ಯಡಿಯೂರಪ್ಪ "ದೇವೇಗೌಡ ಮತ್ತು ಕುಮಾರಸ್ವಾಮಿ ಆಡಳಿತದ ಅವಧಿಯ ಅಕ್ರಮಗಳನ್ನ ಪುಸ್ತಕ ಬರೆಯುತ್ತೇನೆ" ಅನ್ನುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಇಬ್ಬರನ್ನೂ ಜೈಲಿಗೆ ಕಳಿಸುತ್ತೇನೆ ಅಂದರು, ೧೯೯೧ ರಿಂದಲೂ ನಡೆದ ಹಗರಣಗಳನ್ನ ಬಯಲಿಗೆಳೆಯುತ್ತೇನೆ ಅಂದರು. ಇದುವರೆಗೂ ಯಾವುದೂ ಆಗಿಲ್ಲ. ಒಂದು ವೇಳೆ ಗೌಡರೋ ಕುಮಾರಸ್ವಾಮಿಯೋ ಅಕ್ರಮದ ಕಾರಣಕ್ಕೆ ಜೈಲಿಗೆ ಹೋದರೆ ತುಂಬಾ ಸಂತೋಷ. ಅಕ್ರಮ ಮಾಡಿದವರನ್ನು ಜೈಲಿಗಲ್ಲ, ಗಲ್ಲಿಗೆ ಬೇಕಾದರೂ ಹಾಕಬಹುದು.
ಆದರೆ,
ಒಬ್ಬ ಮುಖ್ಯಮಂತ್ರಿಯಾಗಿ "ಹಗರಣದ ಪುಸ್ತಕ ಬರೆಯುತ್ತೇನೆ" ಅನ್ನುವುದು ಯಾಕೋ ಹಾಸ್ಯಸ್ಪದ. ಯಾರೇ ಅಕ್ರಮ ಮಾಡಿದ್ದರೂ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಇರುವ ಒಬ್ಬ ಮುಖ್ಯಮಂತ್ರಿಯೇ "ಅದನ್ನು ಪುಸ್ತಕ ಬರೆದು ಹಂಚುತ್ತೇನೆ" ಎಂದು ಹೊರಟರೆ ಅದಕ್ಕೆ ಅರ್ಥವಿದೆಯೇ ? ಬಹುಶಃ ಗೌಡರೊಂದಿಗೂ ಡೀಲ್ ಕುದುರಿಸಿಕೊಂಡಿರುವ ಯಡ್ಡಿ "ಏನಿಲ್ಲ ಗೌಡ್ರೇ, ತನಿಖೆಯನ್ನ ಹಳ್ಳ ಹಿಡಿಸ್ತೀನಿ, ಒಂದು ಪುಸ್ತಕ ಬರೆಸಿ ಸ್ವಲ್ಪ ಪ್ರಚಾರ ಮಾಡ್ಕೊಳ್ತೀನಿ ಬಿಡಿ, ಅದರಿಂದ ನಿಮಗೇನೂ ತೊಂದ್ರೆ ಆಗಲ್ಲ" ಅಂತ ರಾಜಿ ಮಾಡಿಕೊಂಡಿರುವ ಸಾಧ್ಯತೆಯೇ ಹೆಚ್ಚಿದೆ.

ಕಾಮೆಂಟ್‌ಗಳು