ಎಲ್ಲಿಂದ ನೀ ಬಂದೆ ಹೇಳೆ ಓ ಜಾಣೆ
ನನ್ನಲ್ಲಿ ಯಾಕಿಂತ ತಳಮಳವೋ ಕಾಣೆ
ಪಟ ಪಟನೆ ಮಾತುಗಳು
ಉದುರಿದರೆ ಮುತ್ತುಗಳು
ನಿನ್ನ ಸಂಗ ಹಿತವಾಯ್ತು ಹೆಣ್ಣೆ
ನಿನ್ನ ಮನಸೊಂದು ಮೃದುವಾದ ಬೆಣ್ಣೆ
ತೋರುವೆ ಆಗಾಗ ನೀ ಕೊಂಚ ಬಿಂಕ
ಆದರೆ ನಿನ್ನ ಮನಸು ಶುಭ್ರ ನಿಷ್ಕಳಂಕ
ತಿದ್ದಿ ತೀಡುವೆ ನೀ ನನ್ನ ಸರಿ ತಪ್ಪು ತಿಳಿಸಿ
ರದ್ದಿ ಬದುಕಲಿ ಒಂದು ಕೋಲ್ಮಿಂಚು ಹರಿಸಿ
ನಸುಕೋಪ, ಹುಸಿ ಜಗಳ
ಪರಸ್ಪರ ಇರಬಹುದು ಸುಮ್ನೇ ಬೈಗುಳ
ಆದರೂ ನಮ್ಮ ಸ್ನೇಹ ಬಲು ಸರಳ
ಎಲ್ಲದಕ್ಕೂ ಮೀರಿದ ನಿನ್ನೊಲುಮೆ ಬಹಳ
ನೀ ಹೇಳದೇ ಮಾಡಿದೆ ಅದೇನೋ ಮೋಡಿ
ನಾ ಕಾದಿರುವೆ ಗೆಳತಿ ನಿನ್ನೊಲವ ಬೇಡಿ
ಸ್ವಲ್ಪ ಕದ್ದೊಯ್ದೆ ನೀನೆನ್ನ ನಿದ್ರೆ
ಒತ್ತಲೇನೇ ಕೆನ್ನೆಗೊಂದು ಚುಂಬಕ ಮುದ್ರೆ
ನನ್ನಲ್ಲಿ ಯಾಕಿಂತ ತಳಮಳವೋ ಕಾಣೆ
ಪಟ ಪಟನೆ ಮಾತುಗಳು
ಉದುರಿದರೆ ಮುತ್ತುಗಳು
ನಿನ್ನ ಸಂಗ ಹಿತವಾಯ್ತು ಹೆಣ್ಣೆ
ನಿನ್ನ ಮನಸೊಂದು ಮೃದುವಾದ ಬೆಣ್ಣೆ
ತೋರುವೆ ಆಗಾಗ ನೀ ಕೊಂಚ ಬಿಂಕ
ಆದರೆ ನಿನ್ನ ಮನಸು ಶುಭ್ರ ನಿಷ್ಕಳಂಕ
ತಿದ್ದಿ ತೀಡುವೆ ನೀ ನನ್ನ ಸರಿ ತಪ್ಪು ತಿಳಿಸಿ
ರದ್ದಿ ಬದುಕಲಿ ಒಂದು ಕೋಲ್ಮಿಂಚು ಹರಿಸಿ
ನಸುಕೋಪ, ಹುಸಿ ಜಗಳ
ಪರಸ್ಪರ ಇರಬಹುದು ಸುಮ್ನೇ ಬೈಗುಳ
ಆದರೂ ನಮ್ಮ ಸ್ನೇಹ ಬಲು ಸರಳ
ಎಲ್ಲದಕ್ಕೂ ಮೀರಿದ ನಿನ್ನೊಲುಮೆ ಬಹಳ
ನೀ ಹೇಳದೇ ಮಾಡಿದೆ ಅದೇನೋ ಮೋಡಿ
ನಾ ಕಾದಿರುವೆ ಗೆಳತಿ ನಿನ್ನೊಲವ ಬೇಡಿ
ಸ್ವಲ್ಪ ಕದ್ದೊಯ್ದೆ ನೀನೆನ್ನ ನಿದ್ರೆ
ಒತ್ತಲೇನೇ ಕೆನ್ನೆಗೊಂದು ಚುಂಬಕ ಮುದ್ರೆ
ಕಾಮೆಂಟ್‌ಗಳು