ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವ್ಯಂಗ್ಯಚಿತ್ರಾಚಾರ್ಯ !

ಇತ್ತೀಚಿನ ದಿನಗಳಲ್ಲಿ ದೇಶದ ಮುಂಚೂಣಿ ವ್ಯಂಗ್ಯಚಿತ್ರಕಾರರ ಸಾಲಿಗೆ ಕುಂದಾಪುರದ ಸತೀಶ್ ಆಚಾರ್ಯ ಸಹ ಸೇರ್ಪಡೆಯಾಗಿದ್ದಾರೆ. ಇವರ ವ್ಯಂಗ್ಯಚಿತ್ರಗಳ ಸಂಗ್ರಹದ ಮೊದಲ ಪುಸ್ತಕ 'ಮೈನ್, ಹಮ್ & ಆಪ್' ಇತ್ತೀಚಿಗೆ ಬಿಡುಗಡೆಯಾಗಿದೆ.  ನಿನ್ನೆ ತಾನೆ ಪುಸ್ತಕವನ್ನು ತರಿಸಿಕೊಂಡೆ. ಇದೀಗ ಎದುರಾಗಿರುವ ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿರುವುದರಿಂದ ಚುನಾವಣೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ವಸ್ತುಗಳೇ ಇಲ್ಲಿನ ವ್ಯಂಗ್ಯಚಿತ್ರಗಳಲ್ಲಿ ಇರುವುದು.  ಡೆಮಿ ಅಳತೆಯ ಪುಸ್ತಕವನ್ನು ಅತ್ಯುತ್ತಮವಾಗಿ ಬಣ್ಣದಲ್ಲಿ ಆರ್ಟ್‌ ಪೇಪರ‍್ ಬಳಸಿ ಕುಂದಾಪುರದಲ್ಲಿಯೇ ಮುದ್ರಿಸಲಾಗಿದೆ ಅನ್ನುವುದು ವಿಶೇಷ. ಹಾಗೆಯೆ ಈ ಪುಸ್ತಕವನ್ನು ಆನ್‌ಲೈನ್‌ನಲ್ಲಿ ಕೊಂಡರೆ  ಜೊತೆಗೆ ಆಚಾರ್ಯರು ಬಿಡಿಸಿದ ವ್ಯಂಗ್ಯಚಿತ್ರದ ಅಸಲಿ ಪ್ರತಿಯೊಂದು ಸಹ ನಮಗೆ ಸಿಗಲಿದೆ.  ಕುಂದಾಪುರದಲ್ಲಿ ಹುಟ್ಟಿ ಬೆಳೆದ ಸತೀಶ್ ಅವರು ಓದಿದ್ದು ಬಿ.ಕಾಂ, ಹಾಗೂ ಎಂಬಿಎ. ಕಾಲೇಜು ದಿನಗಳಲ್ಲೇ ಕನ್ನಡದ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯಲಾರಂಬಿಸಿದರು. ನಂತರ ವ್ಯಂಗ್ಯಚಿತ್ರದ ಗೀಳು ಹತ್ತಿಸಿಕೊಂಡು ಮುಂಬೈಗೆ ತೆರಳಿ ಅಲ್ಲಿ ಹತ್ತಾರು ವರ್ಷಗಳ ಕಾಲ ಕಂಡ ಕಂಡ ಪತ್ರಿಕೆಗಳಿಗೆ ಗೆರೆ ಗೀಚಿದ ನಂತರ ಮಿಡ್-ಡೇ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಉದ್ಯೋಗ ದೊರೆಯಿತು. ಕಳೆದ ಒಂಬತ್ತು ವರ್ಷಗಳಿಂದಲೂ ಆ ಪತ್ರಿಕೆಗೆ ದಿನನಿತ್ಯ ವ್ಯಂಗ್ಯಚಿತ್ರಗಳನ್ನು ...

ನಾವೆಲ್ಲಿ ಇವರೆಲ್ಲಿ ?

ನನಗೆ ತಿಳಿದ ಹುಡುಗಿಯೊಬ್ಬಳು ಹತ್ತನೇ ತರಗತಿ ಪರೀಕ್ಷೆ ಬರೆದವಳು ಕರೆ ಮಾಡಿದ್ದಳು. ತುಂಬಾ ಬೇಸರದಲ್ಲಿದ್ದ ಅವಳ ಧ್ವನಿಯಿಂದಲೇ ತಿಳಿಯಿತು, ಪರೀಕ್ಷೆ ಸುಖಕರವಾಗಿ ಆಗಿಲ್ಲ ಅಂತ. ವಿಚಾರಿಸಿದಾಗ "ಗಣಿತದಲ್ಲಿ ತುಂಬಾ ಕಡಿಮೆ ಅಂಕ ಬರಬಹುದು. ಕಷ್ಟ ಇತ್ತು. ಊಟ ಏನೂ ಸೇರ್ತಿಲ್ಲ, ಛೇ' ಎಂದು ಅಲವತ್ತುಕೊಂಡಳು. ನಾನು ಸಮಾಧಾನ ಮಾಡುತ್ತಾ, "ಹೋದರೆ ಹೋಗಲಿ ಬಿಡು, ಅನುತ್ತೀರ್ಣ ಅಂತೂ ಆಗಲ್ಲ ತಾನೆ ? ಎಷ್ಟು ಅಂಕ ಬರಬಹುದು ?" ಎಂದು ಕೇಳಿದೆ. ಅದಕ್ಕವಳು, "ನನ್ನ ಪ್ರಕಾರ ಬರೀ ಎಂಬತ್ತೈದು ಬಂದರೆ ಹೆಚ್ಚು!" ಅಂದಳು ತುಂಬಾ ಬೇಜಾರಿನಿಂದ. ನಗಬೇಕೋ ಅಳಬೇಕೋ ತಿಳಿಯಲಿಲ್ಲ. ನಾವು ಓದುವಾಗ ಗಣಿತ ಹಾಗೂ ಇಂಗ್ಲೀಷಿನಲ್ಲಿ ಮೂವತ್ತೈದು ಬಂದರೆ ನಾವು ಈ ಲೋಕದಲ್ಲಿ ಇರುತ್ತಿರಲಿಲ್ಲ. 'ಅನುತ್ತೀರ್ಣ' ಅನ್ನುವ ಒಂದು ಘಟನೆಯನ್ನು ಉಳಿದು ಬೇರೇನೂ ನಮ್ಮನ್ನು ಕಾಡುತ್ತಿರಲಿಲ್ಲ. ಐವತ್ತರ ಆಜೂಬಾಜೂ ಅಂಕಗಳು ಬಂದರಂತೂ ನಮ್ಮ ಮೇಲೆ ನಮಗೇ ಅನುಮಾನ ಮೂಡುತ್ತಿತ್ತು! ಆದರೆ ಈಗಿನ ಮಕ್ಕಳಿಗೆ ಅದೇನಾಗಿದೆ ನೋಡಿ ? ಎಂಬತ್ತೈದು ಅಂಕ ಬರುವಂತಿದ್ದರೂ ಊಟ ಬಿಡುವ ಸ್ಥಿತಿಗೆ ತಲುಪುತ್ತಾರೆಂದರೆ... ತಪ್ಪು ಎಲ್ಲಿದೆಯೋ ಏನೋ... ಯೋಚಿಸುತ್ತಾ ಇನೊಂದಿಷ್ಟು ಸಮಾಧಾನ ಹೇಳಿದೆ. * * * ಅಂದ ಹಾಗೆ ಫೇಸ್‌ಬುಕ್‌ನಲ್ಲಿ ‘ಮುದ್ದು ತೀರ್ಥಹಳ್ಳಿ‘ ಎಂಬ ಹುಡುಗಿ ಹಾಕಿರುವ ಪ್ರಕಟಣೆ ಎಲ್ಲಾ ವಿದ್ಯಾರ್ಥಿಗಳೂ ಅಳವಡಿಸಿಕೊಳ್ಳುವ...

ಒಂದು ಕಾಡಲ್ಲಿ ಒಂದು ಸಿಂಹ ಇತ್ತಂತೆ !

ಒಂದು ಕಾಡಲ್ಲಿ ಒಂದು ಸಿಂಹ ಇತ್ತಂತೆ. ಅದು ಉಳಿದ ಪ್ರಾಣಿಗಳ ಹತ್ತಿರ 'ನಾವೆಲ್ಲಾ ಒಂದೇ, ಆ ಕಾಡೆಮ್ಮೆಗಳು ಮಾತ್ರ ಬೇರೆ, ನಾವೆಲ್ಲಾ ಒಂದಾಗಿ ಅವುಗಳನ್ನ ಎದುರಿಸಬೇಕು. ಇಲ್ಲಾಂದರೆ ನಮ್ಮನ್ನ ಅವು ತುಳಿದು ಸಾಯಿಸಿ ಬಿಡುತ್ತವೆ.' ಅಂತ ಎಲ್ಲರನ್ನೂ ನಂಬಿಸುತ್ತಿತ್ತಂತೆ.  ಒಂದಿಷ್ಟು ಹಂದಿಗಳು ನೆಲ ಬಗೆದು ಲಾಭ ಮಾಡಿಕೊಂಡಾಗ 'ಮೈನಿಂಗ್ ಮಾಫಿಯಾ' ಅಂತ ಪುಸ್ತಕವನ್ನೂ ಬರೆದು ಫೋಸು ಕೊಟ್ಟಿತಂತೆ. ಅದಾಗಿ ಕೆಲ ದಿನಗಳ ನಂತರ ಆ ಕಾಡಿಗೆ ಚುನಾವಣೆ ಬಂದು ಅದರಲ್ಲಿ ಈ ಸಿಂಹ ಸ್ಪರ್ಧಿಸಬೇಕು ಅಂತ ಹೊರಟಾಗ, ನೆಲೆ ಬಗೆದ ಹಂದಿಗಳು ಸೇರಿದ ಪಕ್ಷಕ್ಕೇ ತಾನೂ ಸೇರಿಕೊಂಡಿತಂತೆ. ಹಾಗೆಯೇ ತನ್ನ ಜಾತಿಯ ಸಿಂಹಗಳ ಮತ ಅತಿ ಮುಖ್ಯ ಅಂತ ಕೂಡಾ ಗೊತ್ತಾಯ್ತಂತೆ. ಕೂಡಲೇ ನಾವೆಲ್ಲಾ ಒಂದು ಎಂದು ಇಷ್ಟು ದಿನ ಹೇಳಿಕೊಂಡು ಬಂದಿದ್ದು 'ತಮಾಷೆಗೆ' ಎಂದು ತಿಪ್ಪೆ ಸಾರಿಸಿದ ಸಿಂಹ, ಉಳಿದ ಸಿಂಹಗಳ ಬಳಿ 'ನೋಡಿ, ನಾನೂ ಸಿಂಹನೇ... ನೀವೆಲ್ಲಾ ನನಗೇ ಮತ ಹಾಕಬೇಕು' ಅಂತ ಬೇಡಿಕೊಳ್ಳತೊಡಗಿತಂತೆ. ಇದನ್ನು ಕಂಡು ಕಂಗಾಲಾದ ಉಳಿದ ಸಿಂಹಗಳು 'ಎಲಾ ಎಲಾ ಪ್ರತಾಪಿ.. ಬ್ರಾಮ್ರೇ ಪಲ್ಟಿ ಹೊಡಿಯೋರು ಅಂದ್ರೆ ನೀ ಅವ್ರಿಗಿಂತಾ ಮೆಘಾ ಪಲ್ಟಿ ಕಣಲಾ! ಮತ ತಕ್ಕಂಡು ಮಂತ್ರಿ ಆದ್ಮ್ಯಾಕೆ ಮತ್ತೆ ಇಷ್ಟು ದಿನದಂಗೇ ನಮ್ಗೆ ಅಂಡು ತೋರ‍್ಸಿ ಕಾಡಂದಿಗಳ ಹೆಗಲ್ಮೇಲೆ ಕೈ ಹಾಕ್ಯಂಡು ಹೊಂಟೋಗಲ್ವೇನಲಾ?' ಎಂಬ ಗೊಂದಲಕ್ಕೆ ಬಿದ್ದವಂತೆ.

ಬಿಎಂಟಿಸಿ ಬಸ್‌ಗಳಿಗೆ ಜಿಪಿಎಸ್ ಅಳವಡಿಸಬೇಕು

ನೀವು ಬೆಂಗಳೂರಿನ ನಗರ ಸಾರಿಗೆಯಲ್ಲಿ ಓಡಾಡಿದ್ದರೆ ನರಕಕ್ಕೆ ಹೋದರೂ ಸುಖವಾಗಿ ಇರಬಲ್ಲಿರಿ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆಯ ಸಮಯವಂತೂ ಜನದಟ್ಟಣೆ ಹೇಳತೀರದು. ನೂರಾರು ಬಸ್‌ಗಳು ಇದ್ದರೂ ಸಹ ನಿಲ್ಲಲಿಕ್ಕೂ ಸಹ ಸ್ಥಳವಿಲ್ಲದಂತಹ ಸ್ಥಿತಿ. ಇದು ಒಂದೆಡೆಯಾದರೆ, ನಮಗೆ ಬೇಕಾದ ಬಸ್‌ ಯಾವ ಸಮಯಕ್ಕೆ ಬರುತ್ತದೆ, ಬರುತ್ತದೋ ಇಲ್ಲವೋ ಎಂಬ ಅನುಮಾನದಲ್ಲೇ ಕಾಯುತ್ತಿರಬೇಕು. ಬಂದರೆ ಹಡೆಯಲು ತಯಾರಾದ ತಾಯಿಯಂತೆ ಹೊಟ್ಟೆ ತುಂಬಿಸಿಕೊಂಡ ಬಸ್‌ಗಳೇ ಬರುತ್ತವೆ. ಅದರಲ್ಲೇ ಜನ ನುಗ್ಗಿ ಹತ್ತಿಕೊಂಡು ಹೋದರೆ ಅದರ ಹಿಂದೆ ಖಾಲಿ ಬಸ್‌ಗಳು ಬರುತ್ತವೆ.  ಇದನ್ನು ಸರಿಪಡಿಸಲು ಒಂದು ಉಪಾಯವಿದೆ. ನಗರ ಸಾರಿಗೆಯ ಎಲ್ಲಾ ಬಸ್‌ಗಳಿಗೂ ಜಿಪಿಎಸ್ ಅಳವಡಿಸಿ ಅದಕ್ಕಾಗಿ ಒಂದು ಮೊಬೈಲ್ ಆಪ್‌ ಅನ್ನು ಸಿದ್ದಪಡಿಸಿ ಪ್ರಯಾಣಿಕರಿಗೆ ಒದಗಿಸಬೇಕು. ಆ ಆಪ್‌ ಅನ್ನು ಮೊಬೈಲ್‌ನಲ್ಲಿ ಬಳಸುವ ಪ್ರಯಾಣಿಕರು ತಮಗೆ ಬೇಕಾದ ಬಸ್‌ ಮಾರ್ಗ ಸಂಖ್ಯೆಯನ್ನು ಹಾಕಿ ಹುಡುಕಿದರೆ ಆ ಮಾರ್ಗದಲ್ಲಿ ಎಷ್ಟು ಬಸ್‌ಗಳು ಎಲ್ಲೆಲ್ಲಿ ಬರುತ್ತವೆ ಎಂಬುದು ತಿಳಿಯಬೇಕು. ಈ ರೀತಿ ಅನುಕೂಲ ಕಲ್ಪಿಸಿದರೆ ಒಂದು ಬಸ್‌ ಬಂದಾಗ ಎಲ್ಲರೂ ಅದರಲ್ಲೇ ನುಗ್ಗಿ ಹತ್ತುವ ಬದಲಾಗಿ ಹಿಂದೆ ಬರುತ್ತಿರುವ ಬಸ್‌ಗಾಗಿಯೂ ಸ್ವಲ್ಪ ಜನ ಉಳಿಯಬಹುದು. ಅಲ್ಲದೇ ಬಸ್‌ಗಳ ಮಾಹಿತಿ ಮೊಬೈಲ್‌ನಲ್ಲಿಯೇ ದೊರೆಯುವುದರಿಂದ ಸಮಯದ ಉಳಿತಾಯವೂ ಆಗುತ್ತದೆ. ಅನಗತ್ಯವಾಗಿ ಖಾಲಿ ಬಸ್‌ಗಳು ಓಡಾಡುವುದೂ ತಪ್ಪುತ್ತದೆ. ಈ ವಿಷಯವನ್ನು ನಂದನ್ ನಿಲೇಕ...

ಇಂಡಿಬ್ಲಾಗರ್‌ನಲ್ಲಿ ಮೊದಲ ಸ್ಥಾನ ಪಡೆದ ‘ಪಿಸುಮಾತು‘

ಖುಶಿ ಹಂಚಿಕೊಳ್ಳು ಮತ್ತೊಂದು ವಿಷಯ ಸಿಕ್ಕಿದೆ. ನನ್ನ 'ಪಿಸುಮಾತು' ಬ್ಲಾಗ್ ಇಂಡಿಬ್ಲಾಗರ‍್ ಕನ್ನಡ ವಿಭಾಗದಲ್ಲಿ [ ಇಂಡಿಬ್ಲಾಗರ‍್ ] ರ‍್ಯಾಂಕ್‌ನಲ್ಲಿ ೭೪ ಅಂಕಗಳೊಂದಿಗೆ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದೆ. ಈ ಹಿಂದೆ ಒಮ್ಮೆ ೭೩ ಅಂಕಗಳನ್ನು ಗಳಿಸಿದ್ದರೂ ಮೊದಲ ಸ್ಥಾನ ಪಡೆದಿರಲಿಲ್ಲ.  ಬ್ಲಾಗ್‌ಗಳಿಗೆ ಭೇಟಿ ನೀಡುವ ಪ್ರತಿ ಸದಸ್ಯರ ಸಂಖ್ಯೆ, ಬ್ಲಾಗ್‌ನಲ್ಲಿ ಪ್ರಕಟಗೊಳ್ಳುವ ಲೇಖನಗಳ ಸಂಖ್ಯೆ, ಪ್ರತಿಕ್ರಿಯೆಗಳ ಸಂಖ್ಯೆ ಮುಂತಾದವುಗಳ ಆಧಾರದಲ್ಲಿ ಇಂಡಿಬ್ಲಾಗರ‍್ ಅಂಕಗಳನ್ನು ಕೊಡುತ್ತದೆ.  ಅಂದ ಹಾಗೆ ಇದೇನೂ ಅಂತಹ ದೊಡ್ಡ ಸಾಧನೆ ಅಂತ ಅಲ್ಲ. ಏಕೆಂದರೆ ಇಂಡಿಬ್ಲಾಗರ‍್ ತಾಣಕ್ಕೆ ನೋಂದಾಯಿಸದೇ ಇರುವ ನೂರಾರು ಉತ್ತಮ ಬ್ಲಾಗ್‌ಗಳು ಸಹ ಕನ್ನಡದಲ್ಲಿ ಇವೆ. ಅವರೆಲ್ಲಾ ನೋಂದಾಯಿಸಿದರೆ ನನ್ನ ಸ್ಥಾನ ಎಷ್ಟಕ್ಕೆ ಇಳಿಯುತ್ತೋ ಗೊತ್ತಿಲ್ಲ. ಅದೇನೇ ಇದ್ದರೂ ಒಮ್ಮೆ ಪ್ರಥಮ ಸ್ಥಾನ ಗಳಿಸಿದ ಹೆಮ್ಮೆ ಅಂತೂ ಉಳಿಯುವಂತದ್ದು.

ಪೊಲೀಸರಿಗೂ ಬೇಕಿದೆ ಆಧುನಿಕ ಆಯುಧ ಮತ್ತು ರಕ್ಷಾ ಕವಚ

ಮೋದಿ ಬರುತ್ತಾನೆಂದರೆ ಕನಿಷ್ಟ ಸಾವಿರ ಜನ ಪೊಲೀಸರು ಆತನ ರಕ್ಷಣೆಗೆ ನಿಲ್ಲಬೇಕು. ಯಕಶ್ಚಿತ್ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಷ್ಟೊಂದು ರಕ್ಷಣೆ, ಬೊಕ್ಕಸಕ್ಕೆ ಹೊಡೆತ. ಇನ್ನು ಏನೂ ಅಲ್ಲದ ಕೇವಲ ಸಂಸದೆ ಸೋನಿಯಾ ರಕ್ಷಣೆಗಾಗಿ ಖರ್ಚು ಮಾಡುತ್ತಿರುವುದೆಷ್ಟು ? ಸಂಸದ ರಾಹುಲನ ರಕ್ಷಣೆಗೆ ? ಮಾಜಿ ಮಂತ್ರಿ ಅದ್ವಾನಿಗಾಗಿ ? ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಇವರಿಗೆ ಇಷ್ಟೆಲ್ಲಾ ರಕ್ಷಣೆ ? ಇರಲಿ ವಿಷಯಕ್ಕೆ ಬರೋಣ.. ಮೊನ್ನೆ ಮೊನ್ನೆ ಕಲಬುರ್ಗಿಯಲ್ಲಿ ರೌಡಿಯೊಬ್ಬನನ್ನು ಹಿಡಿಯಲು ಹೋದ ದಕ್ಷ ಪೊಲೀಸ್ ಅಧಿಕಾರಿಗಳು ರೌಡಿಯ ಗುಂಡಿಗೇ ಎದೆಕೊಡಬೇಕಾಯ್ತು. ಪೊಲೀಸರ ಗುಂಡಿಗೆ ರೌಡಿಯೇನೋ ಸತ್ತನಾದರೂ ನಮ್ಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನೂ ಕಳೆದುಕೊಳ್ಳಬೇಕಾಯ್ತು. ಮತ್ತೊಬ್ಬ ಕಿರಿಯ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾದರು. ಆದರೆ ಒಮ್ಮೆ ಯೋಚಿಸಿ ನೋಡಿ, ನಿಜವಾಗಿಯೂ ಪ್ರಾಣದ ಹಂಗು ತೊರೆದು ನಮಗಾಗಿ ಹೋರಾಡುವವರು ಇಂತಹ ಅಧಿಕಾರಿಗಳೂ, ಸೈನಿಕರುಗಳೇ ಅಲ್ಲವೇ ? ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕಿ, ಸಾರ್ವಜನಿಕರ ನೆಮ್ಮದಿ ಕೆಡಿಸಿ, ಅದರಿಂದ ರಾಜಕೀಯ ಲಾಭ ಮಾಡಿಕೊಂಡು ಓಡಾಡುವ ಕದೀಮರಿಗೆಲ್ಲಾ ಸಾವಿರಾರು ಪೊಲೀಸರ, ನೂರಾರು ಸೈನಿಕರ ರಕ್ಷಣೆ, ಆದರೆ ಜೀವದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳಿಗೆ ಅಂತ ಕೊಡುವುದು ಒಂದು ಪಡಪೋಸಿ ಪಿಸ್ತೂಲು ಪೇದೆಗಳಿಗೆ ಓಬಿರಾಯನ ಕಾಲದ ಹಂದಿ ಹೊಡೆಯಲೂ ಯೋಗ್ಯ...

ಅ‘ಳ‘ಬೇಡ, ಕ‘ಳ‘ವ‘ಳ‘ ಬೇಡ, ಸ್ಯಾಮ್‌ಸಂಗ್‌ನವರಿಗೆ ಕನ್ನಡ ‘ಳ‘ ಬೇಡ !

'ಪಾಪಿ ಸಮುದ್ರಕ್ಕೆ ಹಾರಿದರೂ ಮೊಣಕಾಲುದ್ದ ನೀರು' ಅನ್ನೋ ಮಾತು ಅಂತೂ ಧೃಡವಾಯ್ತು. ಕಾರಣ ಇಷ್ಟೇ, ಮೊಬೈಲ್‌ನಲ್ಲಿ ಕನ್ನಡ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ಕನಸಾಗಿಯೇ ಇತ್ತು. ಆರ್ಥಿಕ ಸಂಕಷ್ಟದಿಂದಾಗಿ ಒಂದು ಉತ್ತಮ ಸ್ಮಾರ್ಟ್‌‌ಫೋನ್ ಕೊಂಡು ಸ್ನೇಹಿತರಿಗೆ ಕನ್ನಡದಲ್ಲಿ ಸಂದೇಶ ರವಾನಿಸಿ ಖುಷಿ ಪಡುವ ದಿನವು ದೂರವೇ ಇದ್ದವು. ಒಂದು ದಿನ ಅವಸರದಲ್ಲಿ ಹೋಗಿ ಎಲ್‌ಜಿ ಸ್ಮಾರ್ಟ್‌‌ಫೋನ್ ಒಂದನ್ನು ಕೊಂಡು ತಂದೆ. ಕೊಂಡು ತಂದಿದ್ದು ಅವಸರದಲ್ಲಾದ್ದರಿಂದ ಅದರಲ್ಲಿ ಕನ್ನಡ ಇದೆಯೇ, ಅದಕ್ಕೆ ಕನ್ನಡ ಕಲಿಸಬಹುದೇ ಎಂಬುದನ್ನೆಲ್ಲಾ ಯೋಚಿಸಿರಲೇ ಇಲ್ಲ. ನನ್ನ ಅದೃಷ್ಟವೂ ನೆಟ್ಟಗಿರಲಿಲ್ಲ ಅಂತ ಕಾಣುತ್ತೆ. ನಾನು ತಂದ ಎಲ್‌.ಜಿ ಇ-೪೦೦ ಹ್ಯಾಂಡ್‌ಸೆಟ್‌ನಲ್ಲಿ ಕನ್ನಡ ಇರುವುದಂತಿರಲಿ ಅದಕ್ಕೆ ಕನ್ನಡ ತುಂಬುವುದೂ ಸಾಧ್ಯವಿರಲಿಲ್ಲ. ಇದರಿಂದ ತುಂಬಾ ನಿರಾಶಿತನಾದೆ. ಸ್ನೇಹಿತರು 'ಸ್ಯಾಮ್‌ಸಂಗ್ ಗೆಲಾಕ್ಸಿ' ತಗೊ, ಅದು ಕನ್ನಡ ಚೆನ್ನಾಗಿ ಬೆಂಬಲಿಸುತ್ತದೆ ಎಂದರು. ಅಂದಿನಿಂದ ಒಂದು ಸ್ಯಾಮ್‌ಸಂಗ್ ಸ್ಮಾರ್ಟ್‌‌ಫೋನ್ ಪಡೆಯಲೇ ಬೇಕೆಂದು ಸಿದ್ಲಿಂಗು ತರ ದುಡ್ಡು ಹೊಂದಿಸತೊಡಗಿದೆ. ಕೊನೆಗೂ ಸತತ ಆರು ಮಾಸದ ಪರಿಶ್ರಮದ ನಂತರ ಸ್ಯಾಮ್‌ಸಂಗ್ ಗೆಲಾಕ್ಸಿ ಪಡೆಯುವ ಮಟ್ಟಕ್ಕೆ ಬಂದೆ ಅಂತ ಆಯ್ತು. ನಾನು ಹೊಂದಿಸಿದ ಕೆಲವೇ ಸಾವಿರ ರೂಪಾಯಿಗೆ ಸ್ಯಾಮ್‌ಸಂಗ್ ಗೆಲಾಕ್ಸಿ ಟ್ರೆಂಡ್ ಎಂಬ ಮೊಬೈಲ್ ಸೂಕ್ತ ಅನ್ನಿಸಿತು. ಇದರ ಬಗ್ಗೆ  ಅಂತರ್ಜಾಲದಲ್ಲಿ ಸಿ...