಕಾಮದ ಪರಿಮಾಣ ಹೆಚ್ಚು ಕಡಿಮೆ ಇರಬಹುದೇ ಹೊರತೂ ಅದು ಇಲ್ಲವೇ ಇಲ್ಲ ಎಂದು ಹೇಳಲಾಗದು. ಜೀವಿಗಳ ವಂಶೋದ್ದಾರಕ್ಕೆ ಕಾಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾರಂಭದಲ್ಲಿ ಕಾಮವು ಪ್ರಕೃತಿದತ್ತವಾಗಿ ಶುರುವಾಗಿದ್ದೇ ವಂಶೋದ್ದಾರಕ್ಕಾಗಿ. ಮಾನವ ನಾಗರಿಕತೆಗೆ ಕಾಲಿಟ್ಟ ನಂತರ ಹೆಚ್ಚು ಹೆಚ್ಚು ಸುಖಗಳನ್ನು ಅರಸತೊಡಗಿದ. ಅವುಗಳಲ್ಲಿ ಸುಲಭಕ್ಕೆ ಸಿಕ್ಕಿದ್ದೇ ಕಾಮ. ಏಕೆಂದರೆ ಇದನ್ನು ಹುಡುಕಿಕೊಂಡು ಬೇರೆಲ್ಲೋ ಕಾಡು ಮೇಡು ಅಲೆಯುವ ಅಗತ್ಯ ಇರಲೇ ಇಲ್ಲವಲ್ಲ ?! ತನ್ನೊಳಗೇ ಹುಟ್ಟಿಕೊಳ್ಳುತ್ತಿ...

ಧನ್ಯವಾದಗಳು ‘ಪ್ರಜಾವಾಣಿ ಮೆಟ್ರೋ‘

ಪ್ರಜಾವಾಣಿ ಪತ್ರಿಕೆಯ ಮೆಟ್ರೋ ಪುರವಣಿಯ ಇಂದಿನ ಸಂಚಿಕೆಯ ಮೂರನೆ ಪುಟದಲ್ಲಿ ನನ್ನ ಬ್ಲಾಗ್ ಬಗ್ಗೆ ಲೇಖನ ಪ್ರಕಟವಾಗಿದೆ. ನಾನಿಲ್ಲಿ ಅನೇಕ ಋಣಾತ್ಮಕ ವಿಷಯಗಳ ಬಗ್ಗೆ ಬರೆದರೂ 'ಸಾಕ್ಷಿ'ಯವರು ಮತ್ರ ಬ್ಲಾಗ್ ಬಗ್ಗೆ ಧನಾತ್ಮಕವಾಗಿಯೇ ಬರೆದಿದ್ದಾರೆ. ಇದಕ್ಕಾಗಿ ಲೇಖಕರು ಹಾಗೂ ಪ್ರಜಾವಾಣಿಗೆ ನನ್ನ ಧನ್ಯವಾದಗಳು. ಈ ಲೇಖನದಲ್ಲಿ ಎರಡು ವಿಷಯಗಳ ಪ್ರಸ್ತಾಪದ ಬಗ್ಗೆ ಕೊಂಚ ವಿವರಣೆ ಕೊಡಬೇಕು ಅನ್ನಿಸಿದೆ. ಮೊದಲನೆಯದು 'ಬ್ಲಾಗ್ ಶೀರ್ಷಿಕೆಯ ಲಾಲಿತ್ಯಕ್ಕೆ ವಿರುದ್ಧವಾಗಿ ಶ್ರೀಪತಿ ಅವರು ಸಮಕಾಲೀನ ಸಂಗತಿಗಳನ್ನು ಗಟ್ಟಿ ದನಿಯಲ್ಲಿ ಚರ್ಚಿಸಿರುವುದು ಬ್ಲಾಗ್‌ನ ವಿಶೇಷ.' ಎಂದು ಸಾಕ್ಷಿಯವರು ಹೇಳಿದ್ದಾರೆ. ನಿಜ, 'ಪಿಸುಮಾತು' ಹೆಸರಿಗೂ ನಾನು ಬರೆಯುತ್ತಿರುವ ವಿಷಯಗಳಿಗೂ ಬಹಳಷ್ಟು ವೈರುಧ್ಯವಿದೆ. ಪಿಸುಮಾತು ಹೆಸರಿನ ಮಾಸ ಪತ್ರಿಕೆ ಶುರು ಮಾಡಿದಾಗಿನಿಂದ (೨೦೦೪) ಈ ಹೆಸರು ನನ್ನೊಂದಿಗೆ ತಳಕು ಹಾಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲಿಗೆ ಈ ಬ್ಲಾಗ್ ಶುರು ಮಾಡುವಾಗ ಕಥೆ, ಕವನ, ಲಘು ಲೇಖನಗಳನ್ನೇ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಈ ಸಮಾಜದ ಕ್ರೂರತೆಗಳನ್ನು, ವಂಚನೆಗಳನ್ನ ನೋಡುತ್ತಾ ನೋಡುತ್ತಾ ಋಣಾತ್ಮಕ ವಿಷಯಗಳನ್ನ ಬರೆಯದೇ ಇರಲು ಆಗಲಿಲ್ಲ. ಅಂತಹ ವಿಷಯಗಳಿಗಾಗಿ ಮತ್ತೊಂದು ಬ್ಲಾಗ್ ರಚಿಸುವ ಯೋಚನೆ ಬಂದರೂ 'ಆಗಿದ್ದಾಗ್ಲಿ, ಓದೋದು ಓದ್ತಾರೆ, ಬಿಡೋರು ಬಿಡ್ತಾರೆ' ಎಂಬ ಉಡಾಪೆಯಿಂದಲೇ ಇದ...

ಜನರ ಹೃದಯ ಸಿಂಹಾಸನವೇರದ ರಾಜ !

ನಿನ್ನೆ ತೀರಿಕೊಂಡ ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ‍್ ಅವರಿಗೆ ನನ್ನ ಶ್ರದ್ದಾಂಜಲಿಗಳಿವೆ. ಒಬ್ಬ ವ್ಯಕ್ತಿ ತೀರಿಕೊಂಡಾಗಲೂ ಅವರ ಬಗ್ಗೆ ಋಣಾತ್ಮಕವಾಗಿ ಯೋಚಿಸಬಹುದಾ ? ಬರೆಯಬಹುದಾ ? ಅಂತ ಕೇಳಬಹುದು. ಧನಾತ್ಮಕವಾಗಿ ಯೋಚಿಸಲು ಯಾವುದೇ ವಿಷಯವನ್ನು ಬಿಟ್ಟು ಹೋಗದ ವ್ಯಕ್ತಿಯ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುವುದು. ನಿಜ, ಎಲ್ಲಾ ವ್ಯಕ್ತಿಗಳಲ್ಲೂ ಅದರಲ್ಲೂ ಮೇಲ್ಮಟ್ಟದ ವ್ಯಕ್ತಿಗಳ ಜೀವನವನ್ನು ಅವಲೋಕಿಸಿದಾಗ ಅವರೆಷ್ಟೇ ಉತ್ತಮ ಜೀವನ ನಡೆಸಿದ್ದರೂ ಕೆಲವೊಂದು ತಪ್ಪುಗಳು ಇರಲೂ ಬಹುದು. ಆದರೆ ಅವುಗಳನ್ನು ಮರೆಸಿ ಹಾಕುವಷ್ಟು ಉತ್ತಮ ಸಾಧನೆ/ಕೆಲಸಗಳನ್ನು ಅವರು ಮಾಡಿದ್ದಾಗ ಮಾತ್ರ ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಲು ಸಾಧ್ಯ.  ಆದರೆ ಶ್ರೀಕಂಠದತ್ತರು ಅಂತಹ ಯಾವ ಘನಾಂಧಾರಿ ಕೆಲಸ ಮಾಡಿದ್ದಾರೆ ? ಇಂದಿನ ಪತ್ರಿಕೆಗಳನ್ನ ಹೊರಳಿಸಿದಾಗ ಒಬ್ಬ ಹಳ್ಳಿಯ ಕ್ರಿಕೆಟಿಗ 'ಒಂದು ಬಾರಿ ಚೆನ್ನೈಗೆ ನಮ್ಮೊಟ್ಟಿಗೇ ಬಂದರು, ಚೆನ್ನಾಗಿ ಬೆರೆತು ಮಾತನಾಡಿದರು' ಅನ್ನುವ ಒಂದಂಶವನ್ನು ಬಿಟ್ಟರೆ ಬೇರ‍್ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಮಾಹಿತಿಯೂ ಸಿಗಲಿಲ್ಲ. ಅದರ ಬಗ್ಗೆ ಈ ಹಿಂದೆ ಸುದ್ದಿ ಬಂದುದರ ಬಗ್ಗೆಯೂ ನನಗೆ ತಿಳಿದಿಲ್ಲ. ಇರುವಷ್ಟು ದಿನವೂ ರಾಜವೈಭೋಗ ಅನುಭವಿಸುತ್ತಾ, ಅರಮನೆಯನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಕಿತ್ತಾಡುತ್ತಾ, ತಮಗೆ ಸಂಬಂಧವೇ ಇಲ್ಲದ ಕರ್ನಾಟಕ ಕ್ರಿಕೆಟ್‌ ಮಂಡಳಿಯ ಅಧಿಕಾರವನ್ನು ಅನುಭವಿಸುತ್ತಾ,...