ಅದು ನಿಜಕ್ಕೂ ಸೂಪರ‍್ ಆಗಿದೆ. ಚಿತ್ರದಲ್ಲಿ ತೋರಿಸಿರುವಂತೆ ನಮ್ಮ ದೇಶ ಬದಲಾಗಲ್ಲ ಅನ್ನೋದು ಬೇರೆ ಮಾತು. ಆದರೆ ಉಪೇಂದ್ರರ ಚಿಂತನಾ ವೈಖರಿ ತುಂಬಾ ಚೆನ್ನಾಗಿದೆ. ಎರಡೂಕಾಲು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ.
ಕೆಲವೊಂದು ಹೊಡೆದಾಟಗಳು ಬೇಕಿರಲಿಲ್ಲ. ಸಂಗೀತಕ್ಕೆ ಗುರುಕಿರಣ್‌ರನ್ನೇ ಹಾಕಿಕೊಳ್ಳಬಹುದಿತ್ತು.
ನಾಯಕಿ ನಾಯಕನಿಗೆ ತಿರುಗಿ ಬೀಳುವುದು ಉಪೇಂದ್ರರ ಹಳೇ ಥಿಯರಿ ಅನ್ನಿಸುತ್ತೆ. ಆದರೆ ಅದರಲ್ಲೂ ಹೊಸತನವಿದೆ.
ಸಂಭಾಷಣೆ ಅದ್ಬುತವಾಗಿದೆ. ಹಾಸ್ಯಭರಿತ ವ್ಯಂಗ್ಯ ಈ ದೇಶದ ಅಷ್ಟೂ ದಾರಿದ್ರ್ಯವನ್ನೂ ಬಯಲು ಮಾಡಿದೆ.
ಹಾಡುಗಳು ಒಂದೆರಡು ಬಿಟ್ಟರೆ ಉಳಿದವು ಚೆನ್ನಾಗಿಲ್ಲ. ಖರ್ಚು ತುಂಬಾ ಮಾಡಿದ್ದಾರೆ. ಪ್ರತಿ ಫ್ರೇಮ್‌ನಲ್ಲೂ ದುಡ್ಡು ಸುರಿದಿರೋದು ಕಾಣಿಸುತ್ತೆ.
ಚಿತ್ರವನ್ನು ನೋಡಿ ಸುಮ್ಮನಾಗದೇ ಚಿಂತನೆಗೆ ಹಚ್ಚುವಂತಿದೆ.
ಉಪೇಂದ್ರರಿಗೆ ಧನ್ಯವಾದಗಳು.

ಕಾಮೆಂಟ್‌ಗಳು