ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಲೈಂಗಿಕ ವಸ್ತುಗಳ ನಿಷೇಧ ಸರಿಯೇ?

ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು. ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ. ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು. ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು ಅಭಿವೃದ್ದಿ ...

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು

ಹೊಸ ಕೃಷಿ ಕಾಯ್ದೆಯ ಬಗ್ಗೆ ಕೆಲವು ವಿವರಣೆಗಳು: ಅದಾನಿ, ಅಂಬಾನಿ ಮತ್ತು ಇತರ ಕಾರ್ಪೊರೇಟ್‌ಗಳು ಭಾರತದ ಬೃಹತ್ ಆಹಾರ ಧಾನ್ಯ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ರೈತರ ಹೊಲಕ್ಕೆ ಲಗ್ಗೆ ಹಾಕಲು ಅವರಿಗೆ ಕೆಲವು ತಡೆಗಳು ಇದ್ದವು: ತಡೆ 1: ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲು ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ಕಟ್ಟಳೆ ಮತ್ತು ಕಾನೂನುಗಳನ್ನು ಹೊಂದಿದ್ದವು.  ಕಾರ್ಪೊರೇಟ್‌ಗಳು ಹಲವು ವಿಭಿನ್ನ ನಿಯಮಗಳು ಮತ್ತು ತೆರಿಗೆಗಳನ್ನು ಹೊಂದಿರುವ ಅನೇಕ ರಾಜ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಮೋದಿ ಕೊಟ್ಟ ಪರಿಹಾರ: ರಾಜ್ಯಗಳಿಂದ ನಿಯಂತ್ರಣವನ್ನು ತೆಗೆದುಕೊಂಡು ಇಡೀ ದೇಶಕ್ಕೆ 1 ಕಾಯ್ದೆ ಮಾಡಿದೆ.  ಕಾರ್ಪೊರೇಟ್‌ಗಳು ಈಗ ಸಂತೋಷವಾಗಿದ್ದಾರೆ. ತಡೆ 2: ಕಾರ್ಪೊರೇಟ್‌ಗಳು ಬೆಳೆಗಳನ್ನು ಖರೀದಿಸಿ ಸಂಗ್ರಹಿಸಿ ಆ ಮೂಲಕ ಬೆಲೆಗಳು ಏರುವಂತೆ ಮಾಡಿ ಆಮೇಲೆ ಮಾರಾಟ ಮಾಡುವ ಹೊಂಚು ಹಾಕಿದ್ದವು.  ಆದರೆ ಎಸೆನ್ಷಿಯಲ್ ಕಮೊಡಿಟಿ ಆಕ್ಟ್ ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುವುದರಿಂದ ದೀರ್ಘಕಾಲದವರೆಗೆ ಬೆಳೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಿತ್ತು. ಮೋದಿ ಕೊಟ್ಟ ಪರಿಹಾರ: ಆಹಾರ ಬೆಳೆಗಳು ಅಗತ್ಯ ಸರಕು ಕಾಯ್ದೆಯಡಿ ಬರುವುದಿಲ್ಲ ಮತ್ತು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಬಹುದು.  ಕಾರ್ಪೊರೇಟ್‌ಗಳು ಮತ್ತೆ ಸಂತೋಷಗೊಂಡಿದ್ದಾರೆ. ತಡೆ 3: ರೈತರು ಯಾವ ರೀತಿಯ ಬೆಳೆ ಬೆಳೆಯುತ್ತಾ...

ಹಿಂದಿಯೇತರರ ಮೇಲೆ ಇಂಡಿಯಾ ಹೂಡಿರುವ ಯುದ್ದ!

ಇಂಡಿಯಾ ಒಕ್ಕೂಟ 1947 ರಿಂದಲೂ ಒಂದು ಯುದ್ಧವನ್ನು ಮಾಡುತ್ತಾ ಬಂದಿದೆ! ಅದು ಪರೋಕ್ಷ ಯುದ್ದ. ಯಾರ ಮೇಲೆ ಅಂದರೆ 'ತನ್ನದೇ ಪ್ರಜೆಗಳು' ಅಂತ ನಂಬಿಸಲಾಗಿರುವ ಹಿಂದಿಯೇತರ ಜನರ ಮೇಲೆ! ಹಿಂದಿಯೇತರ ನುಡಿಗಳ ನಾಶ ಮತ್ತು ಆ ಜನರ ಸ್ವಾತಂತ್ರ್ಯ ಹರಣ ಈ ಯುದ್ಧದ ಉದ್ದೇಶ. ಇದು ಚೀನಾ ದೇಶವು ಮುಸ್ಲಿಮರ ಅಸ್ತಿತ್ವವನ್ನು ಹೊಸಕಿ ಹಾಕುತ್ತಿರುವಷ್ಟೇ ಕ್ರೌರ್ಯದ ಕೆಲಸ.  ಇದನ್ನು ಯಾರು ಶುರು ಮಾಡಿದರು ಅಂತ ನೋಡಲು ಹೋದರೆ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದ ದೊಡ್ಡ ದೊಡ್ಡ ಹೆಸರುಗಳೇ ಮುಂದೆ ಬರುತ್ತವೆ. ಜಾತಿ ಸಮಾನತೆಗೆ ಅಷ್ಟು ಮಹತ್ವ ಕೊಟ್ಟ ಅದೇ ಅಂಬೇಡ್ಕರ್ ನುಡಿ ಸಮಾನತೆಯನ್ನು ಮಾತ್ರ ಕಡೆಗಣಿಸಿದ್ದು ಆಘಾತ ಉಂಟುಮಾಡುವ ವಿಷಯ. ಒಕ್ಕೂಟ ರಚನೆಯಾದ ಹೊಸದರಲ್ಲಿ 'ಒಂದಾಗುವಿಕೆ'ಗಾಗಿ ಹಾಗೆ ಮಾಡಲಾಯ್ತು ಅಂತ ತೇಪೆ ಹಾಕಬಹುದು ಅಷ್ಟೇ. ತಮಾಷೆ ಅಂದರೆ ಡಿಎಂಕೆ ಬಿಟ್ಟರೆ ಯಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳುಇ ಇದರ ಬಗ್ಗೆ ದನಿ ಎತ್ತುತಿಲ್ಲ! ಆದರೆ ಅಲ್ಲಿಂದ ಶುರುವಾದ ನಮ್ಮ ಸ್ವಾತಂತ್ರ್ಯ ಹರಣದ ಕೆಲಸ ಇಂದೂ ನಿಂತಿಲ್ಲ, ಬಿಜೆಪಿ ಆಡಳಿತದಲ್ಲಿ ಅದು ಇನ್ನಷ್ಟು ವೇಗವನ್ನು ಪಡೆದುಕೊಂಡಿದೆ. ಇದನ್ನು ತಡೆಯುವುದು ಹೇಗೆ? ನಮ್ಮ ನುಡಿಯ ಜೊತೆಗೆ ನಮ್ಮತನವನ್ನು ಉಳಿಸಿಕೊಳ್ಳುವುದು ಹೇಗೆ?  ಮೊದಲಿಗೆ ಈ ಹಿಂದಿ ಒಕ್ಕೂಟದ ಹುನ್ನಾರವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಶ ಅನ್ನುವುದು ಒಂದು ಬೋಗಸ್ ಬಣ್ಣ, ಇದರ ಹಿಂದೆ ಇರುವುದು...

ಎಂ.ಹೆಚ್. 370 ನಿಗೂಢ ಕಣ್ಮರೆ!

ಮಾರ್ಚ್ 8, 2014 ರ ನಡುರಾತ್ರಿ ಹನ್ನೆರಡೂವರೆಗೆ ಸರಿಯಾಗಿ ಕೌಲಾಲಂಪುರ ದಿಂದ ಒಂದು ವಿಮಾನವು ಹೊರಡುತ್ತೆ. ಅದು ಮರುದಿನ ಬೆಳಗ್ಗೆ 6.30 ರ ಹೊತ್ತಿಗೆ ಚೀನಾದ ಬೀಜಿಂಗ್ ನ್ನು ಹೋಗಿ ಸೇರಬೇಕು. ಆದರೆ ಮರುದಿನ ಬೆಳಿಗ್ಗೆ ಅದು ಎಷ್ಟು ಹೊತ್ತು ಕಳೆದರೂ ಬೀಜಿಂಗ್ ಹೋಗಿ ಸೇರಲೇ ಇಲ್ಲ. ಅದಾಗಿ ಬರೋಬ್ಬರಿ ಐದು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಕೂಡ ವಿಮಾನವು ಏನಾಯ್ತು, ಎಲ್ಲಿ ಹೋಯಿತು, ಈಗ ಎಲ್ಲಿದೆ, ಸಮುದ್ರಕ್ಕೆ ಬಿದ್ದು ಹೋಯಿತ, ಸಿಡಿದು ಹೋಯಿತಾ, ಸುಟ್ಟು ಬೂದಿ ಅಗೋಯ್ತಾ, ಅಥವಾ ಅನ್ಯಗ್ರಹ ವಾಸಿಗಳು ಏನಾದ್ರು ಅಪಹರಣ ಮಾಡ್ಕೊಂಡು ತಗೊಂಡೆ ಹೋಗ್ಬಿಟ್ರ ಏನಾಯ್ತು ಅನ್ನುವ ಸುಳಿವು ಸಿಕ್ಕಿಲ್ಲ. ಆ ವಿಮಾನದ ಹೆಸರು ಮಲೇಶಿಯನ್ 370. ಅದರಲ್ಲಿ ಇದ್ದಿದ್ದು 229 ಜನ ಪ್ರಯಾಣಿಕರು ಮತ್ತು 12 ಜನ ಸಿಬ್ಬಂದಿಗಳು. ಈ ವಿಮಾನದ ಕಣ್ಮರೆಯು ವಿಮಾನಗಳ ಇತಿಹಾಸದಲ್ಲೇ ಅತಿದೊಡ್ಡ ಒಗಟಾಗಿ ಉಳಿದಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿಯೂ ಈ ರೀತಿ ನೂರಾರು ಜನರು ತುಂಬಿರುವ ದೊಡ್ಡದೊಂದು ವಿಮಾನವು ಕಳೆದು ಹೋಗುವುದು ಅಂದರೆ ನಂಬಲು ಕಷ್ಟವಾದರೂ ನಂಬಲೇ ಬೇಕಾಗಿದೆ. ಎಂ.ಎಚ್. 370 ವಿಮಾನವು ಬೀಜಿಂಗ್ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನವೂ ಓಡಾಡುತ್ತಿರುತ್ತದೆ. ಕೌಲಾಲಂಪುರ್ ಇಂದ ಬೀಜಿಂಗ್ ಗೆ 5.30 ಘಂಟೆಗಳ ಪ್ರಯಾಣ. ಅಂದು ಆ ವಿಮಾನದಲ್ಲಿ 49000 ಕೆಜಿಯಷ್ಟು ಉರುವಲು ಇತ್ತು. ಇದು ಸುಮಾರು ಏಳು ಮುಕ್ಕಾಲು ಗಂಟೆಗಳಷ್ಟು ಹೊತ್ತು ಹಾರಾಡಲು ಸಾ...

ಹುಡುಗಿಯರು ಯಾಕೆ 'ತುಂಬಾ ಒಳ್ಳೆಯ ಹುಡುಗ'ರನ್ನ ಪ್ರೀತಿ ಮಾಡಲ್ಲ ?

ತುಂಬಾ ಸಲ ಹುಡುಗರು ಹೇಳ್ತಾ ಇರೋದನ್ನು ಕೇಳಿರುತ್ತೇವೆ ಏನೆಂದರೆ ಹುಡುಗೀರು ಎಂಥೆಂಥವರನ್ನೋ ಪ್ರೀತಿ ಮಾಡುತ್ತಾರೆ ಆದರೆ ನಮ್ಮಂಥ ಒಳ್ಳೆ ಹುಡುಗನ ಪ್ರೀತಿ ಮಾಡಲ್ಲ ಅಂತ. ಇದು ನಿಜ ಕೂಡ. ತುಂಬಾ ಒಳ್ಳೆ ಹುಡುಗರನ್ನ ಹುಡುಗಿಯರು ಯಾಕೆ ಪ್ರೀತಿ ಮಾಡಲ್ಲ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡ್ತಾ ಇದ್ರೆ ಈ ವಿಡಿಯೋನ ನೋಡಿ. ಸಾಧಾರಣವಾಗಿ "ತುಂಬಾ ಒಳ್ಳೆಯ ಹುಡುಗ"ರನ್ನು ಯಾವ ಹುಡುಗಿ ಕೂಡ ಪ್ರೀತಿ ಮಾಡೋದಿಲ್ಲ. ಅಂತಹ ಹುಡುಗರ ಜೊತೆ ಹುಡುಗೀರು ಗೆಳೆತನ ಮಾಡ್ತಾರೆ, ಚೆನ್ನಾಗಿ ಮಾತನಾಡುತ್ತಾರೆ, ಹೆಲ್ಪ್ ತಗೊಳ್ತಾರೆ ಮತ್ತು ತಮ್ಮ ಕಷ್ಟ ಸುಖಗಳನ್ನ ಹೇಳಿಕೊಳ್ಳುತ್ತಾರೆ. ಆದರೆ ಅಪ್ಪಿ ತಪ್ಪಿಯೂ ಪ್ರೀತಿ ಮಾತ್ರ ಮಾಡೋದಿಲ್ಲ. ಒಂದು ವೇಳೆ ಮಾಡಿದರೂ ಕೂಡ ಆ ಪ್ರೀತಿ ತುಂಬಾ ದಿನ ಬಾಳೋದು ಕಷ್ಟ. ನಿಧಾನವಾಗಿ ಹುಡುಗೀರು ಆ "ತುಂಬಾ ಒಳ್ಳೆಯ ಹುಡುಗ"ರಿಂದ ದೂರಾಗಿ ಬಿಡುತ್ತಾರೆ. ಅದೇ ಹುಡುಗಿಯರು ಒರಟರನ್ನು, ಪಟಿಂಗರನ್ನು, ರೋಡ್ ರೋಮಿಯೋಗಳನ್ನು, ಪೊರ್ಕಿಗಳನ್ನು, ಕಣ್ಣು ಮುಚ್ಚಿಕೊಂಡು ಪ್ರೀತಿ ಮಾಡ್ತಾ ಇರ್ತಾರೆ. ಇದು ಒಳ್ಳೆಯ ಹುಡುಗರ ಪಾಲಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತೆ. ತುಂಬಾ ಹುಡುಗರಿಗೆ ಹುಡುಗಿಯರ ಈ ನಿಲುವು ಅರ್ಥವಾಗುವುದೇ ಇಲ್ಲ. ಹಾಗಾಗಿ ಎಷ್ಟೋ ಜನ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಹಣ ಮತ್ತು ಸಮಯವನ್ನು ಕಳೆಯುತ್ತಿರುತ್ತಾರೆ. ಆದರೆ ಇಂತಹ ಗೆಳೆತನಗಳು ಪ್ರೀತಿಯಾಗಿ ಬದಲಾಗದೆ, ಅಥವಾ ಒಂದು ಬದಿಯ ಪ್ರೀತಿ ಮಾತ...

ಕನ್ನಡ ನಾಡಿನ ಕಲಿ ಸಂಗೊಳ್ಳಿ ರಾಯಣ್ಣ

ಈ ಹೆಸರು ಕೇಳಿದರೇನೇ ಎಂತವರ ಮೈಯ್ಯಲ್ಲೂ ಒಂದು ಮಿಂಚಿನ ಸಂಚಾರವಾಗುತ್ತದೆ. ರಾಯಣ್ಣ ಅನ್ನುವುದು ಒಂದು ವ್ಯಕ್ತಿಯಲ್ಲ, ಅದೊಂದು ಈ ಕರುನಾಡಿನಲ್ಲಿ ಹುಟ್ಟಿದ ಮಹಾನ್‌ ಶಕ್ತಿ. ಅಂದು ಬ್ರಿಟೀಷರು ರಾಯಣ್ಣನ ಹೆಸರು ಕೇಳಿದರೇನೇ ನಡುಗುತ್ತಿದ್ದರು. ರಾಯಣ್ಣನ ಹೆಸರು ಕೇಳಿದರೆ ಅವರ ಮೈಯ್ಯಲ್ಲಿ ಕಂಪನ ಶುರುವಾಗುತ್ತಿತ್ತು. ರಾಯಣ್ಣನಿಂದಾಗಿ ಬ್ರಿಟಿಷರು ಕಿತ್ತೂರಿನ ಕಡೆ ಕಾಲಿಡಲೂ ಹೆದರುವ ಕಾಲವೊಂದಿತ್ತು. ಅದು ರಾಯಣ್ಣನ ಶಕ್ತಿ ಮತ್ತು ಯುಕ್ತಿಯ ಹೆಚ್ಚುಗಾರಿಕೆ. ರಾಯಣ್ಣ ಹುಟ್ಟಿದ್ದು ೧೭೯೮ ರ ಆಗಷ್ಟ್‌ ೧೫ ರಂದು ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ. ರಾಯಣ್ಣನ ಹಿರಿಯರು ಕಿತ್ತೂರು ಸಂಸ್ಥಾನದ ಅರಮನೆಗಳಲ್ಲಿ ವಾಲೇಕಾರ ಕೆಲಸ ಮಾಡುತ್ತಾ ಬಂದವರು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರೆ. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿಯಾಗಿದ್ದ. ಊರೊಳಗೆ ನುಗ್ಗಿ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಯೊಂದನ್ನು ಹೊಡೆದು ಹಾಕಿದ ಸಾಹಸಿ ಬರಮಣ್ಣ! ಅವರ ಆ ಸಾಹಸಕ್ಕೆ ಮೆಚ್ಚಿ ರಾಜರು "ರಕ್ತ ಮಾನ್ಯದ ಹೊಲ"ವನ್ನು ಬಳುವಳಿ ನೀಡಿದ್ದರು. ಅದಲ್ಲದೇ ಬರಮಣ್ಣ ಸಂಗೊಳ್ಳಿಯ ಗರಡಿ ಮನೆಯ ಗಟ್ಟಿ ಕಟ್ಟಾಳು ಕೂಡಾ ಆಗಿದ್ದರು. ಅಂತಹ ಅಂಜದೆಯ ಗಂಡಿನ ಮಗನಾಗಿ ಹುಟ್ಟಿದ ರಾಯಣ್ಣ ನೂರೆದೆಯ ಸಾಹಸಿಯಾಗಿದ್ದ. ಇತ್ತ ಕಿತ್ತೂರಿನ ದೊರೆ ಮಲ್ಲಸರ್ಜನು ಮರಾಠಿ ಪೇಶ್ವೆಗಳ ಮೋಸದ ಬಲೆಗೆ ಸಿಕ್ಕು ಸಾವಿಗೆ ಈಡ...

ಮಳೆ ಶುಭವೋ ಅಶುಭವೋ ?

ಈಗ ಮತ್ತೊಂದು ಸಮಸ್ಯೆ ತಲೆದೋರಿದೆ. ಅದು ಏನೆಂದರೆ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವಾಗ ಮಳೆ ಬಂದಿದ್ದು ಶುಭ ಸೂಚಕವೋ, ಅಶುಭ ಸೂಚಕವೋ ಅನ್ನೋದು. ಕುಮಾರಸ್ವಾಮಿ ಅವರನ್ನ ಒಪ್ಪುವವರಿಗೆ ಶುಭ ಸೂಚಕವಾಗಿಯೂ, ಒಪ್ಪದವರಿಗೆ ಅಶುಭ ಸೂಚಕವಾಗಿಯೂ ಮತ್ತು ಈ ಶುಭ ಅಶುಭವನ್ನೇ ಒಪ್ಪದ ನನ್ನಂಥವರಿಗೆ ಅದು ಕೇವಲ ಒಂದು ಮಳೆಯಾಗಿಯೂ ಕಾಣಿಸಿದೆ. ನೋಡಿ ಒಂದು ಮಳೆಗೆ ಮೂರು ಮೂರು ಆಯಾಮ ! ಮಳೆ ಬಂದಿದ್ದು ಶುಭ ಅನ್ನುವವರು ಸೀದಾ ದ್ವಾಪರಯುಗಕ್ಕೆ ಹೋಗಿ ಕೃಷ್ಣ ಹುಟ್ಟಿದಾಗ ಬಂದ ಮಳೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಕರೆ ತಂದಿದ್ದಾರೆ. ಇನ್ನು ನನ್ನ ಲಿಸ್ಟ್ ನಲ್ಲಿ ಅಶುಭದ ಕಡೆಯವರು ಇಲ್ಲದ ಕಾರಣ ಅವರ ಬತ್ತಳಿಕೆಯಲ್ಲಿ ಏನೆಲ್ಲಾ ಸಾಕ್ಷ್ಯ ಪುರಾವೆಗಳು ಇವೆಯೋ ತಿಳಿದಿಲ್ಲ. ಇಲ್ಲ ಅಂದರೂ ಸಹ ಪೋಸ್ಟ್ ಕಾರ್ಡ್ ಮೂಲಕ ಎಷ್ಟು ಪುರಾವೆಗಳನ್ನು ಬೇಕಿದ್ದರೂ ಅವರು ತಂದು ನಿಲ್ಲಿಸುವ ಶಕ್ತಿ ಇರುವವರು. ಅವರಿಬ್ಬರನ್ನು ಬಿಟ್ಟು ಮೂರನೇ ಗುಂಪಿನ ನಮಗೆ ಹಳೇ ಕಾಲದ ಸಾಕ್ಷಿಗಳು ಸಿಗುವುದು ಕಷ್ಟ. ಹಾಗಾಗಿ ನಾವು ಈಗಿನ ಕಾಲದ ವಿಷಯಗಳನ್ನೇ ಮುಂದಿಡಬೇಕು. ಹಳೆಯ ಕಾಲದ ಸಾಕ್ಷಿಗಳನ್ನೇ ಪರಿಗಣಿಸುವುದಾದರೆ ಕೂಡ ಶುಭ, ಅಶುಭ ಎರಡೂ ಅವರವರಿಗೆ ಸರಿ ಆಗುತ್ತದೆ. ಹೇಗೆಂದರೆ ಕೃಷ್ಣನಿಂದ ಒಳ್ಳೆಯದು ಆದವರಿಗೆ ಆತ ಹುಟ್ಟಿದಾಗ ಮಳೆ ಬಂದುದು ಶುಭ ಸೂಚನೆ ಆಗಿದ್ದರೆ, ಅವನಿಂದ ತೊಂದರೆಗೆ ಒಳಗಾದವರಿಗೆ (ಕೌರವರು) ಅದು ಅಶುಭ ಸೂಚನೆ ಅಲ್ಲವೇ ? ಅದನ್ನು ಹಾಗೆ ಎತ್ತಿಕೊಂಡು ಬಂದು ಕುಮಾರ...

ಗುಬ್ಬಿ ಗೂಡು ಮತ್ತು ಅನಾಥ ಮರಿ !

ಆಗ ನಾನು ಕುಂಬಳಗೊಡಿನ ಪೆಪ್ಸಿ ಕಂಪನಿಯ ಸಮೀಪ ಮನೆ ಮಾಡಿಕೊಂಡಿದ್ದೆ. ಆ ಮನೆಯ ಹೊರಗಿನ ಒಂದು ಮೂಲೆಯಲ್ಲಿ ಒಂದು ಜೋಡಿ ಗುಬ್ಬಿಗಳು ಗೂಡು ಮಾಡಿಕೊಂಡು ಇದ್ದವು. ಅವು ಮೊಟ್ಟೆ ಇಟ್ಟು ಮರಿಯನ್ನೂ ಮಾಡಿದವು. ಅದೇ ಸಮಯಕ್ಕೆ ಸರಿಯಾಗಿ ಹತ್ತಿರದಲ್ಲೆ ಇದ್ದ ನನ್ನ ಗೆಳೆಯನ ಮೆಯವರು ಅವರ ಗೋಡೌನ್‌ ಸ್ವಚ್ಚ ಮಾಡುವಾಗ ಅಲ್ಲಿಯೂ ಒಂದು ಗುಬ್ಬಿ ಗೂಡು ಇದ್ದು, ಅದರಲ್ಲೂ ಎರಡು ಮರಿಗಳು ಇದ್ದವು. ಆದರೆ ಅವರು ನೋಡದೇ ಎಳೆದು ಹಾಕಿದ್ದರಿಂದ ಬಿದ್ದು ಒಂದು ಮರಿ ಸತ್ತು ಹೋಗಿ ಮತ್ತೊಂದು ಮರಿ ಮಾತ್ರ ಉಳಿಯಿತು. ಅದನ್ನು ಅವನು ತಂದು ನನಗೆ ಕೊಟ್ಟ. ನಾನದನ್ನು ನಮ್ಮ ಮನೆಯಲ್ಲಿ ಇದ್ದ ಗುಬ್ಬಿ ಗೂಡಿನ ಒಳಗೆ ಇದನ್ನೂ ಬಿಟ್ಟೆ. ಮೂರೂ ಮರಿಗಳೂ ಒಂದೇ ತರ ಇದ್ದವು. ಮೂರೂ ಕಣ್ಣು ಕೂಡಾ ಬಿಟ್ಟಿರಲಿಲ್ಲ. ಆದರೆ ಹೊರಗೆ ಹೋಗಿದ್ದ ತಾಯಿ ಗುಬ್ಬಿ ಬಂದು ತನ್ನ ಮರಿಗಳ ಜೊತೆ ಬೇರೆ ಮರಿಯೊಂದು ಇರುವುದನ್ನು ಹೇಗೋ ಗುರುತಿಸಿ ಅದನ್ನು ಎಳೆದು ಹೊರಗೆ ಹಾಕಿತು. ಅದು ಹೀಗೆ ಮಾಡಬಹುದು ಎಂದು ಮೊದಲೇ ಊಹಿಸಿದ್ದ ನಾನು ಆ ಗೂಡಿನ ನೇರಕ್ಕೆ ಗೋಣಿಚೀಲಗಳನ್ನೆಲಾ ಹಾಕಿ ಮೆತ್ತೆ ಮಾಡಿ ಇಟ್ಟಿದ್ದೆ, ಮರಿ ಬಿದ್ದರೂ ಏನೂ ಆಗಬಾರದು ಅಂತ. ತಾಯಿ ಗುಬ್ಬಿ ಹೊರಗೆ ಹೋದಾಗ ಮತ್ತೆ ಆ ಮರಿಯನ್ನು ಗೂಡಿನೊಳಗೆ ಬಿಟ್ಟರೂ ಮತ್ತೊಮ್ಮೆ ಬಂದಾಗ ಮತ್ತೆ ಹೊರಗೆ ತಳ್ಳಿತು. ಬೇರೆ ದಾರಿ ಕಾಣದೇ ಅನಾಥ ಮರಿಯನ್ನು ತಂದು ಮನೆಯ ಒಳಗೆ ಒಂದು ಮೂಲೆಯಲ್ಲಿ ಗೂಣಿಚೀಲವನ್ನೇ ಗೂಡಿನಂತೆ ಮಾಡಿ ನೀರು ಕುಡಿಸಿ ಮರಿಯನ್ನು ಅಲ...

ರಾಜ್ ವಿಷ್ಣು ನಡುವೆ ತಡೆಯಾಗಿ ನಿಂತವರು ಯಾರು ?

ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಅಮೋಘ ನಟನೆಯ ಮುತ್ತಿನ ಹಾರ ಚಿತ್ರದಲ್ಲಿ ಒಂದು ಹಾಡು ಬರುತ್ತದೆ, "ದೇವರು ಹೊಸೆದಾ ಪ್ರೇಮದ ದಾರಾ..." ಅಂತ. ನನಗೆ ಈ ಹಾಡನ್ನು ಕೇಳುವಗೆಲ್ಲ ಅನ್ನಿಸೋದು, ಇದನ್ನು ಅಣ್ಣೋರು ಹಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ. ಬಾಲ ಮುರುಳಿ ಕೃಷ್ಣ ಅವರು ಹಾಡಿದ್ದು ಚೆನ್ನಾಗಿದೆ ಆದರೂ ಅದನ್ನು ರಾಜ್ ರಿಂದ ಹಾಡಿಸಿದ್ದರೆ ಕನ್ನಡದಲ್ಲಿ ಮತ್ತೊಂದು ಅಪೂರ್ವ ಸಂಗಮ ಆದಂತೆ ಇರುತ್ತಿತ್ತು. ಅದಾಗಲೇ ರಾಜ್ ಬೇರೆ ನಾಯಕರಿಗೆ ಆಗೊಂದು ಈಗೊಂದು ಹಾಡುಗಳನ್ನು ಹಾಡುತ್ತ ಇದ್ದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪ್ರಜಾವಾಣಿ ಯಲ್ಲಿ ಆ ಚಿತ್ರದ ನಿರ್ಮಾಣದ ಬಗ್ಗೆ ಬರೆದಿದ್ದರು, ಅದರಲ್ಲಿ ಕಷ್ಟ ಪಟ್ಟು ಹೈದರಾಬಾದ್ ಹೋಗಿ ಬಾಲ ಮುರುಳಿ ಕೃಷ್ಣ ಅವರ ಹತ್ತಿರ ಹಾಡಿಸಿದೆವು ಅಂತ ಬರೆದಿದ್ದರು. ಆದರೆ ಎಲ್ಲಿಯೂ ರಾಜ್ ರಿಂದ ಅದನ್ನು ಹಾಡಿಸಬಹುದೇ ಎಂಬುದರ ಬಗ್ಗೆ ಯೋಚಿಸಿದ ಪ್ರಸ್ತಾಪವೇ ಇರಲಿಲ್ಲ! ಯಾಕೆ ಅಷ್ಟು ದೊಡ್ಡ ನಿರ್ದೇಶಕರಿಗೆ ಅಂತಹ ಯೋಚನೆ ಬರಲಿಲ್ಲ ಅಂತ ಆಶ್ಚರ್ಯ ಆಗುತ್ತದೆ. ಒಂದು ವೇಳೆ ಬಾಬು ಮತ್ತು ವಿಷ್ಣು ಇಬ್ಬರೂ ಹೋಗಿ ರಾಜ್ ರಲ್ಲಿ ಕೇಳಿಕೊಂಡಿದ್ದರೆ ರಾಜ್ ಹಾಡಲು ಒಪ್ಪದೇ ಇರುತ್ತಿರಲಿಲ್ಲ. ಸಂಗೀತ ನಿರ್ದೇಶಕ ಹಂಸಲೇಖ ಕೂಡ ಅದಾಗಲೇ ರಾಜ್ ಬ್ಯಾನರ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ನಿರ್ದೇಶಕರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ಡಾ. ರಾಜ್ ಮತ್ತೆ ವಿಷ್ಣುವರ್ಧನ್ ಗಂಧದ...

ಅಂದಿನ ಸಮುದ್ರ ಇಂದಿನ ಮರಳುಗಾಡು !

ಮರಳುಗಾಡಲ್ಲಿ ಯಾಕೆ ಬೋಟ್‌ಗಳು ನಿಂತಿವೆ ಅಂತ ಚಕಿತರಾಗಬೇಡಿ. ಕೇವಲ ಆರೇಳು ದಶಕದ ಹಿಂದೆ ಇದು ಒಂದು ಚಿಕ್ಕ ಸಮಸ್ರವಾಗಿತ್ತು ಮತ್ತು ಈ ಜಾಗದಲ್ಲಿ ೨೦೦ ಮೀಟರಿಗೂ ಹೆಚ್ಚು ಎತ್ತರ ನೀರು ನಿಂತಿತ್ತು. ಆದರೆ ಇಂದು ಎಲ್ಲವೂ ಬತ್ತಿ ಬರಡಾಗಿ ಸಮಸ್ರವಿದ್ದ ಜಾಗ ಮರಳುಗಾಡಾಗಿದೆ. ಈ ಸಮುದ್ರದ ಹೆಸರು "Aral Sea" ಎಂದು. ಕಜಕಿಸ್ತಾನ್‌ ದೇಶದಲ್ಲಿದೆ. ಒಂದು ಸಮಯದಲ್ಲಿ ಇದರಿಂದ ವರ್ಷಕ್ಕೆ ೫೦,೦೦೦ ಟನ್‌ಗಳಷ್ಟು ಮೀನು ಸಿಗುತ್ತಿತ್ತಂತೆ ! ಆದರೆ ಈಗ ಹೀಗೆ ಬರಡು ಬೂಮಿಯನ್ನಾಗಿಸಿದ್ದು ಮಾತ್ರ ಮನುಷ್ಯ. ನದಿಗಳನ್ನು ತಿರುಗಿಸಿ, ಈ ಸಮುದ್ರದಿಂದಲೂ ನೀರನ್ನೆತ್ತಿ ಕೃಷಿಗೆ ಅಂತ ಉಪಯೋಗಿಸಲಾರಂಭಿಸಿದರು. ಅರ್ಧ ಶತಮಾನ ಕಳೆಯುವುದರಲ್ಲಿ ಸಮುದ್ರ ಮರಳುಗಾಡಾಗಿ ಬದಲಾಗಿದೆ. ಈಗ ಅಲ್ಲಿನ ಕೃಷಿಯೂ ನೀರಿಲ್ಲದೇ ಅತಂತ್ರ ಸ್ಥಿತಿಯಲ್ಲಿದೆ. ಅಂದಿನ ಸೋವಿತ್‌ ಯೂನಿಯನ್‌ ಸರ್ಕಾರ ಮಾಡಿದ ಎಡವಟ್ಟಿನಿಂದ ಪ್ರಕೃತಿಗೆ ಅತಿ ದೋಡ್ಡ ಹೊಡೆತ ಬಿದ್ದಿದೆ. ಹಾಗೆಯೇ ಈಗ ನಮ್ಮ ಯೂನಿಯನ್‌ ಸರ್ಕಾರ ಸಹ "ಗಂಗಾ ಕಲ್ಯಾಣ" "ಗಂಗಾ ಕಾವೇರಿ" ಎಂಬ ಏನೇನೋ ಯೋಜನೆಗಳ ಬಗ್ಗೆ ಮಾತಾಡುತ್ತಿದೆ. ಗಂಗಾ ನದಿಯನ್ನು ತಿರುಗಿಸಿ ದೇಶವನ್ನು ಉದ್ದಾರ ಮಾಡ್ತೀವಿ ಅಂತಿದ್ದಾರೆ. ಆದರೆ ಮುಂದಿನ ಪರಿಣಾಮ ?

ವಿಶ್ವ ಹಿರಿದೋ ? ನಕ್ಷತ್ರ ಹಿರಿದೋ ??

ಬಹುತೇಕ ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಈ ವಿಶ್ವದ ಸೃಷ್ಟಿಯಾಗಿದ್ದು ( ಮಹಾಸ್ಪೋಟದ ಮೂಲಕ ) ೧೩.೮ ಬಿಲಿಯನ್‌ ವರ್ಷಗಳ ಹಿಂದೆ. ಈಗ ಅಸ್ತಿತ್ವದಲ್ಲಿ ಇರುವ ವಸ್ತು, ಕಪ್ಪು ವಸ್ತು, ಕಪ್ಪು ಶಕ್ತಿ - ಹೀಗೆ ಎಲ್ಲವೂ ೧೩.೮ ಬಿಲಿಯನ್‌ ವರ್ಷದ ಹಿಂದಷ್ಟೇ ಸೃಷ್ಟಿ ಆದವು ಎನ್ನಲಾಗಿದೆ. ಅಂದರೆ ಅದಕ್ಕಿಂತ ಮೊದಲು ಈಗ ಇರುವ ಏನೊಂದೂ ಇರಲಿಲ್ಲ. ಆದರೆ ಅದೇ ವಿಜ್ಞಾನಿಗಳಿಗೆ ಈಗ ಬಹು ದೊಡ್ಡ ಸಮಸ್ಯೆಯೊಂದು ಎದುರಾಗಿದೆ. ಅದೇನೆಂದರೆ ಸುಮಾರು ೧೪.೫ ಬಿಲಿಯನ್‌ ವರ್ಷ ವಯಸ್ಸಿನ ಕೆಲವು ನಕ್ಷತ್ರಗಳನ್ನು ಇದೀಗ ಹಬಲ್‌ ಟೆಲಿಸ್ಕೋಪ್‌ ಗುರುತಿಸಿದೆ ! ವಿಶ್ವಕ್ಕಿಂತಲು ಸುಮಾರು ೦.೭ ಬಿಲಿಯನ್‌ ವರ್ಷ ಹಿರಿಯ ನಕ್ಷತ್ರಗಳು ಬಂದಿರುವುದಾದರೂ ಎಲ್ಲಿಂದ ? ಇದು ಹೇಗೆ ಸಾಧ್ಯವಾಯ್ತು ಅನ್ನೋದು ವಿಜ್ಞಾನಿಗಳ ತಲೆಬಿಸಿಗೆ ಕಾರಣವಾಗಿದೆ. ಅಂದರೆ ಇಲ್ಲಿ ಒಂದೋ ವಿಶ್ವದ ಸೃಷ್ಟಿಯ ಲೆಕ್ಕಾಚಾರ ತಪ್ಪಿರಬೇಕು. ( ೧೪.೫ ಬಿಲಿಯನ್‌ ವರ್ಷಗಳಿಗಿಂತಲೂ ಹಿಂದೆಯೇ ವಿಶ್ವವು ಸೃಷ್ಟಿಯಾಗಿರಬೇಕು. ). ಅಥವಾ ನಕ್ಷತ್ರಗಳ ವಯಸ್ಸಿನ ಲೆಕ್ಕಚಾರ ತಪ್ಪಾಗಿರಬೇಕು. ( ನಕ್ಷತ್ರಗಳ ಗಾತ್ರ, ಅವುಗಳಿಂದ ಬರುತ್ತಿರುವ ಇನ್ಫ್ರಾರೆಡ್‌ ಕಿರಣ, ಬೆಳಕಿನ ವೇವ್‌ಲೆನ್ತ್‌, ಮಾಸ್‌ ಮುಂತಾದವುಗಳ ಮೂಲಕ ನಕ್ಷತ್ರವೊಂದರ ವಯಸ್ಸನ್ನು ಅಳೆಯಲಾಗುತ್ತಿದೆ. ) ಇವೆರಡರಲ್ಲಿ ಯಾವ ಲೆಕ್ಕ ತಪ್ಪಾಗಿದೆ ಅನ್ನೋದನ್ನ ಈಗ ಪತ್ತೆ ಹಚ್ಚುವ ಕೆಲಸ ನಡೆದಿದೆಯಂತೆ. 

ವೇಶ್ಯಾವೃತ್ತಿ ಕಾನೂನುಬದ್ದಗೊಳ್ಳಲಿ...

ಕೆಲವು ವರ್ಷದ ಹಿಂದೆ ಒಬ್ಬರು ಕನ್ನಡದ ನಟಿ ( ತಾರಾ ಅವರು ಅಂತ ನೆನಪು ) "ವೇಶ್ಯಾವಾಟಿಕೆ ಯನ್ನು ಕಾನೂನು ಬದ್ಧಗೊಳಿಸಬೇಕು" ಅಂತ ಹೇಳಿದ್ದರು. ಅದನ್ನು ಅಂದು ಬಹಳಷ್ಟು ಮಂದಿ ವಿರೋಧ ಮಾಡಿದ್ದರು. ಅದನ್ನು ನಾನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಹಂಚಿಕೆ ಮಾಡಿದಾಗ ಅಲ್ಲಿಯೂ ತುಂಬಾ ಜನ ವಿರೋಧ ಮಾಡಿದ್ದರು. "ನಿನ್ನ ಅಕ್ಕ, ತಂಗಿ ಆ ವೃತ್ತಿಯಲ್ಲಿ ಇದ್ದಿದ್ದರೂ ಹೀಗೆ ಬೆಂಬಲ ಕೊಡುತಿದ್ಯಾ?" ಅಂತಲೂ ಕೇಳಿದ್ದರು. ವೇಶ್ಯಾವಾಟಿಕೆ ನಿರ್ಮೂಲನೆ ಹೇಗೆ ? ಅಂತ ತಿರುಗಿ ಕೇಳಿದರೆ ಅದಕ್ಕೆ ಕಾನೂನು ಇದೆಯಲ್ಲ ಅಂದಿದ್ದರು..  ಅದಾಗಿ ಐದಾರು ವರ್ಷಗಳೇ ಕಳೆದಿವೆ. ಈಗಲೂ ವೇಶ್ಯಾವಾಟಿಕೆ ಯಲ್ಲಿ ನಮ್ಮ ರಾಜ್ಯದಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ ಅನ್ನೋ ವರದಿ ಬಂದಿದೆ !! ವೇಶ್ಯಾವಾಟಿಕೆ ವಿರೋಧಿ ಕಾನೂನು ಹಾಗೆಯೇ ಇದೆ, ಆದರೆ ಆ ದಂದೆ ಮಾತ್ರ ನಿಂತಿಲ್ಲ. ಅದರಲ್ಲಿ ತೊಡಗಿಸಿಕೊಂಡಿರುವ ಆ ಲಕ್ಷಕ್ಕೂ ಹೆಚ್ಚು ಮಹಿಳೆಯರ ಮಾಹಿತಿ ಯಾರ ಬಳಿಯೂ ಇಲ್ಲ ! ಅವರಿಂದ ಬರುವ ಆದಾಯ ಅವರಿಗೇ ಸಿಗುತ್ತಿದೆ ಅಂತ ಯಾರಾದರೂ ಹೇಳಲು ಸಾದ್ಯವೇ ? ವಿಟರಿಂದ, ಪೊಲೀಸರಿಂದ ಮತ್ತು ದಂದೆ ನಡೆಸುವವರಿಂದ ನಡೆಯುತ್ತಿರುವ ದೌರ್ಜನ್ಯವನ್ನು ಯಾರು ತಡೆಯಲು ಸಾಧ್ಯ ಹೇಳಿ. 'ಕೊಳಕು ಎಷ್ಟಾದರೂ ಇರಲಿ, ಅದು ಎದುರಿಗೆ ಕಾಣಿಸದಿದ್ದರೆ ಸಾಕು' ಅನ್ನುವಂತಿದೆ ಇವರು ಹೇಳುವುದು. [ ಕೃಪೆ : ಪ್ರಜಾವಾಣಿ ೧೫ ಜುಲೈ ೨೦೧೭ ...

ಪ್ರೇಮಿಗಳು...

ಆ ಬೆಟ್ಟದ ತುದಿಯ ಬೋಳು ಮರದ ಕೆಳಗೆ ಸದಾ ಭೇಟಿ ಆಗುವ ಆ ಪ್ರೇಮಿಗಳು... ಐನ್ ಸ್ಟೈನ್ ನ ವಿಶೇಷ ಸಮಯದ ನಿಯಮ ಬಹುಶಃ ಇವರಿಗೂ ಅನ್ವಯ ಆಗಿತ್ತೋ ಏನೋ ನಮ್ಮ ಇಡೀ ಒಂದು ದಿನ ಇವರ ಪಾಲಿಗೆ ಒಂದು ಗಳಿಗೆಯಷ್ಟೂ ಆಗಿರಲಿ...

ಆಕಾಶವಾಣಿ... ವಾರ್ತೆಗಳು

ಒಂದಾನೊಂದು ಕಾಲದಲ್ಲಿ ಹಳೇ ಕಾಲದ ರೇಡಿಯೋದಲ್ಲಿ ಉಪೇಂದ್ರ ರಾವ್, ರಂಗ ರಾವ್ ಸುಧಾ ದಾಸ್ ಅವರುಗಳು ವಾರ್ತೆ ಓದುತ್ತಿದ್ದುದು ಬಹಳಾ ಚೆಂದವಿತ್ತು.. ಆರ್ಕೆ ದಿವಾಕರ ಚಿತ್ತರಂಜನ್ ದಾಸ್ ಮುಂತಾದವರ ಪ್ರದ...

"ಐಚ್ಚಿಕ" ಹೆಸರಲ್ಲಿ "ಕಡ್ಡಾಯ ಹಿಂದಿ" ಹೇರಿಕೆ

ಮೊನ್ನೆ ಮೊನ್ನೆ "ಹಿಂದಿಯಾ" ಅನ್ನೋ ಹೋಟೆಲಿಗೆ ಹೋಗಿದ್ದೆ. ತಿನ್ನಲು ಏನೇನಿದೆ ? ಅಂತ ಕೇಳಿದ್ದಕ್ಕೆ "ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಚಿತ್ರಾನ್ನ..." ಎಂಬ ಉತ್ತರ ಬಂತು. "ಇಡ್ಲಿ ಕೊಡಿ" ಅಂದೆ, "ಕ್ಷಮಿಸಿ, ಇಡ್ಲಿ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. "ದೋಸೆ ಕೊಡಿ" "ಕ್ಷಮಿಸಿ, ದೋಸೆ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. "ಚಿತ್ರಾನ್ನ ಕೊಡಿ" "ಕ್ಷಮಿಸಿ, ಚಿತ್ರಾನ್ನ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ" ಎಂಬ ಉತ್ತರ. ನನಗೆ ಬೇಕಾದ್ದು ಇಲ್ಲಿ ಸಿಗಲ್ಲ, ಸರಿ ನಾನು ಹೊರಗೆ ಹೋಗ್ತೀನಿ ಎಂದು ಎದ್ದೆ. ನನ್ನನ್ನು ತಡೆದು ಹೇಳಿದರು.. "ಏನೂ ತಿನ್ನದೆ ಹೋಗುವ ಹಾಗೆಯೇ ಇಲ್ಲ, ಇದು "ಕಡ್ಡಾಯ ತಿನ್ನಣ" "ಆದರೆ ಚಪಾತಿಯನ್ನೇ ತಿನ್ನಬೇಕು ಅಂತ ಕಡ್ಡಾಯ ಮಾಡ್ತಿದೀರಲ್ಲ? ಇದು ಚಪಾತಿ ಹೇರಿಕೆ ಅಲ್ವಾ ?" "ಇಲ್ಲ, ಚಪಾತಿ ತಿನ್ನಬೇಕು ಅನ್ನೋದು ಐಚ್ಚಿಕ ವಿಷಯ. ಯಾರಿಗೂ ಹೇರಿಕೆ ಮಾಡುತ್ತಿಲ್ಲ. ಜೊತೆಗೆ ಬೇರೆ ಬೇರೆ ತಿನಿಸುಗಳೂ ಇವೆಯಲ್ಲ, ನಿಮಗೆ ಇಷ್ಟ ಬಂದಿದ್ದನ್ನ ತಿನ್ನಬಹುದು." "ಆದರೆ ಬೇರೆ ತಿನಿಸು ಯಾವುದೂ ತಯಾರಿಲ್ಲವಲ್ಲ ?" "ಹೌದು, ಹಾಗಾಗಿ ನೀವು ಚಪಾತಿ ತಿನ್ನಲೇ ಬೇಕ...

ಜಗತ್ತನ್ನು ಬೆಳಗಿದ ಅನಾಮಿಕ ವಿಜ್ಞಾನಿ : ನಿಕೋಲ ಟೆಸ್ಲಾ !

ಅದು ೧೮೮೪, ಕ್ರೊವೇಶಿಯಾದ ೨೮ ವರ್ಷದ ಒಬ್ಬ ಯುವಕ ತನ್ನ ಅಪ್ರತಿಮ ಬುದ್ದಿವಂತಿಕೆಯನ್ನು ಬಸಿದು ಹಣ ಸಂಪಾದಿಸುವ ಯೋಚನೆಯೊಂದಿಗೆ ಅಮೆರಿಕಾಕ್ಕೆ ಪ್ರವೇಶಿಸಿ ಅಲ್ಲಿ ಅದಾಗಲೇ ಪ್ರಸಿದ್ದಿ ಪಡೆದಿದ್ದ ಇನ್ನೊಬ್ಬ ಯುವ ವಿಜ್ಞಾನಿಯ ಎದುರು ತಾನೇ ಬರೆದುಕೊಂಡು ತಂದಿದ್ದ ಚಿಕ್ಕದೊಂದು ಪತ್ರವನ್ನು ಹಿಡಿದು ನಿಲ್ಲುತ್ತಾನೆ. ಎದುರಿಗಿದ್ದ ವಿಜ್ಞಾನಿಯೋ ಅದಾಗಲೇ ಜಗತ್ಪ್ರಸಿದ್ದಿ ಪಡೆದಿದ್ದ ಮತ್ತು ವಿದ್ಯುತ್‌ ಜನರೆಟರ್‌ಗಳನ್ನು ತಯಾರಿಸಿ ಮಾರುವ ಅತಿ ದೊಡ್ಡ ಸಂಸ್ಥೆಯ ಒಡೆಯ ಕೂಡಾ. ಈ ಯುವಕ ನೀಡಿದ ಆ ಪತ್ರದಲ್ಲಿ ಇದ್ದುದು ಎರಡೇ ಸಾಲು... "ಈ ಜಗತ್ತಿನಲ್ಲಿ ಈಗ ಇರುವುದು ಇಬ್ಬರೇ ಜೀನಿಯಸ್‌ಗಳು. ಅದರಲ್ಲಿ ಒಬ್ಬರು ನೀವು, ಮತ್ತೊಬ್ಬ ನಾನು!" ಈತನ ಕ್ರಿಯಾಶೀಲತೆಯನ್ನು ಕಂಡು ಬೆರಗಾದ ಆ ವಿಜ್ಞಾನಿ "ನಿನ್ನ ಯೋಜನೆಗಳನ್ನು ಇಲ್ಲಿ ಮಾಡು, ನಾವು ತಯಾರಿಸುತ್ತಿರುವ ಜನರೇಟರ್‌ಗಳ ರೀ-ಡಿಸೈನ್‌ ಮಾಡಿ ಕೊಡು, ನಿನಗೆ ೫೦ ಸಾವಿರ ಡಾಲರ್‌ ಬೋನಸ್‌ ಕೊಡುತ್ತೇನೆ" ಎಂದು ಭರವಸೆ ನೀಡಿದ. ೫೦ ಸಾವಿರ ಡಾಲರ್‌ ಅನ್ನುವುದು ಆಗ ಊಹೆಗೂ ನಿಲುಕದ ದೊಡ್ಡ ಮೊತ್ತವಾಗಿತ್ತು! ಈಗಲೂ ಕೂಡಾ. ಅತ್ಯಂತ ಕುಶಿಗೊಂಡ ಆ ಬಡ ಯುವಕ ಬೇಗ ಬೇಗನೆ ಅನೇಕ ಜನರೆಟರ್‌ಗಳ ಮಾಡೆಲ್‌ಗಳನ್ನು ಮಾಡಿ ಆ ವಿಜ್ಞಾನಿಗೆ ತೋರಿಸಿದ. ಎಲ್ಲವೂ ಈ ಮೊದಲು ಅವರು ತಯಾರಿಸುತ್ತಿದ್ದ ಜನರೇಟರ್‌ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರು ಮಾಡಬಹುದಾದಂತಹ ಮಾಡೆಲ್‌ಗಳು. ಹೀಗೆ ತನ...