ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವೀರ ಟಿಪ್ಪು ಸುಲ್ತಾನ್‌

​ ಟಿಪ್ಪು ಸುಲ್ತಾನ್‌ ಮತಾಂಧನಗಿದ್ದ ಎಂಬುದಕ್ಕೆ ಯಾವುದೇ ಆಧಾರವಿಲ್ಲ. ಆತನಿಂದ ನಡೆದ ಹತ್ಯೆಗಳು, ಯುದ್ದಗಳು ಎಲ್ಲದಕ್ಕೂ ಕಾರಣ ಆತನ ರಾಜ್ಯ ವಿಸ್ತರಿಸುವ, ತನ್ನೆದುರು ತಲೆ ಎತ್ತಿ ನಿಂತವರನ್ನು ಬಗ್ಗು ಬಡಿವ ಯುದ್ದೋನ್ಮಾದಗಳೇ ಕಾರಣವಾಗಿತ್ತು. ಈ ಯುದ್ದೋನ್ಮಾದ ಆತನ ತಂದೆ ಹೈದರಾಲಿಯಿಂದ ಬಂದುದು. ಹೈದರಾಲಿ ಮತ್ತು ಟಿಪ್ಪುವಿನ ಆಸ್ಥಾನ ಮಂತ್ರಿ ದಿವಾನ್‌ ಪೂರ್ಣಯ್ಯ ಒಬ್ಬ ಬ್ರಾಹ್ಮಣರಾಗಿದ್ದರು. ಹೈದರಾಲಿಯ ಕಾಲದಲ್ಲಿ ದುರ್ಗದ ಮದಕರಿ ನಾಯಕನನ್ನೂ ಸೇರಿದಂತೆ, ಪೇಶ್ವೆಗಳು ಮತ್ತು ಕೆಳದಿ, ಶೀರ್ವ, ರಾಮದುರ್ಗ ಮುಂತಾದ ಎಲ್ಲಾ ಹಿಂದು ಪಾಳೆಯಗಾರರನ್ನೂ ರಾಜರುಗಳನ್ನೂ ಸೋಲಿಸಲು ಪೂರ್ಣಯ್ಯನವರ ತಂತ್ರ ಕುತಂತ್ರಗಳೇ ಕಾರಣವಾಗಿದ್ದವು. ಮದಕರಿ ನಾಯಕನ ಮಂತ್ರಿ ಕೂಡಾ ಹೈದರಾಲಿಗೆ ದುರ್ಗದ ರಹಸ್ಯಗಳನ್ನು ಒದಗಿಸಿ ಮದಕರಿಯ ಸೋಲಿಗೆ ಕಾರಣವಾಗುತ್ತಾನೆ. ಹಾಗೆಯೇ ಹೈದರಾಲಿಯ ಮುಸ್ಲಿಂ ಸರ್ದಾರನೊಬ್ಬ ಕೂಡಾ ಮದಕರಿ ನಾಯಕನೊಂದಿಗೆ ಸ್ನೇಹ ಬೆಳೆಸಿ ಹೈದರಾಲಿಗೂ ಮೋಸ ಮಾಡುತ್ತಾನೆ. ಇವೆಲ್ಲಾ ಆಗಿನ ಸಂದರ್ಭದ ಸಹಜ ಘಟನಾವಳಿಗಳು.  ಹೈದರಾಲಿಯಂತೆಯೇ ಯುದ್ದೋತ್ಸಾಹ ತೋರುವ ಟಿಪ್ಪು ಅಕ್ಕಪಕ್ಕದ ಪಾಳೆಗಾರರ ಮೇಲೆ ದಂಡೆತ್ತಿ ಹೋಗಿದ್ದರಲ್ಲಿ ಮತ್ತು ಅಲ್ಲಿ ಯುದ್ದ, ಸಾವು ನೋವು ಸಂಭವಿಸಿದ್ದರಲ್ಲಿ ಯಾವ ವಿಶೇಷವೂ ಇಲ್ಲ. ಹಾಗೆಯೇ ಮತಾಂಧನಾಗಿದ್ದರೆ ಶ್ರೀರಂಗಪಟ್ಟಣ, ಮಂಡ್ಯಗಳಲ್ಲಿ ಮುಸ್ಲಿಮರ ಸಂಖ್ಯೆ ಯಥೇಚ್ಚವಾಗಿರಬೇಕಿತ್ತು. ಅಂದು ಹಿಂದು ರಾಜರುಗಳೇ ಹಿಂದು ರಾಜ್ಯಗಳ ...

ಬಲಿಚಕ್ರವರ್ತಿಯ ನೆನವ ದಿನಕ್ಕೆ ಪಟಾಕಿ ಯಾಕೆ ?

​ ದೀಪಾವಳಿ ಮೊದಲಿಗೆ ಪಟಾಕಿ ಹೊಡೆವ ಹಬ್ಬ ಆಗಿರಲಿಲ್ಲ. ಇದು ಬಲಿ ಚಕ್ರವರ್ತಿಯನ್ನು ಸ್ಮರಿಸಿ ಆತನಿಗೆ ಪೂಜೆ ಸಲ್ಲಿಸುವ ದಿನ. ಸತ್ತ ಪುಣ್ಯಾತ್ಮರನ್ನು ಸ್ಮರಿಸಲು ಅವರ ಪ್ರತಿಕೃತಿಯ ಎದುರು ದೀಪ ಹಚ್ಚುವ ಪರಿಪಾಠ ಮೊದಲಿನಿಂದಲೂ ಇತ್ತು. ಅದೇ ರೀತಿ ಬಲಿ ಚಕ್ರವರ್ತಿಗೆ ದೀಪ ಹಚ್ಚಿ ಆತನನ್ನು ಸ್ಮರಿಸುವ ದಿನವೇ "ಬಲಿ ಪಾಡ್ಯಮಿ". ಇಂದಿಗೂ ಮಲೆನಾಡಿನ ಬಹಳಷ್ಟು ಮನೆಯಲ್ಲಿ (ನಮ್ಮನೆಯೂ ಸೇರಿ) ಬಲಿಪಾಡ್ಯಮಿಯ ದಿನ ಕೆರೆ, ಹೊಳೆ ಅಥವಾ ಬಾವಿಯಿಂದ ತಾಮ್ರದ ತಂಬಿಗೆಯಲ್ಲಿ ನೀರನ್ನು ತಂದು ಅದಕ್ಕೆ ಅಡಿಕೆ ಸಿಂಗಾರ ಅಥವಾ ಹೂಗಳನ್ನು ಮುಡಿಸಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ. ಇದನ್ನು "ಬಲೀಂದ್ರ ಪೂಜೆ" ಅಥವಾ "ಬಲಿ ಪೂಜೆ" ಎಂದೇ ಕರೆಯುತ್ತಾರೆ. ನಮ್ಮ ಕಡೆ ಈಗಲೂ ಬಲಿಯನ್ನು ಹೊಗಳುವ ಜಾನಪದ ಹಾಡುಗಳು (ಹಬ್ಬಾಡುವ ಪದಗಳು ಎನ್ನುತ್ತಾರೆ) ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಂದು ಹಾಡು "ಎದ್ದೇಳು ಬಲಿವೀಂದರ, ನಿಜಕೊಂದ್ ಎಲ್ಲಾರ ಸಲುವಂತರಾ.." (ಎಲ್ಲರನ್ನೂ ಸಲಹುವ ಬಲೀಂದ್ರ ಎದ್ದೇಳು ) ಎಂದು ಪ್ರಾರಂಭವಾಗುತ್ತದೆ. ಹಾಗೆಯೇ ಹಸು, ಎತ್ತುಗಳಿಗೆ ಹೂಗಳ ಹಾರ ಹಾಕಿ ಪೂಜೆ ಮಾಡುವುದೂ, ಅವುಗಳಿಗೆ ಇಷ್ಟದ ತಿನಿಸು ಮಾಡಿ ತಿನ್ನಿಸುವುದೂ ಇದೆ. (ಈ ಸಮಯಕ್ಕೆ ಅವುಗಳನ್ನು ಬಳಸಿಕೊಂಡು ದುಡಿವ ಬೇಸಾಯದ ಕೆಲಸ ಬಹುತೇಕ ಮುಗಿದಿರುತ್ತದಾದ್ದರಿಂದ ಅವುಗಳಿಗೆ ಈ ಅಕ್ಕರೆ).  ತೀರಾ ಇತ್ತೀಚಿನವರೆಗೂ ನಮ್ಮ ಕಡೆ ಈ ಹಬ್ಬಕ್ಕೆ ಪಟಾಕ...

ಓ ಮಳೆಯೇ...

ಸೋಗೆ ಮನೆಯ ಛಾವಣಿ ಸೀಳಿ ಸೆಗಣಿ ಬಳಿದು ಅಮ್ಮ ನಡು ಬಗ್ಗಿಸಿ ಗುಡಿಸಿ, ಸಾರಿಸಿ ನಯ ಮಾಡಿದ ಒಡಕಲು ನೆಲಕೆ ಬಿದ್ದು ಪಟಪಟನೆ ಸದ್ದು ಮಾಡಿ, ಬಡತನಕೆ ಬಣ್ಣ ಬಳಿದು ತೋರಿಸಿದ ಓ ನಿರ್ದಯಿ ಮಳೆ ಹನಿಯೆ... ನೀ ಎಂದಾದರೂ ಅರಿತೆಯಾ  ಬಡವನ ಬವಣೆಯನ್ನು ? ಯಾಕೆ ಅರಿಯಲಿಲ್ಲ ಮಗುವೆ ನಿನ್ನಪ್ಪ ಅಮ್ಮ ಕಂಡೋರ ಹೊಲಗದ್ದೆಗಳಲಿ ಹಸಿವ ಮರೆತು ಮಣ್ಣು, ಗೊಬ್ಬರ, ಕಲ್ಲು ಹೊತ್ತು ದುಡಿದು ಬೆವರ ಸುರಿಸುವಾಗ ಅವರ ಕಷ್ಟವರಿತು ಹನಿ ಸಿಂಚನ ಮಾಡಿ ಧೋ ಎಂದು ಸುರಿದು ಅವರ ತಣಿಸಿ, ಬೆವರ ತೊಳೆದು ತಣ್ಣಗಾಗಿಸಿದ್ದು ನಾನಲ್ಲವೇ ಕಂದಾ ? ಹೋಗು ಹೋಗೆಲೆ ಮಳೆಯೆ, ಸಾವಿರ ಕವಿಗಳು ನಿನ್ನ ಹನಿ ಹನಿಯನೂ ಹೆಕ್ಕಿ ಅದಕೆ ಸುಳ್ಳೇ ಸಂಭ್ರಮದ ಬಣ್ಣ ಬಳಿದು ಹಾಡಿ ಹೊಗಳಿದ ಪರಿಗೆ ನೀ ಮೇಲೇರಿರುವೆ ಸೊಕ್ಕಿ ಬಿಸಿಲ ಜಳಕೆ ಬಾಯಾರಿ ದುಡಿವ ದೇಹ ಹನಿ ನೀರಿಗೆ ಪರಿತಪಿಸುವಾಗ ನಿನಗೆ ಬರಲಿಲ್ಲ ಕರುಣೆ ಉಕ್ಕಿ. ಅರಿತೆ ಮಗುವೆ ನಿನ್ನ ಅಂತರಂಗದ ಕೂಗು ನನಗಿಲ್ಲ ಬರಿದೆ ಬಡಾಯಿಗಳ ಸೋಗು ನನ್ನ ತಾಯಿ ಪ್ರಕೃತಿ ಮಾತೆ  ಹಾಕಿದ ಗೆರೆಯ ದಾಟಿ ಬರಲಾರೆನೇಳು  ಇದು ನನ್ನ ಸಂವೇದನೆಯ ಸೋಲು ! ​

ಕರ್ನಾಟಕಕ್ಕಾಗಿ ಬಿಹಾರದಲ್ಲಿ ನಿತೀಶ್‌ಕುಮಾರ್‌ ಗೆಲ್ಲಬೇಕಾಗಿದೆ !

​ ಬಿಹಾರ ಚುನಾವಣೆಯಲ್ಲಿ ನನ್ನ ನೆಚ್ಚಿನ ನಿತೀಶ್‌ ಕುಮಾರ್‌ ಜಯ ಗಳಿಸಲಿ ಎಂದು ಆಸಿಸುವೆ. ನಿತೀಶ್‌ ಬರುವ ಮೊದಲು ಬಿಹಾರ ಕೆಟ್ಟು ಕೆರ ಹಿಡಿದು ಹೋಗಿತ್ತು. ಲಾ & ಆರ್ಡರ್‌ ಮಣ್ಣು ಪಾಲಾಗಿತ್ತು. ಸ್ವತಃ ಪೊಲೀಸರೇ ದರೋಡೆ, ಅತ್ಯಾಚಾರಕ್‌ಇಳಿದ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದವು. ದೂರದ ಕರ್ನಾಟಕದ ಪತ್ರಿಕೆಗಳಲ್ಲೂ ದಿನ ನಿತ್ಯ ಬಿಹಾರದ ಒಂದಿಲ್ಲೊಂದು ಸಮಾಜ ಘಾತಕದ ಸುದ್ದಿ ಇದ್ದೇ ಇರುತ್ತಿತ್ತು. ಹಾಗೆಯೇ ಅಲ್ಲಿನ ಅರಾಜಕತೆಯಿಂದ ಬೇಸತ್ತು ಮತ್ತು ಕೆಲಸವೇ ಇಲ್ಲದೇ ಲಕ್ಷಾಂತರ ಜನರು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ವಲಸ ಬಂದು ಇಲ್ಲಿನ ಸ್ಥಳೀಯರ ಸಮಸ್ಯೆಯನ್ನು ಹೆಚ್ಚಿಸಿದ್ದರು. ಆದರೆ ನಿತೀಶ್‌ಕುಮಾರ್‌ ಮುಖ್ಯಮಂತ್ರಿಯಾದ ನಂತರ ಬಿಹಾರದ ಚಿತ್ರಣವನ್ನೇ ಬದಲಿಸಿದರು. ಅಲ್ಲಿ ಮೊದಲು ಲಾ & ಆರ್ಡರ್‌ ಸರಿಪಡಿಸಲಾಯ್ತು. ನಂತರ ಚಿಕ್ಕಪುಟ್ಟ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗವಕಾಶಗಳನ್ನು ಹೆಚ್ಚಿಸಲಾಯ್ತು. ಅಲ್ಲಿ ಯಾವ ಮಟ್ಟಿಗೆ ಬದಲಾವಣೆ ಆಯ್ತು ಎಂದರೆ ವಲಸೆ ಬಂದ ಬಿಹಾರಿಗಳಿಂದಲೇ ನಡೆಯುತ್ತಿದ್ದ ಬೆಂಗಳೂರಉ ಚೆನ್ನೈನಂತಹ ನಗರಗಳ ಬೃಹತ್‌ ಕಟ್ಟಡಗಳ ಕೆಲಸಕ್ಕೆ ಕ್ರಮೇಣ ಬಿಹಾರಿಗಳ ಕೊರತೆ ಎದುರಾಯ್ತು. (ಈಗ ಅವರ ಜಾಗದಲ್ಲಿ ಉತ್ತರ ಪ್ರದೇಶದವರೂ, ಹರಿಯಾಣ, ಒಡಿಶಾ, ಆಂಧ್ರದವರೂ ತುಂಬಿಕೊಂಡಿದ್ದಾರೆ). ಒಬ್ಬ ಮುಖ್ಯಮಂತ್ರಿ ಮಾಡಬೇಕಾದ ಕೆಲಸವೇ ಅದು. ಈ ಕಾರಣಕ್ಕೆ ನಿತೀಶ್‌ ನನಗೆ ಇಷ್ಟವಾಗುತ್ತಾರೆ, ಅದಕ್ಕಿಂತ ಮಿಗಿಲಾ...

ರೈತರ ಆತ್ಮಹತ್ಯೆಗೆ ಕಾರಣ ಹುಡುಕುತ್ತಾ...

​ ಕಳೆದ ಏಳು ತಿಂಗಳಲ್ಲಿ ೫೧೬ ರೈತರು ನಮ್ಮ ರಾಜ್ಯವೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದೊಂದು ಗಾಬರಿ ಹುಟ್ಟಿಸುವ ಸುದ್ದಿಯೇ ಹೌದು. ಹೀಗೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ? ನಿಜವಾದ ಸಾಲದ ಸಮಸ್ಯೆಯೇ ಇದಕ್ಕೆ ಕಾರಣವೇ ? ಅಷ್ಟೊಂದು ಸಾಲವನ್ನಾದರೂ ಯತಕ್ಕಾಗಿ ಮಾಡಿಕೊಂಡರು ? ಬರಗಾಲ ಕಾರಣವೆನ್ನಲು ಈಗಿನದಕ್ಕಿಂತಲೂ ಭೀಕರ ಬರಗಾಲ ಎಷ್ಟೋ ಸಮಯ ಬಂದು ಹೋಗಿದೆ. ಆಗೆಲ್ಲಾ ಈ ರೀತಿ ರೈತರು ಆತ್ಮಹತ್ಯೆಗೆ ಇಳಿಯುತ್ತಿರಲಿಲ್ಲ. ಆದರೆ ಇತ್ತೀಚಿಗೆ ಏನೋ ಯಡವಟ್ಟಾಗುತ್ತಿರುವುದಂತೂ ನಿಜ. ನಿನ್ನೆಯ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿಯ ಹೇಳಿಕೆಗಳು ಪ್ರಕಟವಾಗಿದೆ. (ಅವರ ಮನೆಗೆ ರಾಹುಲ್‌ಗಾಂಧಿ ಭೇಟಿ ನೀಡುವುದಿದೆಯಂತೆ). ಆ ಮಹಿಳೆ ಹೇಳಿರುವ ಪ್ರಕಾರ ಅವರಿಗೆ ಇರುವುದು ಬರೇ ೧.೩೮ ಎಕರೆ ಹೊಲ. ಆದರೆ ಆ ರೈತ ೨೦೦೫ ರಲ್ಲಿಯೇ ಟ್ರಾಕ್ಟರ್‌ ಕರೀದಿಸಿದ್ದಾನೆ ! ಅದರ ಸಾಲ ಮತ್ತು ಬೆಳೆ ಸಾಲ ಸೇರಿ ಈಗ ಸಾಲದ ಮೊತ್ತ ಹನ್ನೊಂದು ಲಕ್ಷವನ್ನೂ ಮೀರಿದೆ. ಈ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜ, ಒಂದೂವರೆ ಎಕರೆಯೂ ಇಲ್ಲದ ಹೊಲದ ರೈತ ಅಷ್ಟೊಂದು ಸಾಲ ತೀರಿಸುವುದು ಕನಸಿನ ಮಾತು. ಅದು ಹಾಗಿರಲಿ, ಆದರೆ ಆತ ಮಾಡಿಕೊಂಡಿರುವ ಸಾಲದ ಪರಿಯನ್ನು ಒಮ್ಮೆ ಗಮನಿಸಿ. ತನಗಿರುವ ಕೇವಲ ೧.೩೮ ಎಕರೆ ಹೊಲಕ್ಕಾಗಿ ಟ್ರಾಕ್ಟರ್‌ ಕೊಳ್ಳುವ (ಅದೂ ಸಾಲ ಮಾಡಿ) ಅಗತ್ಯವಾ...

"ಡಿಜಿಟಲ್‌ ಇಂಡಿಯಾ" - ಮೋದಿಯ ಮತ್ತೊಂದು ಕಲರ್‌ಫುಲ್‌ ಆಟ !

​ ಫೇಸ್‌ಬುಕ್‌ನಲ್ಲಿ  ಯಾರ ಪ್ರೊಫೈಲ್‌ ಚಿತ್ರ ನೋಡಿದರೂ ಕಲರ್‌ ಕಲರ್‌ ! ಅರೆರೆ ಏನಿದು ಎಲ್ಲರೂ ಈ ರೀತಿ ಮಕಕ್ಕೆ ಬಣ್ಣ ಬಳಕೊಂಡವರಲ್ಲ ಅಂತ ನೋಡಿದರೆ ಅದರ ಹಿಂದಿರುವುದು ಮತ್ತದೇ ಮೋದಿಯ ಮತ್ತೊಂದು ಕಲರ್‌ಫುಲ್‌ ಆಟದ ಹಕೀಕತ್ತು. ಮಾಧ್ಯಮಗಳಿಗೆ ಅಮೇಧ್ಯ ಉಣ್ಣಿಸಿ ತನ್ನ ಪ್ರತಿ ನಡೆಯನ್ನೂ ಜಾಹೀರಾತನ್ನಾಗಿ ಮಾಡಿಕೊಳ್ಳುತ್ತಿರುವ ಪ್ರಧಾನಿ ಮೋದಿ ಇದೀಗ "ಡಿಜಿಟಲ್‌ ಇಂಡಿಯಾ" ಎಂಬ ಹೆಸರಲ್ಲಿ ದೇಶೀಯ ಡಿಜಿಟಲ್‌ ಉದ್ಯಮವನ್ನ ಬೇರು ಸಮೇತ ಕಿತ್ತೊಗೆಯಲು ವಿದೇಶಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ. ಏನಿದು ಡಿಜಿಟಲ್‌ ಇಂಡಿಯಾ ? ಎಂದು ಯಾರಾದರೂ ಮಕಕ್ಕೆ ಬಣ್ಣ ಬಳಕೊಂಡವರ ಬಳಿ ಕೇಳಿ ನೋಡಿ. ಅವರಿಂದ ಬರುವ ಉತ್ತರ "ಗೊತ್ತಿಲ್ವ? ಡಿಜಿಟಲ್‌ ಇಂಡಿಯಾ ಕಣ್ರೀ, ಮೋದಿಯ ಮಹತ್ವಾಕಾಂಕ್ಷೆಯ ಯೋಜನೆ. ಇಡೀ ಭಾರತಕ್ಕೇ ಉಚಿತವಾಗಿ ವೈಫೈ ಮೂಲಕ ಇಂಟರ್ನೆಟ್‌ ಕೊಡುವ ಅತ್ಯದ್ಬುತ ಯೋಜನೆ ಇದು. ನೀವು ಯಾಕೆ ಇನ್ನೂ ಬೆಂಬಲ ನೀಡಿಲ್ಲ? ಮೋದಿಯನ್ನು ವಿರೋಧಿಸೋದೇ ಕೆಲಸಾನಾ? ಇಂತಹ ಒಳ್ಳೆಯ ಕೆಲಸ ಮಾಡಿದಾಗಲೂ ಬೆಂಬಲಿಸಬಾರದಾ?" ಅಂತ ಪ್ರಶ್ನಿಸದಿದ್ದರೆ ಕೇಳಿ. ಅದು ಅವರ ಅಮಾಯಕತೆ. ಕೆಲವರಿಗೆ ವಿಷಯದ ಅರಿವಿದ್ದರೂ ಬೇರೆ ಬೇರೆ ಸ್ವಾರ್ಥ ಕಾರಣಗಳಿಗಾಗಿ ಮುಚ್ಚಿಡುತ್ತಿದ್ದಾರೆ. ಇಂಟರ್ನೆಟ್‌ ಎಂಬುದು ಲಕ್ಷಾಂತರ ಕೋಟಿಯ ಉದ್ಯಮ ಡಿಜಿಟಲ್‌ ಇಂಡಿಯಾದ ಮೂಲ ಉದ್ದೇಶ ಜನರೆಲ್ಲಾ ತಿಳಿದಿರುವಂತೆ ಉಚಿತ ಇಂಟರ್ನೆಟ್‌ ಕೊಡುವುದೇನೋ ನಿಜ. ಆದರೆ ಅದರ ಸಾಧಕ ...

ದುರ್ಗಾಸ್ತಮಾನ

​ ಕನ್ನಡದ ಅತ್ಯಂತ ಪ್ರಮುಖ ಕಾದಂಬರಿಗಳಲ್ಲೊಂದಾದ "ದುರ್ಗಾಸ್ತಮಾನ" ಓದಿ ಮನಸ್ಸು ಭಾರವಾಯ್ತು. ಹಾಗೆಯೇ ಇದರಲ್ಲಿ ದುರ್ಗದ ಪ್ರಧಾನಿ 'ಕಳ್ಳಿ ನರಸಪ್ಪಯ್ಯ' ದುರ್ಗಕ್ಕೆ ದ್ರೋಹ ಮಾಡಿದರೇ ಎಂಬ ಸ್ಪಷ್ಟತೆಯನ್ನು ಲೇಖಕ ತರಸು ಅವರು ನೀಡಿಲ್ಲ. (ನರಸಪ್ಪಯ್ಯ ದ್ರೋಹ ಮಾಡಿದ್ದರ ಬಗ್ಗೆ ಆಧಾರ ದೊರೆತಿಲ್ಲ ಎಂದು ಮುನ್ನುಡಿಯಲ್ಲಿ ತಿಳಿಸಿದ್ದಾರೆ). ಆದರೆ ಒಂದು ಗೊಂದಲವನ್ನು ಉಳಿಸಿ ಹೋಗಿದ್ದಾರೆ. ಅದೇನೆಂದರೆ ದೇಶಾಂತರ ಸಂಚಾರ ಹೋಗಿ ಮರಳುವಾಗ ಹೈದರಾಲಿಗೆ ಸೆರೆ ಸಿಗುವ ನರಸಪ್ಪಯ್ಯ ದಿವಾನ್‌ ಪೂರ್ಣಯ್ಯನ ಎದುರಲ್ಲೇ ಹೆಂಡತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. (ಪುಟ ೫೭೨), ಆದರೆ ತದನಂತರದ ಯುದ್ದದ ಸಮಯದಲ್ಲಿ ಮದಕರಿ ನಾಯಕನಿಗೆ ನರಸಪ್ಪಯ್ಯನವರ ಕೈ ಬರಹದ ಪತ್ರವೊಂದು ತಲುಪುತ್ತದೆ. (ಪುಟ ೫೮೦). ತಮ್ಮ ಮನೆಯನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಡಬೇಕು ಎಂದು. ಆ ಮನೆಯಲ್ಲಿ ತಾವು ಪ್ರಧಾನಿಯಾಗಿದ್ದಾಗ ಹುದುಗಿಸಿಟ್ಟಿದ್ದ ದುರ್ಗಕ್ಕೆ ಸಂಬಂಧಿಸಿದ ಪ್ರಮುಖವಾದ ರಹಸ್ಯ ದಾಖಲೆಗಳು ಇರುತ್ತವೆ. ಅವು ನಂತರ ಅವರ ಮಗನ ಮೂಲಕ ಹೈದರಾಲಿಗೆ ದೊರೆಯುತ್ತವೆ. ಆ ಮೂಲಕ ದುರ್ಗದ ರಹಸ್ಯಗಳು ಹೈದರಾಲಿಗೆ ಸಿಕ್ಕು ಮದಕರಿ ನಾಯಕನನ್ನು ಸೋಲಿಸಲು ಸುಲಭವಾಗುತ್ತದೆ. ಕೊನೆ ಕೊನೆಯಲ್ಲಿ ಮದಕರಿಯು ಆಗಾಗ ಹೇಳುವಂತೆ "ಪ್ರಧಾನಿ ಕಳ್ಳಿ ನರಸಪ್ಪಯ್ಯನವರೂ ದುರ್ಗಕ್ಕೆ ದ್ರೋಹ ಬಗೆದರು" ಎಂಬ ಮಾತು ಸತ್ಯವೇ ಅನ್ನಿಸುತ್ತದೆ.