ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...

ಅನ್ನಪೂರ್ಣೇಶ್ವರಿ ಪಾದದಲ್ಲಿ ಇದೆಂತಾ ಹೋಟೆಲು ?

ಮೊನ್ನೆ ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಕೊನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದಿನದ ಎಲ್ಲಾ ಸಮಯದಲ್ಲೂ ಊಟದ ವ್ಯವಸ್ಥೆ ಇರುತ್ತದೆ ಎಂದು ಯಾರೋ ರೈಲು ಹತ್ತಿಸಿದ್ದರು. ಆದರೆ ಅಲ್ಲಿ ನಾವು ಹೋಗುವಾಗ ಸಂಜೆ ನಾಲ್ಕು ಗಂಟೆ. ಆ ಸಮಯದಲ್ಲಿ ಊಟ ದೊರೆಯುವುದಿಲ್ಲ ಎಂದು ಹೇಳಿದರು. ಹಾಗಾಗಿ ವಿಧಿ ಇಲ್ಲದೆ ಎದುರಲ್ಲೆ ಇರುವ ಒಂದು ಹೋಟೆಲಿಗೆ ಉಪಹಾರಕ್ಕೆಂದು ಹೋದೆವು. ಅಲ್ಲಿ ಯಾವ ತಿಂಡಿಯೂ ಚೆನ್ನಾಗಿರಲಿಲ್ಲ. ನಾವು ಪಡೆದ ದೋಸೆ ಬೆಂದಿರಲಿಲ್ಲ. ಚಟ್ನಿಯನ್ನು ತೆಂಗಿನಕಾಯಿ ಹಾಕಿ ಮಾಡಿರದೇ ಉಪ್ಪಿನಿಂದಲೇ ಮಾಡಿದ್ದರು. ಅವಲಕ್ಕಿ ಕೊಂಡರೆ ಖಾರವೋ ಖಾರ. ಆದರೆ ಬೆಲೆ ಮಾತ್ರ ಕಡಿಮೆ ಏನಿರಲಿಲ್ಲ. ಅಂತಹ ಪ್ರವಾಸಿ ಸ್ಥಳದಲ್ಲಿ ದುಡ್ಡು ಕೊಟ್ಟರೂ ಒಳ್ಳೆಯ ಉಪಹಾರ ದೊರೆಯುವುದಿಲ್ಲ ಎಂದಾದರೆ ಪ್ರವಾಸಿಗರು ಹೇಗೆ ತಾನೆ ಹೋಗಲು ಇಷ್ಟ ಪಡುತ್ತಾರೆ ? ಅಲ್ಲಿನ ನಿರ್ವಾಹಕರು ಇದನ್ನೆಲ್ಲಾ ಗಮನಿಸಿದರೆ ಒಳ್ಳೆಯದಲ್ಲವೆ?

ನಾ ಕಂಡಂತೆ ಜಾತಿಯ ಏರ್ಪಾಡುಗಳು.

ನಮ್ಮೂರಿನಲ್ಲಿರುವ ಪ್ರಮುಖ ಜಾತಿಗಳ ನಡುವಿನ ವ್ಯವಸ್ಥೆ ಈ ರೀತಿ ಇದೆ. ಈ ಎಲ್ಲಾ ಜಾತಿಗಳವರನ್ನೂ ನಾನು ಹುಟ್ಟಿನಿಂದಲೂ ನೋಡಿದ್ದುದರಿಂದ ನಿಖರವಾಗಿ ಬರೆದಿದ್ದೇನೆ. ೧. ಬ್ರಾಹ್ಮಣ ೨. ಲಿಂಗಾಯಿತ ೩. ಒಕ್ಕಲಿಗ ೪. ಶೆಟ್ಟರು, ಪೂಜಾರಿಗಳು, ಇತ್ಯಾದಿ (ಕುಂದಾಪುರದ ಕಡೆಯವರು) ೫. ದೀವರು (ಈಡಿಗರು) ೬. ಹಸಲರು ೭. ಹೊಲೆಯರು ೮. ಉಪ್ಪಾರರು [ಅಲ್ಲಿ ಇಲ್ಲಿ ಒಂದೆರಡು ಕುಟುಂಬ ಮಾತ್ರ ಇರುವ ಕೆಲವೊಂದು ಜಾತಿಗಳನ್ನು ಸೇರಿಸಿಲ್ಲ] ಈಗ ಈ ಮೇಲ್ಕಂಡ ಜಾತಿಗಳವರಲ್ಲಿ ಮೇಲು ಕೀಳು ಹೇಗಿದೆ ಎಂದರೆ... * ಬ್ರಾಹ್ಮಣರು ಅತ್ಯಂತ ಉತ್ತಮ ಜಾತಿ ಎಂತಲೂ, ಉಪ್ಪಾರರು ಅತ್ಯಂತ ಕೀಳು ಜಾತಿ ಎಂತಲೂ ಎಲ್ಲರೂ ನಂಬುತ್ತಾರೆ. (ಲಿಂಗಾಯಿತರು ಅನೇಕರು ಬ್ರಾಹ್ಮಣರಿಗಿಂತಲೂ ತಮ್ಮದೇ ಉತ್ತಮ ಜಾತಿ ಎಂದೂ ಹೇಳುವುದಿದೆ.) ಬ್ರಾಹ್ಮಣರು ಅವರ ನಂತರದ ಲಿಂಗಾಯಿತರನ್ನು ಹೊರತು ಪಡಿಸಿ ಬೇರೆ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲ. (ಬೇರೆಯವರು ಹೋಗುವುದೂ ಇಲ್ಲ). ದೀವರ ವರೆಗೆ ಮುಟ್ಟಿಸಿಕೊಂಡರೆ ತೊಂದರೆ ಇಲ್ಲ. ಆದರೆ ಕೊನೆಯ ಮೂರು ಜಾತಿಗಳವರು ಮುಟ್ಟಬಾರದು, ಮೈಲಿಗೆ. * ನಂತರದ ಸ್ಥಾನ ಲಿಂಗಾಯಿತರದ್ದು. ಇವರು ಇವರ ಕೆಳಗಿನ ಯಾರನ್ನೂ ಮನೆಯೊಳಗೆ ಸೇರಿಸುವುದಿಲ್ಲವಾದರೂ ಒಕ್ಕಲಿಗರಿಗೆ ಕೆಲವು ಸಮಯಗಳಲ್ಲಿ ಅವಕಾಶ ನೀಡುವುದಿದೆ. (ಹಬ್ಬದ ಕೆಲಸಗಳನ್ನು ಮನೆಯೊಳಗೆ ಹೋಗಿ ಒಕ್ಕಲಿಗರು ಮಾಡಿ ಕೊಡುತ್ತಾರೆ.) ಉಳಿದ ಯಾರನ್ನೂ ಇವರು ಮನೆಯೊಳಗೆ ಸೇರಿಸುವುದಿಲ್ಲ. ಕೊನೆಯ ಮೂರು ಜಾತಿಗಳವ...

ಗೊತ್ತಾ ನಿಮಗೆ ಮುಳ್ಳು ಹಣ್ಣು ?

ಇದು ನಮ್ಮ ಮಲೆನಾಡಿನ ಗುಟ್ಟ ಬೆಟ್ಟಗಳ ಮುಳ್ಳು ಗಿಡಗಳಲ್ಲಿ ಬಿಡುತ್ತೆ. ಮುಳ್ಳಿನ ಗಿಡದಲ್ಲೆ ಬಿಡುವುದರಿಮದ ಮುಳ್ಳು ಹಣ್ಣು ಅಂತ ಹೆಸರು. ಕೆಲವು ಕಡೆ ಬೆಣ್ಣೆ ಹಣ್ಣು ಅಂತಲೂ ಕರೆಯುತ್ತಾರೆ. ಬೇರೆ ಬೇರೆ ಹೆಸರುಗಳೂ ಉಂಟು. ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಷ್ಟೇ ಮೃದುವಾಗಿರುತ್ತದೆ. ಕಾಯಿಯಾಗಿರುವಾಗ ಹಸಿರಾಗಿರುವ ಇದು ಹಣ್ಣಾಗುವಾಗ ಬೆಳ್ಳಗೆ ಹೊಳೆಯುತ್ತದೆ. ಅದನ್ನು ಬಾಯಿಯಲ್ಲಿ ಇರಿಸಿಕೊಂಡರೆ ಆಹಾ... ಅದ್ಬುತ ರುಚಿ... ಕರಗಿ ಹೋಗುವುದೇ ಗೊತ್ತಾಗುವುದಿಲ್ಲ. ಹಾಗೆಯೆ ಚಿಕ್ಕಪುಟ್ಟ ಹಕ್ಕಿಗಳಿಗೆ ಹಾಗೂ ಅಳಿಲುಗಳಿಗೆ ಈ ಹಣ್ಣು ತುಂಬಾ ಪ್ರಿಯವಾದ್ದರಿಂದ ಅವುಗಳ ಕಣ್ಣು ತಪ್ಪಿಸಿ ನಮಗೆ ದೊರಕುವುದು ಕಷ್ಟವೇ. ಆದರೂ ಇದು ಹಣ್ಣಾಗುವ ಸಮಯದಲ್ಲಿ ವಿಪರೀತ ಹಣ್ಣಾಗುವುದರಿಂದ ಹಕ್ಕಿಗಳಿಗೆ ಅಷ್ಟೊಂದು ತಿನ್ನಲು ಆಗುವುದಿಲ್ಲ ಎನ್ನಬಹುದು. ನಾವು ಶಾಲೆಗೆ ಹೋಗುವ ದಿನಗಳ ರಜೆ ಸಮಯದಲ್ಲಿ ಅರ್ಧ ಸಮಯ ಶರಾವತಿ ಹಿನ್ನೀರಿನಲ್ಲಿ ಕಳೆದರೆ ಇನ್ನರ್ಧ ಸಮಯ ಗುಡ್ಡ ಬೆಟ್ಟದಲ್ಲೇ ಕಳೆಯುತ್ತಿದ್ದವು. ಗುಡ್ಡದಲ್ಲಿ ಸಿಗುವ ಮುಳ್ಳಣ್ಣು, ನೇರಳೇ ಹಣ್ಣು, ಪರಿಗೇ ಹಣ್ಣು, ನೆಲ್ಲಿಕಾಯಿ, ಕೌಳೀಹಣ್ಣು, ಸಂಪಿಗೆ ಹಣ್ಣು, ಬುಕ್ಕೆಹಣ್ಣುಗಳಲ್ಲಿ ಒಂದನ್ನೂ ಬಿಡುತ್ತಿರಲಿಲ್ಲ. ಅದರಲ್ಲೂ ಈ ಮುಳ್ಳಣ್ಣು ಹಾಗೂ ಪರಿಗೆ ಹಣ್ಣುಗಳ ಗಿಡಗಳು ಬರೀ ಮುಳ್ಳು ಪೊದೆಯಂತೆ ಬೆಳೆಯುತ್ತವೆ. ಅವಗಳ ತುದಿಯಲ್ಲಿ ಹಣ್ಣು ಇದ್ದರೆ ಕೀಳುವುದೇ ಕಷ್ಟ. ಆದರೂ ನಾವು ಬಿಡುತ್ತಿರಲಿಲ್ಲ. ಮುಳ್ಳುಗಳನ...

ಸಾಹಿತಿಗಳಿಗೂ ರಾಜಕೀಯ ಯೋ(ರೋ)ಗ!

ಏನೂ ಮಾಡಲು ಕೆಲಸವಿಲ್ಲದ ಬಡಗಿ ಮತ್ತೇನೋ ಮಾಡಿದ್ದನಂತೆ, ಹಾಗೇ ಆಗಿದೆ ನಮ್ಮ ಹಿರಿಯ ಸಾಹಿತಿ 'ಚಂಪಾ' ಎಂದು ನಾಮಾಂಕಿತಗೊಂಡಿರುವ ಶ್ರೀ ಚಂದ್ರಶೇಖರ ಪಾಟೀಲರ ಕಥೆ. ಬೆಕ್ಕಿಗೇಕೆ ಕಬ್ಬಿಣದ ಕೆಲಸ ಅನ್ನುವಂತೆ ಇವರಿಗೆ ಯಾಕೆ ಬೇಕಿತ್ತೋ ರಾಜಕೀಯ ಕೆಲಸ? ಸಾಹಿತ್ಯದಲ್ಲೇ ಆಗಬೇಕಾದ ನೂರಾರು ಕೆಲಸಗಳು ಇವೆ. ಕನ್ನಡದ ಕೆಲಸಗಳು ಮಾಡಿದಷ್ಟೂ ತೀರದು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಚಂಪಾ ಏಕಾಏಕಿ ಯಡಿಯೂರಪ್ಪನವರ ಕೆಜೆಪಿಗೆ ಲಾಂಗ್ ಜಂಪ್ ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಕುಚೋದ್ಯವಾಗಿಯೇ ಕಾಣಿಸುತ್ತಿದೆ. ಏಕೆಂದರೆ ಯಡಿಯೂರಪ್ಪ ಹಾಗೂ ಚಂಪಾ ಮೊದಲಿನಿಂದಲೂ ಜಿಗ್ರಿ ದೋಸ್ತ್‍ಗಳೇನಲ್ಲ. ಈ ಹಿಂದೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡವರು. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಬರುವ ಮುಂಚೆಯೆ ಕಾರ್ಯಕ್ರಮ ಪ್ರಾರಂಭಿಸಿದರು ಎಂದು ಚಂಪಾ ಮೇಲೆ ಯಡ್ಡಿ ಎಗರಾಡಿದರೆ ಅದಕ್ಕೆ ಎದಿರೇಟಾಗಿ ಚಂಪಾ ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ಯಡ್ಡಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದ್ದರು. ಇದಕ್ಕೆ ಮತ್ತೆ ಎದಿರೇಟು ನೀಡಿದ ಯಡ್ಡಿ ಚಂಪಾಗೆ ದಕ್ಕಿದ್ದ 'ಪಂಪ' ಪ್ರಶಸ್ತಿಗೆ ವರ್ಷಗಟ್ಟಲೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಏಟು ಎದಿರೇಟು ಕೊಟ್ಟುಕೊಳ್ಳುತ್ತಾ ವಿರೋಧಿಗಳಾಗಿದ್ದ ಚಂಪಾಗೆ ಈಗ ಯಡ್ಡಿ ಎಷ್ಟು ರೇಟು ಕೊಟ್ಟರೋ ತಿಳಿಯದು... ಕೆಜೆಪಿ ಕೋಟು ತೊಟ್ಟು ಬೀಗಲು ತಯಾರಾಗಿದ್ದಾರೆ. ಹಾವು ಮುಂಗುಸಿಯಾಗಿದ್ದವ...

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ

ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ. ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು. ನಾನು ಈ ಹಿಂದೆಯೇ ಇದನ್ನು ಪಡೆದಿದ್ದರೂ ಮನೆಯನ್ನು ಬದಲಾಯಿಸಿದ್ದರಿಂದ ಹೊಸ ವಿಳಾಸಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಒಂದೇ ಕ್ಷೇತ್ರದ ಬೇರೆ ವಾರ್ಡ್‍ಗೆ ವಿಳಾಸ ಬದಲಾಯಿಸುವುದಷ್ಟೇ ಕೆಲಸ. ಎರಡು ವರ್ಷದಿಂದ ಇದರ ಬಗ್ಗೆ ತನಿಖೆಗೆ ಇಳಿದಿದ್ದೆ... ಹೇಗೆ ಬದಲಾಯಿಸುವುದು ಎಂದು ತಿಳಿಯಲು.   ಚುನಾವಣಾ ಇಲಾಖೆಯ ಜಾಲತಾಣದಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಎಂದುಕೊಂಡು ಅವರ ಜಾಲತಾಣವಾದ http://ceokarnataka.kar.nic.in/ ನಲ್ಲಿ ಒಂದು ಖಾತೆಯನ್ನು ತೆರೆದು ಅಲ್ಲಿ ಪ್ರಯತ್ನಿಸಿದೆ. ಅಲ್ಲಿ ತಿಳಿದು ಬಂದ ವಿಷಯವೇನೆಂದರೆ ಸಧ್ಯಕ್ಕೆ ಆನ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಡಿಸಿಕೊಳ್ಳಬೇಕು ಎಂಬುದು. ಆ ವಿಷಯವನ್ನು ಕೈ ಬಿಟ್ಟು ಯಾವ ಕಚೇರಿಯಲ್ಲಿ ಸಾಧ್ಯ ಎಂದು ತನಿಖೆ ಕೈಗೊಂಡೆ. ಏಕೆಂದರೆ ಚುನಾವಣಾ ಇಲಾಖೆಯ ಕಚೇರಿ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಸತತ ತನಖೆಯ ನಂತರ ಮಹಾನಗರ ಪಾಲಿಕೆಯ ಸ್ಥಳೀಯ ಕಚೇರಿಯಲ್ಲೇ ಇದನ್ನು ಮಾಡಿಕೊಡುತ್ತಾ...

ಮಹಾನ್ ಪತ್ರಕರ್ತ ವಿಶ್ವೇಶ್ವರ ಭಟ್ಟರು ಬಡವರಿಗೆ ಬತ್ತಿ ಇಟ್ಟ ಕತೆ!

ಇವರು ಇವತ್ತೊಂದು ಕತೆ ಹೇಳಿದ್ದಾರೆ... ಅದು ಸೋಮಾರಿ ಮಿಡತೆ ಹಾಗೂ ಶ್ರಮಜೀವಿ ಇರುವೆ ಕತೆ.  ಇರುವೆ ಕಷ್ಟ ಪಟ್ಟು ಮುಂದಾಲೋಚನೆಯಿಂದ ದುಡಿದು ಆಹಾರ ಸಂಗ್ರಹಿಸಿ ಇಡುತ್ತೆ, ಆದರೆ ಮಿಡತೆ ಸೋಮಾರಿಯಾಗಿ ಆಡಿಕೊಂಡಿರುತ್ತೆ. ಆದರೆ ಮುಂದೆ ಮಿಡತೆ ಹಸಿವಿನಿಂದ ಬಳಲುವಾಗ ಇರುವೆ ಸಹಾಯ ಮಾಡಲಿಲ್ಲ ಎಂದು ಹಲವರು ಹೋರಾಟ ನಡೆಸುತ್ತಾರೆ... ಇತ್ಯಾದಿ ಇತ್ಯಾದಿಯಾಗಿದೆ ಇವರು ಹೇಳಿದ ಕತೆ. ಇದನ್ನೂ ಇವರು ಈ ಹಿಂದೆಯೂ ಒಮ್ಮೆ ಬರೆದಿದ್ದರು, ಈಗ ಕತೆಗೆ ಸ್ವಲ್ಪ ಸುಣ್ಣ-ಬಣ್ಣ ಬಂದಿದೆ.  ಆದರೆ ಇದನ್ನು ಓದುತ್ತಾ ಹೋದಂತೆ ಮಿಡತೆ ಹಾಗೂ ಇರುವೆಯನ್ನು ಯಾರು ಯಾರಿಗೆ ಹೋಲಿಸಿದ್ದಾರೆ ಎಂದು ತಿಳಿದಾಗ ಮೈ ಉರಿಯುತ್ತದೆ. ಕಾರಣ ಇವರ ಪ್ರಕಾರ "ಮುಂದಾಲೋಚನೆಯಿಂದ" ಕೂಡಿಸಿ ಇಟ್ಟುಕೊಂಡಿರುವ ಇರುವೆಗಳೆಂದರೆ ಇಂದಿನ ಶ್ರೀಮಂತರು, ಹಾಗೂ ಬಡತನದಲ್ಲಿ ಹೊಟ್ಟೆಗಿಲ್ಲದೇ ಒದ್ದಾಡುತ್ತಿರುವ ಬಡವರೆಲ್ಲಾ ಸೋಮಾರಿ ಮಿಡತೆಗಳ ತರದವರು... ನಾಚಿಕೆಯಾಗಬೇಕು ಇವರಿಗೆ. ವಿಶ್ವೇಶ್ವರ ಭಟ್ಟರು ಈ ಕೆಲವು ಉದಾಹರಣೆಗಳಿಗೆ ಯಾವ ರೀತಿ ಹೋಲಿಕೆ ಮಾಡುತ್ತಾರೆ ? ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರು ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅಂದರೆ ಹೆಗ್ಗಡೆವರು ಪಾಪ ಗೊತ್ತಿಲ್ಲದೇ ಸೋಮಾರಿ ಮಿಡತೆಗಳಿಗೆ ಸಹಾಯ ಮಾಡುತ್ತಿದ್ದಾರಾ ? ಅಜೀಂ ಪ್ರೇಮ್‌ಜೀ ತಾವು ಗಳಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ದೀನ ದಲಿತರ ಉದ್ದಾರಕ್ಕಾಗಿ ಸಮರ್ಪಿಸಿದ್ದಾರೆ... ಹಾಗ...