ಕಾಯಲೇನೇ ಗೆಳತಿ ಕಡಲುಕ್ಕುವ ಸಮಯಕ್ಕೆ
ಕಾಲಿಡುವೆಯೇನೇ ನೀ ನನ್ನ ಹೃದಯಕ್ಕೆ?
ಮಂಜು ಮುಸುಕುವ ಹೊತ್ತಿಗೆ
ಮಂದಾರ ಹೂ ನಿನ್ನ ನತ್ತಿಗೆ
ಬಾಡದಂತೆ ಹಿಡಿದು ನಾ ಸುತ್ತಿದೆ
ಕಾಣದೇ ನೀ ಹೋದೆ ಎತ್ತಗೆ?
ಬಳುಕು ಬಿನ್ನಾಣ, ಆ ತುಂಟ ಕಣ್ಣ
ಸಂಗ್ರಹಿಸಿಡಲೇ ನೀ ತುಳಿದ ಮಣ್ಣ
ಕುಡಿ ನೋಡ ನೀಡಿ ಕಾಡದಿರು ನನ್ನ
ಕಡಿದು ಸಂಬಂಧ ದೂರಾದರೇ ಚೆನ್ನ.
ಕಾಲಿಡುವೆಯೇನೇ ನೀ ನನ್ನ ಹೃದಯಕ್ಕೆ?
ಮಂಜು ಮುಸುಕುವ ಹೊತ್ತಿಗೆ
ಮಂದಾರ ಹೂ ನಿನ್ನ ನತ್ತಿಗೆ
ಬಾಡದಂತೆ ಹಿಡಿದು ನಾ ಸುತ್ತಿದೆ
ಕಾಣದೇ ನೀ ಹೋದೆ ಎತ್ತಗೆ?
ಬಳುಕು ಬಿನ್ನಾಣ, ಆ ತುಂಟ ಕಣ್ಣ
ಸಂಗ್ರಹಿಸಿಡಲೇ ನೀ ತುಳಿದ ಮಣ್ಣ
ಕುಡಿ ನೋಡ ನೀಡಿ ಕಾಡದಿರು ನನ್ನ
ಕಡಿದು ಸಂಬಂಧ ದೂರಾದರೇ ಚೆನ್ನ.
ಕಾಮೆಂಟ್‌ಗಳು